ಮಂಗಳೂರು(ನ.02): ರಾಜ್ಯೋತ್ಸವಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗ ಕೂಡ ವಿಶೇಷ ಮೆರುಗು ನೀಡಿದೆ. ನಿಗಮದ ಬಸ್‌ವೊಂದರಲ್ಲಿ ಕನ್ನಡ ರಾಜ್ಯೋತ್ಸವದ ಸಲುವಾಗಿ ವಿಶೇಷ ಬಣ್ಣ ಹಾಗೂ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಭಾವಚಿತ್ರವನ್ನು ಪ್ರದರ್ಶಿಸಿರುವುದು ವಿಶೇಷ ಗಮನ ಸೆಳೆಯಿತು.

ಮಂಗಳೂರಿನ ಒಂದನೇ ಡಿಪೋಗೆ ಸೇರಿದ ಈ ಬಸ್‌ನ ಒಳಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಕನ್ನಡ ಸಾಹಿತಿಗಳ ಬಗ್ಗೆ ಭಾವಚಿತ್ರ ಸಹಿತ ವಿವರ ನೀಡಲಾಗಿದೆ. ಕನ್ನಡಿಗಳಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳು, ನಾಡು ನುಡಿಯ ವಿಶೇಷತೆಗಳನ್ನು ಪ್ರದರ್ಶಿಸಲಾಗಿದೆ.

'ಕೋಟಿ ಕೋಟಿ ಆಫರ್ ಬೇಡ ಅಂದೆ; ಕಪಾಳಕ್ಕೆ ಬಿದ್ದದ್ದು ನಿಜ ಅಂತೆ'..!.

ಬಸ್‌ನ ಹೊರಭಾಗದಲ್ಲಿ ಕನ್ನಡ ಭಾಷಾ ಜಾಗೃತಿಗಾಗಿ ‘ಕರಾವಳಿಯ ಕನ್ನಡ ತೇರು’ ಎಂದು ಬರೆಯಲಾಗಿದೆ. ಬಸ್‌ನ ಸುತ್ತ ಮಧ್ಯಭಾಗದಲ್ಲಿ ಕನ್ನಡದ ಸಾಂಕೇತಿಕ ಬಣ್ಣಗಳನ್ನು ಬಳಿಯಲಾಗಿದೆ. ಈ ವಿಶೇಷ ಅಲಂಕಾರದ ಬಸ್ ನವೆಂಬರ್ ತಿಂಗಳು ಪೂರ್ತಿ ರಾಜ್ಯದ ವಿವಿಧ ಭಾಗಗಳಿಗೆ ಮಂಗಳೂರಿನಿಂದ ಸಂಚರಿಸಲಿದೆ.

ಶುಕ್ರವಾರ ಮೊದಲ ದಿನ ಸ್ಟೇಟ್‌ಬ್ಯಾಂಕ್-ಧರ್ಮಸ್ಥಳ ಮಧ್ಯೆ ಸಂಚರಿಸಿದ್ದು, ಶನಿವಾರ ಬೆಂಗಳೂರಿಗೆ ಸಂಚಾರ ಕೈಗೊಳ್ಳಲಿದೆ ಎಂದು ವಿಭಾಗೀಯ ಪ್ರಭಾರ ಸಂಚಾರ ನಿಯಂತ್ರಕ ಇಸ್ಮಾಯಿಲ್ ತಿಳಿಸಿದ್ದಾರೆ.

ಉಡುಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಪೆಷಲ್ ಟೀಮ್..!