ಮೂಡುಬಿದಿರೆಯಲ್ಲಿ ಕೋಡಂಗಲ್ಲು ಎಂಬಲ್ಲಿ ಬೃಹತ್ ಬಂಡೆಯೊಂದಿದೆ. ಆಧಾರವಿಲ್ಲದೇ ನಿಂತಿರುವ ಈ ದೈತ್ಯ ಬಂಡೆಯನ್ನು ಸಾಹಸಿಗಳು ಏರುವುದೂ ಇದೆ. ಎಷ್ಟೋ ಶತಮಾನಗಳಿಂದ ಎಲ್ಲ ಬದಲಾವಣೆಗೂ ಮೂಕಸಾಕ್ಷಿಯಾಗಿ ನಿಂತಿರುವ ಈ ಕೋಡುಗಲ್ಲಿಂದ ಈ ಜಾಗಕ್ಕೆ ಕೋಡಂಗಲ್ಲು ಎಂಬ ಹೆಸರೇ ಬಂದಿದೆ. ಈ ಕಲ್ಲನ್ನು ದಾಟಿ ಮುಂದೆ ಹೋದರೆ ಬೆಟ್ಟ. ಅಲ್ಲಿ ಬಸದಿಯ  ಅವಶೇಷಗಳಿವೆ. ಇದಕ್ಕೆ ಸ್ಥಳೀಯರು 'ನಾಯಿ ಬಸದಿ' ಎನ್ನುತ್ತಾರೆ.