Asianet Suvarna News Asianet Suvarna News

ಮೂಡುಬಿದಿರೆಯಿಂದ ‘ವಿಲೇಜ್’ ಟಿವಿ ಆರಂಭ, ಸೋಶಿಯಲ್ ಮೀಡಿಯಾದಲ್ಲಿ ಹವಾ ಖಂಡಿತ!

ಮೂಡುಬಿದಿರೆಯ ಆಳ್ವಾಸ್ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ‘ವಿಲೇಜ್ ಟಿವಿ’/ ಗ್ರಾಮೀಣ ವಿಶಿಷ್ಟ ಆಚರಣೆಗಳ ಕಿರುಚಿತ್ರ ನಿರ್ಮಾಣ/ ಹೊಸಂಗಡಿ ಗ್ರಾಪಂ ಮೊದಲ ಆಯ್ಕೆ

Moodbidri alvas college mass communication students initiative village tv
Author
Bengaluru, First Published Oct 24, 2019, 12:33 AM IST

ಮೂಡುಬಿದಿರೆ[ಅ.23]  ಪ್ರಪ್ರಥಮ ಬಾರಿಗೆ ಮೂಡುಬಿದಿರೆಯ ಆಳ್ವಾಸ್ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು  ‘ವಿಲೇಜ್ ಟಿವಿ’ ಎಂಬ ವಿನೂತನ ಪರಿಕಲ್ಪನೆಯನ್ನು ಲೋಕಾರ್ಪಣೆಗೊಳಿಸುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ವಿಶಿಷ್ಟ ಆಚರಣೆಗಳ ಕುರಿತಾದ ಕಿರುಚಿತ್ರಗಳನ್ನು ಚಿತ್ರೀಕರಿಸಿ ‘ವಿಲೇಜ್ ಟಿವಿ’ ಯೂಟ್ಯೂಬ್ ಚಾನಲ್‌ನಲ್ಲಿ ಹಾಗೂ  ಈ ಕಾರ‌್ಯ ಯೋಜನೆಯ ಪಾಲುದಾರ ಸಂಸ್ಥೆಗಳಾದ ಸ್ಪಿಯರ್ ಹೆಡ್ ಮೀಡಿಯಾ, ಗ್ಲೋಬಲ್ ಟಿವಿ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತದೆ.  

ಸಮುದಾಯ ಬಾನುಲಿ ಆಧಾರಿತ ಮಾದರಿಯಲ್ಲಿ ಕಾರ್ಯ ನಿರ್ವಹಿಸುವ ‘ವಿಲೇಜ್ ಟಿವಿ’ ಅಕ್ಟೋಬರ್ 24 ರಂದು ಲೋಕಾರ್ಪಣೆಗೊಳ್ಳಲಿದೆ.  ಈ ಯೋಜನೆಯ ಅಡಿಯಲ್ಲಿ ಸ್ಥಳೀಯ ಯುವಕರಿಗೆ ಪತ್ರಿಕೋದ್ಯಮದ ಕುರಿತಾಗಿ ತರಬೇತಿ ನೀಡಿ ಜತೆಗೆ  ಆ ಗ್ರಾಮದ ಸಕಾರಾತ್ಮಕ ಪ್ರಗತಿಗಳ ಕುರಿತು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಅವುಗಳನ್ನು ಕಳುಹಿಸುವ ಜವಾಬ್ದಾರಿ ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ ಪ್ರಥಮ ಹಂತದಲ್ಲಿ 2007ರಲ್ಲಿ ರಾಷ್ಟ್ರಮಟ್ಟದಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಪಡೆದ ಹೊಸಂಗಡಿ ಗ್ರಾಮ ಪಂಚಾಯತ್ ಅನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ. 

ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಪ್ರಸಾದ್ ಶೆಟ್ಟಿ ಮಾತನಾಡಿ, ‘ಈ ಗ್ರಾಮದ ಜನರು ಜವಾಬ್ದಾರಿಗೆ ನಾನು‘ ಎಂಬ ಧ್ಯೇಯಯೊಂದಿಗೆ ಹಲವಾರು ಯೋಜನೆಗಳನ್ನು ತಮ್ಮ ಗ್ರಾಮದಲ್ಲಿ ಆಳವಡಿಸಿ ಯಶಸ್ವಿಯಾಗಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ನನ್ನ ಮನೆ ನನ್ನ ರಸ್ತೆ, ನನ್ನ ಮನೆ ಸ್ವಚ್ಛ ಮನೆ, ನನ್ನ ಅಂಗಡಿ ಸ್ವಚ್ಛ ಅಂಗಡಿ, ನನ್ನ ಗಿಡ ನನ್ನ ಮರದಂತಹ ಉತ್ತಮ ಅಭ್ಯಾಸಗಳು. ಅಲ್ಲದೆ ಗ್ರಾಮಸ್ಥರು ಯಾವುದೇ  ಶುಭ ಸಂದರ್ಭಗಳಲ್ಲಿ ಮದ್ಯವನ್ನು ಸೇವಿಸುವುದಿಲ್ಲ ಎಂಬ ಪ್ರಮಾಣ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ. 

ಕೋಡಂಗಲ್ಲು... ಆಧಾರವೇ ಇಲ್ಲದೆ ನಿಂತಿದ ನೋಡ ಬನ್ನಿ

ದುಶ್ಚಟ ಮುಕ್ತ, ವ್ಯಾಜ್ಯ ಮುಕ್ತ ಶಾಂತಿ ಸೌಹಾರ್ದ ಕುಟುಂಬವನ್ನು ಗುರುತಿಸಿ ಜನಾಭಿಪ್ರಾಯದ ಮೂಲಕ ಮಾಹಿತಿ  ಸಂಗ್ರಹಿಸಿ ಆಯ್ಕೆಗೊಂಡ ಕುಟುಂಬವನ್ನು ಸಮುದಾಯದ ಗೌರವಾನ್ವಿತ ಕುಟುಂಬವೆಂದು ಪರಿಗಣಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

 ಈ ಪರಿಕಲ್ಪನೆಯು ಸಮಾಜದ ಜನರಿಗೆ ಉತ್ತಮ ಅಭ್ಯಾಸಗಳ ಕುರಿತು ಅರಿವು ಮೂಡಿಸಲು ಹಾಗೂ ಇತರ ಗ್ರಾಮಗಳಲ್ಲಿ ಇಂತಹ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಲಿದೆ. ವಿಲೇಜ್ ಟಿವಿ ಎನ್ನುವುದು ಗ್ರಾಮ್ಯ ಸಮುದಾಯವನ್ನು ಸಂವಹನ ಮಾಧ್ಯಮದ ಮೂಲಕ ಸಂಯೋಜಿಸಿ, ಗ್ರಾಮದಲ್ಲಿನ ಪ್ರಗತಿಗೆ ಪೂರಕ ಕಾರ್ಯಗಳನ್ನು ನಡೆಸುವುದಾಗಿದೆ ಎಂದು ಹೇಳಿದರು.

ಇಂದು ನಮ್ಮ ಬೆಳವಣಿಗೆಯ ಮಾದರಿಗಳು ನಗರ ಕೇಂದ್ರಿಕೃತವಾಗಿವೆ.  ಆದರೆ ವಾಸ್ತವದಲ್ಲಿ  ಗ್ರಾಮೀಣಾಭಿವೃದ್ಧಿಯಾಗದೆ ಯಾವ ಅಭಿವೃದ್ಧಿಯು ಸಮತೋಲಿತ ಬೆಳವಣಿಗೆ ಎನಿಸದು.  ನಮ್ಮ ದೇಶದ ಗ್ರಾಮೀಣ ಪ್ರದೇಶಗಳು ಕೇವಲ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪತ್ತನ್ನು ಒಳಗೊಂಡಿರುವುದಲ್ಲದೇ ಆಗಾಧ ಜ್ಞಾನ ಸಂಪತ್ತನ್ನು ಒಳಗೊಂಡಿದೆ. ಗ್ರಾಮೀಣ ಪ್ರದೇಶದ ಬೌದ್ಧಿಕ ಸಂಪತ್ತನ್ನು ಜಾಗತಿಕ ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಈ ವಿಲೇಜ್ ಟಿವಿಯು  ಸಹಕಾರಿಯಾಗಲಿದೆ.

ಗ್ರಾಮೀಣ ಪ್ರದೇಶದ ಜನರು ಈ ಕಾರ್ಯವನ್ನು ಸಂತೋಷದಿಂದ ಮಾಡುತ್ತಾರೆ. ತಮ್ಮಲ್ಲಿರುವ ಜ್ಞಾನವನ್ನು ಬೇರೆಯವರ ಜೊತೆಗೆ ಹಂಚಿಕೊಂಡಾಗ ಸಿಗುವ ಲಾಭದಿಂದ ಕಂಡುಕೊಂಡ ಸಾರ್ಥಕ್ಯ ಮನೋಭಾವ  ಇನ್ನಷ್ಟು ಹುರಿದಂಬಿಸುವಂತೆ ಮಾಡುತ್ತದೆ ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಹೇಳಿದರು.

ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಪತ್ರಿಕೋದ್ಯಮದ ಸಕಾರಾತ್ಮಕ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನದ ಮೂಲಕ ತಿಳಿಸುತ್ತಿದೆ. ಈ ಯೋಜನೆಯಲ್ಲಿ ನಮ್ಮ ವಿಭಾಗವು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ನೀಡುವಲ್ಲಿ ಸಹಾಯಕಾರಿಯಾಗಿದೆ ಎಂದು ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ್ ಪೆಜತ್ತಾಯ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಜಗತ್ತಿಗೆ ಉಪಯುಕ್ತವಾದ ವೈವಿಧ್ಯಮಯ ಸಂಪತ್ತುಗಳು ಅಡಕವಾಗಿವೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ಮತ್ತು ನಗರ ಪ್ರದೇಶಗಳ ನಡುವಿನ ಅಂತರವನ್ನು ಮಾಧ್ಯಮಗಳಿಂದ ಮಾತ್ರ ಸರಿದೂಗಿಸಲು ಸಾಧ್ಯ. ವಿಶಿಷ್ಟ ಅಭಿವೃದ್ಧಿಪರ ಯೋಜನೆಗಳು ಒಗ್ಗೂಡಿದಾಗ ಹೊಸತನದ ಯೊಜನೆಗೆ ದಾರಿಯಾಗುತ್ತದೆ, ಇದರಿಂದಾಗಿ ಗ್ರಾಮೀಣ ಅಭಿವೃದ್ಧಿಯಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಸ್ಪಿಯರ್ ಹೆಡ್ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕಎನ್. ವಿ.ಪೌಲೋಸ್ ಹೇಳಿದರು.

ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಚಿತ್ರೀಕರಿಸಿದ ದೃಶ್ಯಗಳನ್ನು ಐದು ನಿಮಿಷಗಳಿಗೂ ಮೀರದಂತೆ ಎಡಿಟ್ ಮಾಡಿ ಪ್ರಕಟಿಸುತ್ತಾರೆ.  ಸಾಕ್ಷ್ಯಚಿತ್ರಗಳನ್ನು ಗ್ರಾಮದ ವೈವಿಧ್ಯಮಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಅಂಶಗಳ ಕುರಿತಾಗಿಯೂ ಮಾಡಲಾಗುತ್ತದೆ. ಸ್ಥಳೀಯ ಪ್ರವಾಸೋದ್ಯಮವನ್ನು ವೃದ್ಧಿಸುವುದು ಮತ್ತು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುವರಿ ಆರ್ಥಿಕ ಚಟುವಟಿಕೆಗಳನ್ನು ನಡೆಸುವ ನಿಟ್ಟಿನಲ್ಲಿ ಸಹಾಕಾರಿಯಾಗಿದೆ. 

ನಿವೃತ್ತ ಐಎಎಸ್ ಅಧಿಕಾರಿ ಮತ್ತು ಭಾರತ ಸರ್ಕಾರದ ಹೆರಿಟೇಜ್ ಪ್ರೊಜೆಕ್ಟ್‌ನ ಪ್ರಧಾನ ಸಲಹೆಗಾರಾದ ಡಾ. ಸಿ.ವಿ ಅನಿಲ್ ಬೋಸ್ ವಿಲೇಜ್ ಟಿವಿಯನ್ನು ಉದ್ಘಾಟಿಸಲಿದ್ದಾರೆ. ಭಾರತೀಯ ರೈಲ್ವೆ ಹಣಕಾಸು ನಿಗಮದ ಮಾಜಿ ಎಂಡಿ  ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೋ ಪಿ.ಎಸ್.ಯಡಪಡಿತ್ತಾಯ,  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉಪಸ್ಥಿತರಿರಲಿದ್ದಾರೆ. 

ಹೊಸಂಗಡಿ ಗ್ರಾಮಪಂಚಾಯತ್ ವಿಶೇಷತೆಗಳು
ಸಾರ್ವಜನಿಕ ಸಹಭಾಗಿತ್ವ, ಅಧಿಕಾರ ವಿಕೇಂದ್ರೀಕರಣ, ಸಾಮಾಜಿಕ ನ್ಯಾಯ, ಬಡತನ ನಿರ್ಮೂಲನೆ, ಶಾಶ್ವತ ಗ್ರಾಮೀಣಾಭಿವೃದ್ಧಿ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವುದು ಹೊಸಂಗಡಿ ಗ್ರಾಮಪಂಚಾಯತ್‌ನ ಮುಖ್ಯ ಉದ್ದೇಶ. 

 ಗ್ರಾಮಸ್ಥರಿಗೆ ಉಪಯುಕ್ತವಾಗುವ ಹಲವಾರು ಚಟುವಟಿಕೆಗಳನ್ನು ಕಳೆದ ಹತ್ತು ವರ್ಷಗಳಿಂದ ನಡೆಸಲಾಗುತ್ತಿದೆ. ಆರೋಗ್ಯ ಮತ್ತು ಸ್ವಚ್ಛತೆ, ಕುಡಿಯುವ ನೀರು, ರಸ್ತೆ, ವಿದ್ಯುತ್ ಶಕ್ತಿ, ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಪಂಚಾಯತ್ ಮತ್ತು ಖಾಸಗಿ ಸಹಭಾಗಿತ್ವದೊಡನೆ ವಿನೂತನ ಕಾರ್ಯಗಳನ್ನು ನಡೆಸಲಾಗುತ್ತಿದೆ.

 2005ರಲ್ಲಿ ನಡೆದ ಸಂಪೂರ್ಣ ಸ್ವಚ್ಛತಾಅಭಿಯಾನದಡಿಯಲ್ಲಿ 18 ಶಾಶ್ವತ ಪ್ಲಾಸ್ಟಿಕ್ ಸಂಗ್ರಹಣಾ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಸ್ವಚ್ಛತಾಆಂದೋಲನ ಹಾಗೂ ನಿತ್ಯದ ಸ್ವಚ್ಛತಾ ಕಾರ್ಯಗಳಲ್ಲಿ ಕಸ ಸಂಗ್ರಹಿಸಿ ವಿಂಗಡಿಸಲಾಗುತ್ತದೆ. 

Follow Us:
Download App:
  • android
  • ios