ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ಮಹಜರು 2ನೇ ದಿನ ಮುಂದುವರಿದಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಕ ಮಹಜರು ಪ್ರಕ್ರಿಯ ಮುಂದುವರಿದಿದೆ. ಇತ್ತ ಗುರುತಿಸಿದ ಜಾಗದಿಂದ ಶವಗಳನ್ನು ಇಂದೇ ಹೊರತೆಗಯಲು ಎಸ್ಐಟಿ ಎಲ್ಲಾ ಸಿದ್ಧತೆ ನಡೆಸಿದೆ.

ಧರ್ಮಸ್ಥಳ (ಜು.29) ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಎಸ್ಐಟಿ ಅಧಿಕಾರಿಗಳು ಮುಸುಕುದಾರಿ ದೂರುದಾನ ಜೊತೆ ನೇತ್ರಾವತಿ ಸ್ನಾನಘಟಕ್ಕೆ ಆಗಮಿಸಿ ಮಹಜರು ಪ್ರಕ್ರಿಯೆ ಮುಂದುವರಿಸಿದ್ದಾರೆ. ಸತತ 2ನೇ ಶವಗಳ ಹೂತಿಟ್ಟ ಜಾಗ ಗುರುತಿಸುವಿಕೆ ಮುಂದುವರಿಯಲಿದೆ. ಈಗಾಗಲೇ 13 ಸ್ಥಗಳನ್ನು ಗುರುತಿಸಲಾಗಿದೆ. ಇನ್ನುಳಿದ ಸ್ಥಳಗಳನ್ನು ಇಂದು ಗುರುತಿಸಲು ಮಹಜರು ಮುಂದುವರಿದಿದೆ. ಇತ್ತ ಎಸ್ಐಟಿ ಅಧಿಕಾರಿಗಳು ಗುರುತಿಸಿದ ಸ್ಥಳದಲ್ಲಿ ಶವಗಳನ್ನು ಹೊರತೆಗೆಯಲು ಎಲ್ಲಾ ಸಿದ್ಧತೆ ಮಾಡಿದೆ. ಇಂದೇ ಹೂತಿಟ್ಟಿರುವ ಶವಗಳನ್ನು ಹೊರತೆಗೆಲಾಗುತ್ತದೆ.

ಸಮಾಧಿ ಅಗೆಯಲು 12 ಕಾರ್ಮಿಕರು ಸಿದ್ಧ

ಮುಕುದಾರಿ ದೂರುದಾರ ಗುರುತಿಸಿದ ಸ್ಥಳದಲ್ಲಿ ಹೂತಿಟ್ಟ ಶವಗಳನ್ನು ಹೊರತೆಗೆಯಲು ಎಸ್ಐಟಿ ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಸಮಾಧಿ ಅಗೆಯಲು 12 ಕಾರ್ಮಿಕರು ಆಗಮಿಸಿದ್ದಾರೆ. ಧರ್ಮಸ್ಥಳ ಠಾಣೆಗೆ ಆಗಮಿಸಿದ ಕಾರ್ಮಿಕರನ್ನು ಇದೀಗ ನೇತ್ರಾವತಿ ಸ್ನಾನಘಟ್ಟಕ್ಕೆ ಕರೆ ತೆರಲಾಗಿದೆ. ಅರಣ್ಯ ಇಲಾಖೆ ಗುತ್ತಿಗೆ ಕೂಲಿಯಾಳಾಗಿರುವ ಈ ಕಾರ್ಮಿಕರು ಸಮಾಧಿ ಅಗೆಯಲಿದ್ದಾರೆ.

ನಾಲ್ವರು ವೈದ್ಯರ ತಂಡದಿಂದ ಪರೀಕ್ಷೆ

ಹೂತಿಟ್ಟ ಶವಗಳನ್ನು ಹೊರತೆಗೆಯಲು ಕಾರ್ಮಿಕರ ಜೊತೆ ಶವಗಳ ಪರೀಕ್ಷೆಗೆ ನಾಲ್ವರು ವೈದ್ಯರ ತಂಡಕೂಡ ನೇತ್ರಾವತಿ ಸ್ನಾನಘಟ್ಟಕ್ಕೆ ಆಗಮಿಸಿದ್ದಾರೆ. ಎಸ್ಐಟಿ ಆದೇಶದ ಮೇರೆ ಮಂಗಳೂರು ಕೆಎಂಸಿ ಆಸ್ಪತ್ರೆಯ ನಾಲ್ವರು ವೈದ್ಯರ ತಂಡ ಧರ್ಮಸ್ಥಳಕ್ಕೆ ಆಗಮಿಸಿದೆ. ಶವ ಮೇಲಕ್ಕೆತ್ತುವಾಗ ಕೈಗೊಳ್ಳಬೇಕಾದ ವೈದ್ಯಕೀಯ ಸೂಚನೆಗಳ ಕುರಿತು ಪೊಲೀಸರ ಜೊತೆ ವೈದ್ಯರು ಚರ್ಚಿಸಿದ್ದಾರೆ. ಶವಗಳ ಮೇಲಕ್ಕೆತ್ತಿ ಅವುಗಳ ಪರೀಕ್ಷೆ ನಡೆಸಲಾಗುತ್ತದೆ.

ಪ್ರತಿ ಸಮಾಧಿ ಅಗೆಯಲು 4 ಗಂಟೆ ಸಮಯ

ಮುಸುಕುದಾರಿ ದೂರುದಾರ ಈಗಾಗಲೇ 13 ಸ್ಥಳ ಗುರುತಿಸಿದ್ದಾನೆ. ಇಂದು ಮತ್ತಷ್ಟು ಸ್ಥಳ ಗುರುತಿಸುವ ಸಾಧ್ಯತೆ ಇದೆ. ಇದೀಗ ಪ್ರತಿ ಸಮಾಧಿ ಅಗೆಯಲು ಕನಿಷ್ಠ 4 ಗಂಟೆ ಸಮಯ ಬೇಕಾಗಲಿದೆ ಎಂದು ಕಾರ್ಮಿಕರು ಹೇಳಿದ್ದಾರೆ. ಕನಿಷ್ಠ 6 ಫೀಟ್ ಭೂಮಿ ಅಗೆಯಲಿದ್ದಾರೆ. ಈ ವೇಳೆ ಶವ ಸಿಗದಿದ್ದರೆ, ದೂರುದಾರನ ಮತ್ತಷ್ಟು ಆಳಕ್ಕೆ ಅಗೆಯಲು ಹೇಳಿದರೂ ಅಗೆಯಲಾಗುತ್ತದೆ. ದೇಹದ ಬೇರೆ ಬೇರೆ ಭಾಗಗಳನ್ನು ಆಯ್ದು ಎಫ್ ಎಸ್ ಎಲ್ ಸ್ಯಾಂಪಲ್‌ಗೆ ಕಳುಹಿಸಲಾಗುತ್ತದೆ. ಮೂರು ತಂಡದಿಂದ ಶವ ಹೂತಿಟ್ಟ ಸ್ಥಳದಲ್ಲಿ ಉತ್ಖನನ ಸಾಧ್ಯತೆ ಇದೆ.

ಮಹಜರು ಮುಂದುವರಿಯುತ್ತಿದ್ದಂತೆ ಉತ್ಖನನ

ಒಂದೆಡೆ ದೂರುದಾರನ ಪೊಲೀಸರ ಒಂದು ತಂಡ ಉತ್ಖನನ ಮುಂದುವರಿದರೆ, ಮತ್ತೊಂದು ತಂಡ ಉತ್ಖನನ ಮಾಡಲಿದೆ. ಒಟ್ಟು ಮೂವತ್ತು ಸ್ಥಳಗಳನ್ನು ದೂರುದಾರ ಗುರುತಿಸುವ ಸಾಧ್ಯತೆ ಇದೆ. ಹೀಗಾಗಿ ಇಂದು ಇಡೀ ದಿನ ಮಹಜರು ಪ್ರಕ್ರಿಯೆ ಹಾಗೂ ಉತ್ಖನನ ಕಾರ್ಯಗಳು ನಡೆಯಲಿದೆ.

ಪುತ್ತೂರು ಉಪ ವಿಭಾಗ ಎಸಿ ಸ್ಟೆಲ್ಲಾ ವರ್ಗಿಸ್ ಧರ್ಮಸ್ಥಳಕ್ಕೆ

ಎರಡನೇ ನೇತ್ರಾವತಿ ಸ್ನಾನಘಟ್ಟದಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದೆ. ಇತ್ತ ಸಮಾಧಿ ಅಗೆದು ಶವಗಳನ್ನು ಹೊರತಗೆಯುವ ಕಾರ್ಯವುೂ ನಡೆಯಲಿದೆ. ಉತ್ಖನನದ ಹಿನ್ನಲೆಯಲ್ಲಿ ಪುತ್ತೂರು ಉಪ ವಿಭಾಗ ಎಸಿ ಸ್ಟೆಲ್ಲಾ ವರ್ಗಿಸ್ ಬೆಳ್ತಂಗಡಿಗೆ ಆಗಮಿಸಿದ್ದಾರೆ. ಸ್ನಾನಘಟ್ಟದ ಬಳಿ ಉತ್ಖನನದ ವೇಳೆ ಸ್ಟೆಲ್ಲಾ ವರ್ಗಿಸ್ ಹಾಜರಿರಲಿದ್ದಾರೆ.

ದೂರುದಾರನ ಆರೋಪವೇನು?

ಮುಸುಕುದಾರಿ ದೂರುದಾರ ತಾನು ಧರ್ಮಸ್ಥಧ ಮಾಜಿ ನೌಕರ ಎಂದು ಹೇಳಿಕೊಂಡಿದ್ದಾನೆ. ತಾನು ನೌಕರಿಯಲ್ಲಿದ್ದಾಗ ಪ್ರಭಾವಿಗಳ ಸೂಚನೆ ಮೇರೆಗೆ ನೂರೂರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿಸಿದ್ದಾರೆ. ಹೆಚ್ಚಿನ ಮಹಿಳೆ ಹಾಗೂ ಹೆಣ್ಣುಮಕ್ಕಳ ಶವಗಳಾಗಿದೆ. ಇದು ಸಹಜ ಸಾವಲ್ಲ ಎಂದು ದೂರುದಾರ ಆರೋಪಿಸಿದ್ದ. ತಾನು ಹೂತಿಟ್ಟ ಶವಗಳ ಸಮಾಧಿಗಳನ್ನು ತೂರಿಸಲು ಸಿದ್ದ. ತನ್ನಲ್ಲಿರುವ ಎಲ್ಲಾ ದಾಖಲೆ ಹಾಗೂ ಮಾಹಿತಿಯನ್ನು ಪೊಲೀಸರಿಗೆ ನೀಡಲು ಸಿದ್ಧ ಎಂದು ಆರೋಪಿಸಿದ್ದರು.