ಪ್ರವಾಹದಿಂದ ಸಂಪೂರ್ಣವಾಗಿ ಮನೆ ಹಾನಿಯಾದವರಿಗೆ 2.27 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ. ಬೆಳ್ತಂಗಡಿ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಪೂರ್ಣ ಹಾನಿಗೀಡಾದ 265 ಮನೆಗಳನ್ನು ಗುರುತಿಸಲಾಗಿದ್ದು, ಅವರಲ್ಲಿ 229 ಫಲಾನುಭವಿಗಳಿಗೆ ಪ್ರತಿ ಕುಟುಂಬಕ್ಕೆ 5 ಲಕ್ಷ ರು.ಗಳಂತೆ ಮೊದಲ ಕಂತಿನಲ್ಲಿ 2,27,09,800 ರು. ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ.

ಮಂಗಳೂರು(ಅ.25): ಆಗಸ್ಟ್‌ ತಿಂಗಳಲ್ಲಿ ನಡೆದ ಮಹಾ ಪ್ರವಾಹದಿಂದ ಬೆಳ್ತಂಗಡಿ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಪೂರ್ಣ ಹಾನಿಗೀಡಾದ 265 ಮನೆಗಳನ್ನು ಗುರುತಿಸಲಾಗಿದ್ದು, ಅವರಲ್ಲಿ 229 ಫಲಾನುಭವಿಗಳಿಗೆ ಪ್ರತಿ ಕುಟುಂಬಕ್ಕೆ 5 ಲಕ್ಷ ರು.ಗಳಂತೆ ಮೊದಲ ಕಂತಿನಲ್ಲಿ 2,27,09,800 ರು. ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ.

ಎನ್‌ಡಿಆರ್‌ಎಫ್‌/ ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ 1,90,200 ರು. ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಗಳಿಗೆ ಉಂಟಾದ ಹಾನಿಯ ಆಧಾರದ ಮೇಲೆ ಎ,ಬಿ,ಸಿ ವರ್ಗೀಕರಣ ಮಾಡಲಾಗಿದೆ. ಸಂಪೂರ್ಣವಾಗಿ ಹಾನಿಗೀಡಾದ ಕುಟುಂಬಗಳಿಗೆ 5 ಲಕ್ಷ ರು. ದೊರೆತ ಬಳಿಕ ಮನೆ ಬಾಡಿಗೆ ರೂಪದಲ್ಲಿ ಪ್ರತಿ ತಿಂಗಳೂ (10 ತಿಂಗಳವರೆಗೆ) 5 ಸಾವಿರ ರು. ಮನೆ ಬಾಡಿಗೆ ಅವರ ಖಾತೆಗೆ ಜಮೆಯಾಗಲಿದೆ ಎಂದಿದ್ದಾರೆ.

'ನನಗೊಂದು ಮನೆ ಕೊಡಿ', ಆಶ್ರಯಕ್ಕಾಗಿ ಅಂಗಲಾಚಿದ ವೃದ್ಧೆ..!

‘ಬಿ’ ವರ್ಗದ ಸಂತ್ರಸ್ತರ ಸಂಖ್ಯೆ 180 ಆಗಿದ್ದು, ಒಟ್ಟು 179 ಫಲಾನುಭವಿಗಳಿಗೆ (ತಲಾ 1 ಲಕ್ಷ ರು.) ಮೊದಲನೇ ಕಂತಿನಲ್ಲಿ 44,00,000 ರು. ಬಿಡುಗಡೆಯಾಗಿದೆ. ಎನ್‌ಡಿಆರ್‌ಎಫ್‌/ ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ 65 ಸಾವಿರ ರು. ಬಿಡುಗಡೆಯಾಗಿದೆ ಎಂದಿದ್ದಾರೆ.

‘ಸಿ’ ವರ್ಗದ ಫಲಾನುಭವಿಗಳು 263 ಇದ್ದು, 142 ಫಲಾನುಭವಿಗಳಿಗೆ (ತಲಾ 50 ಸಾವಿರ ರು.) 35,39,600 ರು. ಪರಿಹಾರ ಮೊತ್ತ ಬಿಡುಗಡೆಯಾಗಿದೆ. ಅವರಲ್ಲಿ ಅನುಮೋದಿತ 121 ಫಲಾನುಭವಿಗಳಿಗೆ ತಹಸೀಲ್ದಾರರು 30,25,000 ರು. ಪಾವತಿಸಿದ್ದಾರೆ. ಎನ್‌ಡಿಆರ್‌ಎಫ್‌/ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ 10,400 ರು. ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಹುಲಿ ಕುಣಿತಕ್ಕೂ ತಟ್ಟಿದ ಆರ್ಥಿಕ ಹಿಂಜರಿತದ ಬಿಸಿ