ಉಡುಪಿ(ಅ.22):  ತುಳು ನಾಡಿನ ವಿಶಿಷ್ಟ ಸಂಸ್ಕೃತಿಯಾದ ಕಂಬಳವನ್ನು ವಿರೋಧಿಸಿದ ಇದೀಗ ಮತ್ತೆ ಕೂಗು ಕೇಳಿ ಬಂದಿದ್ದು, ಪ್ರಾಣಿ ದಯಾ ಸಂಘ (ಪೆಟಾ) ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧವಾಗಿದೆ.

ಹೈ ಕೋರ್ಟ್ ಕಂಬಳವನ್ನು ಆಚರಿಸಲು ವಿರೋಧ ವ್ಯಕ್ತಪಡಿಸಿದರೂ, ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಕಳೆದೆರಡು ವರ್ಷಗಳಿಂದ ನಿರ್ವಿಘ್ನವಾಗಿ ನಡೆಯುತ್ತಿದ್ದ ಈ ಜಾನಪದ ಆಚರಣೆಗೆ ಈ ವರ್ಷ ಮತ್ತೆ ಕರಿ ನೆರಳು ಬೀಳುವ ಸೂಚನೆ ಕಾಣುತ್ತಿದೆ.

ಕಂಬಳ, ಯಕ್ಷಗಾನ ಪ್ರವಾಸೋದ್ಯಮ: ಸಿ.ಟಿ.ರವಿ ಸೂಚನೆ

ತುಳುನಾಡಿನ ಪ್ರಸಿದ್ಧ ಕಂಬಳ ಮತ್ತೊಮ್ಮೆ ಆಚರಣೆಗೆ ಬಂದಿದ್ದು, ಕೆಲವು ವಾರಗಳ ಹಿಂದಷ್ಟೇ ಮಂಗಳೂರಿನ ವಿವಿಧ ಕಡೆ ನಡೆಯುವ ಕಂಬಳದ ದಿನಾಂಕ, ಸ್ಥಳ ಸೇರಿ ವೇಳಾ ಪಟ್ಟಿ ಪ್ರಕಟವಾಗಿತ್ತು. ಆಚರಣೆಗಳ ಹೆಸರಲ್ಲಿ ಅಥವಾ ಇನ್ಯಾವುದೇ ರೀತಿಯಲ್ಲಿ ಪ್ರಾಣಿಗಳನ್ನು ಹಿಂಸಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದರೂ, ಉಡುಪಿಯ ಬರದಿ ಬೀಡು ಕಂಬಳದಲ್ಲಿ ಕೋಣಗಳನ್ನು ಓಡಿಸಿರುವ ಬಗ್ಗೆ ಪೆಟಾ ಇದೀಗ ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳೂರು: ಕಂಬಳ ವೇಳಾಪಟ್ಟಿ ಪ್ರಕಟ.

1960ರ ಪ್ರಾಣಿ ಹಿಂಸೆ ತಡೆ ಕಾಯಿದೆ ಪ್ರಕಾರ ಪ್ರಾಣಿಯನ್ನು ಹಿಂಸಿಸುವುದು ನಿಷೇಧಿಸಲಾಗಿದ್ದು, ಯಾವುದೇ ರೀತಿಯಲ್ಲಿ ಪ್ರಾಣಿಗಳಿಗೆ ನೋವು ಮಾಡುವುದನ್ನು ಕಾಯಿದೆ ವಿರೋಧಿಸುತ್ತದೆ. ಪ್ರಾಣಿಗಳನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕೆಂಬ ನಿಯಮವಿದೆ. ಆದರೆ ಬರದಿ ಬೀಡಿನ ಕಂಬಳದಲ್ಲಿ ಕೋಣಕ್ಕೆ ಹಿಂಸಿಸಲಾಗುತ್ತದೆ ಎಂದು ಆರೋಪಿಸಿ, ಪೆಟಾ ವಿರೋಧ ವ್ಯಕ್ತಪಡಿಸಿದೆ. ಪೆಟಾ ನಡೆಗೆ ತುಳು ನಾಡಿನ ಮಂದಿಯೂ ಸೋಷಿಯಲ್ ಮೀಡಿಯಾದಲ್ಲಿ ವಿಧವಿಧವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದೀಗ ಪೀಪಲ್ ಫಾರ್ ಎಥಿಕಲ್ ಟ್ರೀಟ್ ಮೆಂಟ್ ಫಾರ್ ಅನಿಮಲ್ (ಪೆಟಾ ) ಸಂಘಟನೆ ಕಂಬಳದ ಚಿತ್ರ, ವಿಡಿಯೋ ಸಹಿತ ಸಂಕ್ಷಿಪ್ತ ವರದಿ ತಯಾರಿಸಿದ್ದು, ಈ ಮೂಲಕ ಕಂಬಳವನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. 

ಹೆದರಿಕೊಂಡಿದ್ದ ಕೋಣಗಳಿಗೆ ಮತ್ತೆಯೂ ಜೋರಾಗಿ ಮರದ ಕೋಲುಗಳಿಂದ ಹೊಡೆಯಲಾಗುತ್ತಿತ್ತು. ಒಂದು ಕೋಣಕ್ಕೆ ಹೊಡೆದ ರಭಸಕ್ಕೆ ಕೋಲುಗಳೇ ಮುರಿದು ಹೋಗಿತ್ತು. ಕೋಣಗಳ ಮೂಗಿನ ಮೂಲಕ ಹಾಕಲಾಗುವ ಹಗ್ಗದಿಂದ ನೋವನ್ನನ್ನುಭವಿಸಿ, ನಾಲಗೆಯಿಂದ ಮುಸುಡಿಯನ್ನು ನೆಕ್ಕಿಕ್ಕೊಳ್ಳುತ್ತಿತ್ತು ಎಂದು ಪೆಟಾ ಚಿತ್ರ ಸಹಿತ ವರದಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ. 

ನಾವು ಸಲ್ಲಿಸಿದ ಅರ್ಜಿಯ ಭಾಗವಾಗಿ ಕಂಬಳವನ್ನು ನಿಷೇಧಿಸುವಂತೆ ನಾವು ನಮ್ಮ ಇತ್ತೀಚಿನ ಅಧ್ಯಯನ ವರದಿಯನ್ನು ಸಲ್ಲಿಸಿರುವುದಾಗಿ ಪೆಟಾ ಸ್ಪಷ್ಟಪಡಿಸಿದೆ.

ರಾಜಧಾನಿ ಬೆಂಗಳೂರಲ್ಲೂ ಮೇಳೈಸಲಿದೆ ಕಂಬಳ ವೈಭವ!

ಉಡುಪಿ ಜಿಲ್ಲೆಯ ಬರದಿ ಬೀಡು ಎಂಬಲ್ಲಿ ಡಿಸೆಂಬರ್ 8, 2018 ರಂದು ಹಾಗೂ ಮೂಡುಬಿದಿರೆಯಲ್ಲಿ ಡಿಸೆಂಬರ್ 1, 2018ರಂದು, ಮಂಗಳೂರಿನಲ್ಲಿ ಜನವರಿ 13, 2019 , ತಿರುವೈಲ್‌ನಲ್ಲಿ ಫೆಬ್ರವರಿ 16 2019 ರಂದು ಕಂಬಳ ನಡೆದಿದ್ದು, ಆ ಕಂಬಳಗಳ ಫೋಟೋ ಹಾಗೂ ವಿಡಿಯೋಗಳನ್ನು ವರದಿಯಲ್ಲಿ ಸೇರಿಸಲಾಗಿದೆ.

ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದು, ಮುಂದಿನ ತೀರ್ಪು ಯಾವ ರೀತಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಓಟಕ್ಕೆ ನಿಂತ್ರೆ ಮೀರಿಸುವವರೇ ಇಲ್ಲ; ಇವನೇ ಕಂಬಳದ ಸೂಪರ್ ಸ್ಟಾರ್