ಧರ್ಮಸ್ಥಳದಲ್ಲಿ ಎಸ್ಐಟಿ ನಡೆಸುತ್ತಿರುವ ಉತ್ಖನನ ಕಾರ್ಯಾಚರಣೆ 5 ದಿನ ಪೂರ್ಣಗೊಳಿಸಿದೆ. ಆದರೆ ನಾಳೆ (ಆ.02) ಉತ್ಖನನ ಕಾರ್ಯಾಚರಣೆ ಅನುಮಾನವಾಗಿದೆ. 

ಮಂಗಳೂರು (ಆ.02) : ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮುಸುಕುದಾರಿ ದೂರುದಾರ ಗುರುತಿಸಿದ ಸ್ಥಳದಲ್ಲಿ ಉತ್ಖನನ ಕಾರ್ಯಾಚರಣೆ ತೀವ್ರಗೊಂಡಿದೆ. ಐದನೇ ದಿನದ ಕಾರ್ಯಾಚರಣೆ ಅಂತ್ಯಗೊಂಡಿದೆ. 10 ಪಾಯಿಂಟ್ ಅಗೆತ ಕಾರ್ಯ ಪೂರ್ಣಗೊಂಡಿದೆ. 10 ಪಾಯಿಂಟ್‌ಗಳಲ್ಲಿ ಕೇವಲ 6ನೇ ಪಾಯಿಂಟ್‌ನಲ್ಲಿ ಮಾತ್ರ ಕಳೇಬರ ಪತ್ತೆಯಾಗಿತ್ತು. ಇದೀಗ ನಾಳೆ (ಆ.02) ಎಸ್ಐಟಿ ಉತ್ಖನನ ಕಾರ್ಯಾಚರಣೆ ನಡೆಯುವುದು ಬಹುತೇಕ ಅನುಮಾನವಾಗಿದೆ.

ಆಗಸ್ಟ್ 3ರಂದು ಉತ್ಖನನ ಕಾರ್ಯಾಚರಣೆಗೆ ಬ್ರೇಕ್ ಸಾಧ್ಯತೆ

ಆಗಸ್ಟ್ 3 ರಂದು ಉತ್ಖನನ ಕಾರ್ಯಾಚರಣೆ ನಡೆಯುವುದು ಬಹುತೇಕ ಅನುಮಾನವಾಗಿದೆ. ನಾಳೆ (ಆ.03) ಭಾನುವಾರ ಆಗಿರುವ ಕಾರಣ ಇಲಾಖಾ ಅಧಿಕಾರಿಗಳಿಗೆ ರಜಾ ದಿನವಾಗಿದೆ. ಸರ್ಕಾರಿ ರಜಾ ದಿನದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳು, ಅಧಿಕಾರಿಗಳಿಗೆ ರಜೆ ಇರಲಿದೆ. ಎಸಿ ಸೇರಿದಂತೆ ಕಂದಾಯ ಇಲಾಖೆ, ಎಫ್ ಎಸ್ ಎಲ್, ಸೋಕೋ ಅಧಿಕಾರಿಗಳಿಗೆ ರಜೆ ಇರಲಿದೆ. ಹೀಗಾಗಿ ಉತ್ಖನನ ಕಾರ್ಯಾಚರಣೆಗೆ ತೊಡಕಾಗಿದೆ. ಹೀಗಾಗಿ ನಾಳೆ ಧರ್ಮಸ್ಥಳದಲ್ಲಿ ಉತ್ಖನನ ಕಾರ್ಯಾಚರಣೆ ನಡೆಯುವುದು ಅನುಮಾನವಾಗಿದೆ.

ದಾಖಲೆ ಪರೀಶೀಲನೆ ನಡೆಸಲಿದೆ ಎಸ್ಐಟಿ

ಭಾನುವಾರ ಸರ್ಕಾರಿ ಇಲಾಖೆ ಅಧಿಕಾರಿಗಳಿಗೆ ರಜಾ ದಿನವಾಗಿರುವ ಕಾರಣ ಧರ್ಮಸ್ಥಳದಲ್ಲಿ ಉತ್ಖನನ ಕಾರ್ಯಾಚರಣೆ ಅನುಮಾನವಾಗಿದೆ. ಆದರೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಗ್ರಾಮ ಪಂಚಾಯಿತಿ ಧರ್ಮಸ್ಥಳದಿಂದ ಸಂಗ್ರಹಿಸಿರುವ ಕಡತ, ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಿಂದ ಸಂಗ್ರಹಿಸಿದ ದಾಖಲೆಗಳನ್ನು ಎಸ್ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಧರ್ಮಸ್ಥಳದಲ್ಲಿ ಅನಾಥ ಶವಗಳ ಹೂತ ಕುರಿತು ಎಲ್ಲಾ ದಾಖಲೆಯನ್ನು ಎಸ್ಐಟಿ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ.

ದೂರುದಾರ ಗುರುತಿಸಿದ 13 ಪಾಯಿಂಟ್‌ಗಳಲ್ಲಿ 10 ಪೂರ್ಣ

ಮುಸುಕುದಾರಿ ದೂರುದಾರ ಆರಂಭಿಕ ಹಂತದಲ್ಲಿ 13 ಪಾಯಿಂಟ್ ಗುರುತಿಸಿದ್ದಾನೆ. ಈ 13 ಪಾಯಿಂಟ್‌ಗಳಲ್ಲಿ 50ಕ್ಕೂ ಹೆಚ್ಚೂ ಶವಗಳನ್ನು ಹೂತಿರುವುದಾಗಿ ಹೇಳಿದ್ದ. 13 ಸ್ಥಳಗಳ ಪೈಕಿ ಐದನೇ ದಿನದ ಅಂತ್ಯದ ವೇಳೆ 10 ಪಾಯಿಂಟ್‌ನಲ್ಲಿ ಉತ್ಖನನ ಪೂರ್ಣಗೊಂಡಿದೆ. 10 ಪಾಯಿಂಟ್ ಪೈಕಿ 6ನೇ ಪಾಯಿಂಟ್‌ನಲ್ಲಿ ಕಳೇಬರ ಪತ್ತೆಯಾಗಿದೆ. ಈ ಕಳೇಬರವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನುಳಿದ 9 ಪಾಯಿಂಟ್‌ಗಳಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಇಂದು ಅಂತ್ಯಗೊಂಡ 10ನೇ ಪಾಯಿಂಟ್‌ನಲ್ಲಿ ಮೂರು ಶವ ಹೂತಿರುವುದಾಗಿ ದೂರುದಾರ ಹೇಳಿದ್ದ. ಆದರೆ ಯಾವದೇ ಕಳೇಬರ ಪತ್ತೆಯಾಗಿಲ್ಲ.

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ ದೂರುದಾರ ಗುರುತಿಸಿದ ಒಟ್ಟು 13 ಸ್ಥಳಗಳಿವೆ. ಇಲ್ಲಿ ಕಾರ್ಯಾಚರಣೆಗೆ ಮಳೆ ತೀವ್ರ ಅಡ್ಡಿಯಾಗುತ್ತಿದೆ. ಆದರೆ ಕಾರ್ಮಿಕರು, ಜೆಸಿಬಿ ಬಳಸಿ ಕಾರ್ಯಾಚರಣೆ ನಡಸಲಾಗುತ್ತಿದೆ.