ಧರ್ಮಸ್ಥಳದಲ್ಲಿ ದೂರುದಾರ ಗುರುಸಿತಿದ 10ನೇ ಪಾಯಿಂಟ್ ಕಾರ್ಯಾಚರಣೆ ಅಂತ್ಯಗೊಂಡಿದೆ. ಅನಾಮಿಕ 10ನೇ ಪಾಯಿಂಟ್‌ನಲ್ಲಿ ಮೂರು ಶವ ಹೂತಿಟ್ಟಿರುವುದಾಗಿ ಹೇಳಿದ್ದಾನೆ. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ

ಧರ್ಮಸ್ಥಳ (ಆ.02) ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ವಿಚಾರಣೆ ತೀವ್ರವಾಗಿ ನಡೆಯುತ್ತಿದೆ. ಮುಸುಕುದಾರಿ ದೂರುದಾರ ಸೂಚಿಸಿದ 13 ಸ್ಥಳಗಳಲ್ಲಿ ಇದೀಗ 10ನೇ ಸ್ಥಳದ ಕಾರ್ಯಾಚರಣೆ ಅಂತ್ಯಗೊಂಡಿದೆ.ಮುಸುಕುದಾರಿ ದೂರುದಾರ 10ನೇ ಪಾಯಿಂಟ್‌ನಲ್ಲಿ ಮೂರು ಶವಗಳನ್ನು ಹೂತುಹಾಕಲಾಗಿದೆ ಎಂದು ಎಸ್ಐಟಿ ವಿಚಾರಣೆಯಲ್ಲಿ ಹೇಳಿದ್ದ. ಇದರಂತೆ 10ನೇ ಪಾಯಿಂಟ್ ಉತ್ಖನನ ಕಾರ್ಯಾಚರಣೆ ನಡೆಸಲಾಗಿದೆ. ಭಾರಿ ಮಳೆ ನಡುವೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಒಂದೂ ಕಳೇಬರ ಪತ್ತೆಯಾಗಿಲ್ಲ. ಹೀಗಾಗಿ 10ನೇ ಪಾಯಿಂಟ್ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ.

10ನೇ ಪಾಯಿಂಟ್ ಉತ್ಖನನ ಅಂತ್ಯ

ಮುಸುಕುದಾರಿ ದೂರುದಾರ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿದ್ದೇನೆ. ಪೊಲೀಸ್ ತನಿಖೆ ಮಾಡಿದರೆ ತಾನೂ ಹೂತಿಟ್ಟ ಶವದ ಸ್ಥಳ ತೋರಿಸುವುದಾಗಿ ಹೇಳಿದ್ದ. ಇದರಂತೆ ಎಸ್ಐಟಿ ಅಧಿಕಾರಿಗಳು ದೂರುದಾರನ ವಿಚಾರಣೆ ನಡೆಸಿತ್ತು. ಬಳಿಕ ದೂರುದಾರ ಗುರುತಿಸಿದ ಸ್ಥಳದಲ್ಲಿ ಉತ್ಖನನ ಕಾರ್ಯ ಆರಂಭಗೊಂಡಿತ್ತು. 13 ಸ್ಥಳಗಳ ಪೈಕಿ ಇದೀಗ 10ನೇ ಸ್ಥಳದ ಅಗೆತೆ ಕಾರ್ಯ ಅಂತ್ಯಗೊಂಡಿದೆ. ಇಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. 6 ಅಡಿ ಅಗೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಹೀಗಾಗಿ ಕಾರ್ಯಾಚರಣೆ ಅಂತ್ಯಗೊಳಿಸಿದ್ದಾರೆ. ಅಗೆದಿರುವ ಗುಂಡಿಯನ್ನು ಕಾರ್ಮಿಕರು ಮುಚ್ಚಿದ್ದಾರೆ.

ಐದನೇ ದಿನದ ಕಾರ್ಯಾಚರಣೆ ಅಂತ್ಯ

ಕಾರ್ಯಾಚರಣೆಯ ಐದನೆ ದಿನವಾದ ಇಂದು 10ನೇ ಸ್ಪಾಟ್ ಅಗೆತದ ಬಳಿಕ ಅಂತ್ಯಗೊಳಿಸಲಾಗಿದೆ. ಕಾರ್ಯಾಚರಣೆ ಅಂತ್ಯಗೊಳಿಸಿದ ಎಸ್ಐಟಿ ತಂಡ ಮುಸುಕುದಾರಿ ದೂರುದಾರನ ಜೊತೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಮರಳಿದೆ.

ಸ್ಪಾಟ್ 9ರಲ್ಲೂ ಯಾವವುದೇ ಕಳೇಬರ ಪತ್ತೆ ಇಲ್ಲ

ಇಂದು ಎಸ್ಐಟಿ ಅಧಿಕಾರಿಗಳು ಮುಸುಕುದಾರಿ ದೂರುದಾರನ ಜೊತೆಗೆ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ತನಿಖಾ ಸ್ಥಳಕ್ಕೆ ಆಗಮಿಸಿದ್ದರು. ಬಳಿಕ ಸ್ಪಾಟ್ 9ರಲ್ಲಿ ಉತ್ಖನನ ಕಾರ್ಯಾಚರಣೆ ಆರಂಭಗೊಂಡಿತ್ತು. ಸ್ನಾನಘಟ್ಟದ 500 ಮೀಟರ್ ದೂರದಲ್ಲಿರುವ 9ನೇ ಸ್ಪಾಟ್‌ನಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಬಳಿಕ ಊಟದ ವಿರಾಮ ನೀಡಲಾಗಿತ್ತು. ಊಟದ ವಿರಾಮದ ಬಳಿಕ 10ನೇ ಸ್ಪಾಟ್ ಕಾರ್ಯಾಚರಣೆ ನಡೆಸಲಾಗಿತ್ತು.

10 ಸ್ಥಳಧಲ್ಲಿ 6ನೇ ಪಾಯಿಂಟ್‌ನಲ್ಲಿ ಕಳೇಬರ ಪತ್ತೆ

ದೂರುದಾರ ಒಟ್ಟ 13 ಸ್ಥಳಗಳನ್ನು ಗುರುತಿಸಿದ್ದಾನೆ. ಪ್ರತಿ ಸ್ಥಳದಲ್ಲೂ ಹೂತಿಟ್ಟ ಶವಗಳ ಮಾಹಿತಿಯನ್ನೂ ಎಸ್ಐಟಿ ಅಧಿಕಾರಿಗಳಿಗೆ ನೀಡಿದ್ದಾನೆ. ಇದರಂತೆ ಎಸ್ಐಟಿ ಅಧಿಕಾರಿಗಳು ಒಂದರ ಹಿಂದೆ ಒಂದರಂತೆ ಉತ್ಖನನ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ 10 ಸ್ಥಳದ ಕಾರ್ಯಾಚರಣೆ ಅಂತ್ಯಗೊಂಡಿದೆ. ಈ ಪೈಕಿ 10ರಲ್ಲಿ 6ನೇ ಸ್ಪಾಟ್‌ನಲ್ಲಿ ಕಳೇಬರ ಪತ್ತೆಯಾಗಿತ್ತು. 6ನೇ ಸ್ಥಳದಲ್ಲಿ ಸಿಕ್ಕ 13 ಮೂಳೆಗಳನ್ನು ವೈದ್ಯರು, ಪೊಲೀಸರು ಹಾಗೂ ಅಧಿಕಾರಿಗಳ ತಂಡ ಸಂಗ್ರಹಿಸಿ ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಇತ್ತ ಸಿಕ್ಕ ಕಳೇಬರದ ಯಾವುದೇ ದಾಖಲಾತಿ ಇದೆಯಾ ಎಂದು ಧರ್ಮಸ್ಥಳ ಪಂಚಾಯಿತಿಯಲ್ಲಿ ದಾಖಲೆಯನ್ನು ಎಸ್ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಇನ್ಸ್‌ಪೆಕ್ಟರ್ ಮಂಜುನಾಥ್ ವಿರುದ್ಧ ಆರೋಪ

ಎಸ್ಐಟಿ ಇನ್ಸ್‌ಪೆಕ್ಟರ್ ಮಂಜುನಾಥ್ ವಿರುದ್ದ ದೂರುದಾರ ಗಂಭೀರ ಆರೋಪ ಮಾಡಿದ್ದಾನೆ. ಇನ್ಸ್‌ಪೆಕ್ಟರ್ ಮಂಜುನಾಥ್ ಮುಸುಕುದಾರಿ ದೂರುದಾರನ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೂರು ವಾಪಸ್ ಪಡೆಯುವಂತೆ ಇನ್ಸ್‌ಪೆಕ್ಟರ್ ಮಂಜುನಾಥ್ ಒತ್ತಡ ಹೇರಿದ್ದಾರೆ. ಇನ್ನು ಬಂಧಿಸಿ ಜೈಲಿಗೆ ಹಾಕುತ್ತೇನೆ ಎಂದು ದೂರುದಾರನಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರನ ಪರ ವಕೀಲರು ಆರೋಪಿಸಿದ್ದಾರೆ. ಹೀಗಾಗಿ ಐದನೇ ದಿನದ ಕಾರ್ಯಾಚರಣೆ, ತನಿಖೆಯಿಂದ ಮಂಜುನಾಥ್ ದೂರ ಉಳಿದಿದ್ದಾರೆ. ದೂರು ಕೇಳಿಬಂದ ಹಿನ್ನಲೆಯಲ್ಲಿ ಮಂಜುನಾಥ್ ಹೊರಗಿಟ್ಟು ಎಸ್ಐಟಿ ತನಿಖೆ ಮುಂದುವರಿಸಿದೆ.