Asianet Suvarna News Asianet Suvarna News

ಮಂಗಳೂರು: 2,200 ಸಿಬ್ಬಂದಿಗೆ ಮತಯಂತ್ರ, ಚುನಾವಣಾ ಸಾಮಗ್ರಿ ವಿತರಣೆ

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಕಲ ಸಿದ್ಧತೆಗಳಾಗಿದ್ದು, 2,200 ಸಿಬ್ಬಂದಿಗೆ ಮತಯಂತ್ರ ಮತ್ತು ಚುನಾವಣಾ ಸಾಮಗ್ರಿ ವಿತರಣೆ ಮಾಡಲಾಗಿದೆ. ನ. 11ರಂದು ಚುನಾವಣೆ ನಡೆಯಲಿದ್ದು, ವಿಶೇಷ ಬಸ್‌ಗಳ ವ್ಯವಸ್ಥೆಯೂ ಆಗಿದೆ.

mangaluru city corporation election preparations begins
Author
Bangalore, First Published Nov 11, 2019, 2:37 PM IST

ಮಂಗಳೂರು(ನ.11): ಮಹಾನಗರ ಪಾಲಿಕೆ ಚುನಾವಣೆಗೆ ಸಕಲ ಸಿದ್ಧತೆಗಳಾಗಿದ್ದು, 2,200 ಸಿಬ್ಬಂದಿಗೆ ಮತಯಂತ್ರ ಮತ್ತು ಚುನಾವಣಾ ಸಾಮಗ್ರಿ ವಿತರಣೆ ಮಾಡಲಾಗಿದೆ. ನ. 11ರಂದು ಚುನಾವಣೆ ನಡೆಯಲಿದ್ದು, ವಿಶೇಷ ಬಸ್‌ಗಳ ವ್ಯವಸ್ಥೆಯೂ ಆಗಿದೆ.

ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರಿನ ರೊಜಾರಿಯಾ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯವೂ ನಡೆದಿದೆ. ಪಾಲಿಕೆಯ 60 ವಾರ್ಡ್ ಗಳಿಗೆ ನಾಳೆ ಮತದಾನ ನಡೆಯಲಿದ್ದು, 2,200 ಸಿಬ್ಬಂದಿಗೆ ಮತಯಂತ್ರ ಮತ್ತು ಚುನಾವಣಾ ಸಾಮಗ್ರಿ ವಿತರಿಸಲಾಗಿದೆ. ಒಟ್ಟು 448 ಬೂತ್‌ಗಳಲ್ಲಿ ಮತದಾ‌ನ ನಡೆಯಲಿದೆ.

ಕೈ - ಕಮಲ ಬಿಗ್ ಫೈಟ್: ಪಾಲಿಕೆ ಚುಕ್ಕಾಣಿ ಹಿಡಿಯೋರ‍್ಯಾರು..?

ನಾಳೆ ಬೆಳಗ್ಗೆ 7 ರಿಂದ ಸಂಜೆ 5 ರ ವರೆಗೆ ಮತದಾನ ಸಮಯ ನಿಗದಿಪಡಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.

ಮಂಗಳೂರು: ಪಾಲಿಕೆ ಚುನಾವಣೆ ಕರ್ತವ್ಯಕ್ಕೆ ಬಸ್ ನಿಯೋಜನೆ

ನಾಮಪತ್ರ ಸಲ್ಲಿಕೆ ಬಳಿಕ ಪ್ರಚಾರ ಆಖಾಡದಲ್ಲಿ ಪೂರ್ಣವಾಗಿ ತೊಡಗಿಕೊಂಡಿದ್ದ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಭಾನುವಾರ ಬೆಳಗ್ಗೆ 7 ಗಂಟೆಗೆ ಕೊನೆಗೊಂಡಿದೆ. ಮಂಗಳವಾರ ಪಾಲಿಕೆ ವ್ಯಾಪ್ತಿಯ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಫಲಿತಾಂಶ ನ.14 ರಂದು ಪ್ರಕಟವಾಗಲಿದೆ.

Follow Us:
Download App:
  • android
  • ios