ಕೊಡಗಿನ ರಸ್ತೆಯಲ್ಲೇ ರಾಶಿ ರಾಶಿ ಮುತ್ತುಗಳು... ಆರಿಸಿಕೊಂಡವನೇ ಬುದ್ಧಿವಂತ!
ಇವು ಮುತ್ತಿನ ಹರಳುಗಳಲ್ಲ.. ಹಾಗಾದರೆ ಏನು? ಆಕಾಶದಿಂದ ಧರೆಗಳಿದ ವಜ್ರಗಳೆ? ಅಲ್ಲವೇ ಅಲ್ಲ... ಮುತ್ತುಗಳ ರೀತಿಯಲ್ಲೇ ನೆಲಕ್ಕೆ ಉದುರಿದ ಆಲಿಕಲ್ಲುಗಳು.
ಬೆಂಗಳೂರು/ಕೊಡಗು[ಮೇ.16] ವರ್ಷಧಾರೆಯ ಸಂಭ್ರಮವೇ ಅಂಥದ್ದು.. ರೈತನಿಗೆ ಹೊಸ ಉತ್ಸಾಹ ತುಂಬುವ ಮಳೆ ನಿಸರ್ಗ ಪ್ರೇಮಿಗಳನ್ನು ಕವಿಯಾಗಿಸುತ್ತದೆ.
ನೆಲಮಂಗಲ, ಆನೆಕಲ್ ನಲ್ಲಿ ಸುರಿದ ಆಲಿಕಲ್ಲು ಮಳೆ ಮುತ್ತಿನ ಮಳೆಯಂತೆ ಒಂದು ಕ್ಷಣ ಕಂಡಿದ್ದು ಸುಳ್ಳಲ್ಲ. ಕೊಡಗಿನಲ್ಲಿಯೂ ರಾಶಿ ರಾಶಿ ಮುತ್ತುಗಳು ಸಿಕ್ಕವು.
ಮುಂಗಾರು ಯಾವಾಗಲಾದರೂ ಬರಲಿ ಅದಕ್ಕೂ ಮುನ್ನವೇ ಆಗಮಿಸುವ ಆಲಿಕಲ್ಲು ಮಳೆ ಪ್ರಕೃತಿಯನ್ನು ಆಸ್ವಾದಿಸಲು ಪ್ರೇರೇಪಿಸುತ್ತದೆ. ಜೋರಾಗಿ ಧರೆಗುದುರುವ ಆಲಿಕಲ್ಲುಗಳು ಸಣ್ಣ ಪ್ರಮಾಣದ ಹಾನಿಯನ್ನೂ ಮಾಡುತ್ತವೆ. ಆಲಿಕಲ್ಲು ಮಳೆಯನ್ನು ನೀವು ಒಂದು ಕ್ಷಣ ಸವಿಯಿರಿ...
"