ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ದೂರುದಾರನ ಜೊತೆ ಮಹಜರು ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಇದೀಗ ಶವ ಹೊರತೆಗೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ. ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಸಮಾಧಿ ಅಗೆಯುವ ಕೆಲಸ ಆರಂಭಗೊಂಡಿದೆ. 

ಧರ್ಮಸ್ಥಳ (ಜು.29) ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಶವಗಳ ಹೂತಿಟ್ಟ ಪ್ರಕರಣದ ತನಿಖೆ ತೀವ್ರಗೊಂಡಿದೆ. ಎಸ್ಐಟಿ ಅಧಿಕಾರಿಗಳು 2ನೇ ದಿನ ನೇತ್ರಾವತಿ ಸ್ನಾನಘಟ್ಟದ ಬಳಿ ದೂರುದಾರನ ಜೊತೆ ಮಹಜರು ನಡೆಸುತ್ತಿದ್ದಾರೆ. ಇತ್ತ ಎಸ್ಐಟಿ ಅಧಿಕಾರಿಗಳ ಮತ್ತೊಂದು ತಂಡ ಎಸ್‌ಪಿ ಸಮ್ಮುಖದಲ್ಲಿ ಸಮಾಧಿ ಅಗೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ. ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಸಮಾಧಿ ಅಗೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ. ಸಮಾಧಿ ಮೇಲೆ ಬೆಳೆದಿರುವ ಗಿಡಗಂಟಿಗಳನ್ನು ಕಿತ್ತು ಹಾಕಿ ಸಮಾಧಿ ಅಗೆಯಲು ಮುಂದಾಗಿದ್ದಾರೆ.

ನೇತ್ರಾವತಿ ಸ್ನಾನಘಟ್ಟದ ಸಮ್ಮುಖದಲ್ಲೇ ಇರುವ ಮೊದಲ ಪಾಯಿಂಟ್

ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲೇ ಇರುವ ಜಾಗದಲ್ಲಿ ಉತ್ಖನನ ಆರಂಭಗೊಂಡಿದೆ. ದೂರುದಾರ ಮೊದಲ ದಿನ ಮಹಜರು ವೇಳೆ ಗುರುತಿಸಿದ ಜಾಗದಲ್ಲಿ ಉತ್ಖನನ ಆರಂಭಿಸಿದೆ. ಇದು ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲೇ ಇದೆ. ಈ ಸಮಾಧಿ ಮೇಲೆ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಿ ಸಮಾಧಿ ಅಗೆಯುವ ಕಾರ್ಯ ಆರಂಭಗೊಂಡಿದೆ. 12 ಕಾರ್ಮಿಕರು ತಂಡ ತಂಡವಾಗಿ ಸಮಾಧಿ ಅಗೆಯಲಿದ್ದಾರೆ. ಎಸಿ ಸಮ್ಮುಖದಲ್ಲಿ ಉತ್ಖನನ ಪ್ರಕ್ರಿಯೆಯನ್ನು ಎಸ್ಐಟಿ ಅಧಿಕಾರಿಗಳು ಆರಂಭಿಸಿದ್ದಾರೆ. ಸಮಾಧಿ ಸ್ಥಳ ಅಳತೆ ಮಾಡಿ ಮಾರ್ಕಿಂಗ್ ಮಾಡಲಾಗುತ್ತಿದೆ. ಮಾರ್ಕಿಂಗ್ ಬಳಿಕ ಸಮಾಧಿ ಜಾಗ ಅಗೆಯಲಾಗುತ್ತದೆ.

ಅಗೆಯುವ ಪ್ರಕ್ರಿಯೆ ವಿಡಿಯೋ ರೆಕಾರ್ಡಿಂಗ್

ದೂರುದಾರ ಗುರುತಿಸಿದ ಸಮಾಧಿ ಜಾಗದಲ್ಲಿ ಕಾರ್ಮಿಕರು ಅಗೆತ ಆರಂಭಿಸಿದ್ದಾರೆ. ಎಸ್ಐಟಿ ಅಧಿಕಾರಿಗಳು ಸಮಾಧಿ ಅಗೆಯುವ ಪ್ರಕ್ರಿಯೆ ಸಂಪೂರ್ಣ ವಿಡಿಯೋ ಮಾಡುತ್ತಿದ್ದಾರೆ. ವಿಡಿಯೋ ದಾಖಲೆಗೆ ರೆಕಾರ್ಡಿಂಗ್ ಮಾಡಲಾಗುತ್ತಿದೆ. ಎಲ್ಲಾ ದಾಖಲೆಗಳನ್ನು ಮಾಡಿಕೊಂಡು ಎಸ್ಐಟಿ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ.

ನಾಲ್ವರು ವೈದ್ಯರ ತಂಡದಿಂದ ಪರೀಕ್ಷೆ

ಸಮಾಧಿ ಅಗೆಯುವ ಸ್ಥಳದಲ್ಲಿ ನಾಲ್ವರು ವೈದ್ಯರ ತಂಡ ಹಾಜರಿದೆ. ವೈದ್ಯಕೀಯ ಪರೀಕ್ಷೆ, ಮಾದರಿ ಸಂಗ್ರಹದ ಕಾರಣದಿಂದ ಪೊಲೀಸರು ನಾಲ್ವರು ವೈದ್ಯರ ತಂಡವನ್ನು ಧರ್ಮಸ್ಥಳಕ್ಕೆ ಕರೆಸಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಿಂದ ನಾಲ್ವರು ವೈದ್ಯರು ಎಸ್ಐಟಿ ಅಧಿಕಾರಿಗಳ ಜೊತೆ ನೇತ್ರಾವತಿ ಸ್ನಾನಘಟ್ಟದ ಸಮಾಧಿ ಸ್ಥಳಕ್ಕೆ ಆಗಮಿಸಿದ್ದಾರೆ.

2ನೇ ದಿನ ಮಹಜರು ಪ್ರಕ್ರಿಯೆ

ದೂರುದಾರನನ ಜೊತೆ ಎರಡನೇ ದಿನವೂ ಎಸ್ಐಟಿ ಅಧಿಕಾರಿಗಳು ನೇತ್ರಾವತಿ ಸ್ನಾನಘಟ್ಟದ ಬಳಿ ಮಹಜರು ಪಕ್ರಿಯೆ ಮುಂದುವರಿಸಿದ್ದಾರೆ. ಇಂದು ಹಲವು ಸಮಾಧಿಗಳ ಜಾಗ ಗುರುತಿಸುವ ಸಾಧ್ಯತೆ ಇದೆ. ಕಳೆದ ಒಂದು ಗಂಟೆಯಿಂದ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ಕಾಡಿನಲ್ಲಿನ ಮಹಜರು ಮುಂದುವರಿದಿದೆ. ದೂರುದಾರ ತೋರಿಸಿದ ಜಾಗಗಳನ್ನು ಪೊಲೀಸರು ಮಾರ್ಕ್ ಮಾಡಿ ನಂಬರ್ ಹಾಕುತ್ತಿದ್ದಾರೆ. ಇಂದು ಕೂಡ 15 ರಿಂದ 20 ಸಮಾಧಿ ಸ್ಥಳಗಳನ್ನು ದೂರುದಾರ ಗುರುತಿಸುವ ಸಾಧ್ಯತೆ ಇದೆ.

ಮೊದಲ ದಿನ 13 ಸ್ಥಳ ಗುರುತಿಸಿದ ದೂರುದಾರ

ಮೊದಲ ದಿನ ನೇತ್ರಾವತಿ ಸ್ನಾನಘಟ್ಟದ ಬಳಿಕ 13 ಸ್ಥಳಗಳನ್ನು ದೂರುದಾರ ಗುರುತಿಸಿದ್ದಾನೆ. 13 ಸ್ಥಳಗಳಲ್ಲಿ ಶವ ಹೂತಿಟ್ಟಿರುವುದಾಗಿ ದೂರುದಾರ ಹೇಳಿದ್ದಾರೆ. ಮಳೆಯ ನಡುವೆಯೂ ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರು ಮಾಡಿದ್ದಾರೆ.

ಮಸುಕುದಾರಿ ದೂರುದಾರನ ಆರೋಪವೇನು?

ಮುಸುಕುದಾರಿ ದೂರುದಾರ ತಾನೂ ಧರ್ಮಸ್ಥಳದ ಮಾಜಿ ನೌಕರ ಎಂದು ಹೇಳಿಕೊಂಡಿದ್ದರೆ. ತನ್ನ ಕೆಲಸದ ಅವಧಿಯಲ್ಲಿ ಪ್ರಭಾವಿಗಳ ಸೂಚನೆ ಮೇರೆ ನೂರಾರು ಶವಗಳನ್ನು ಧರ್ಮಸ್ಥಳ ಸುತ್ತ ಹೂತಿಟ್ಟಿರುವುದಾಗಿ ಆರೋಪಿಸಿದ್ದಾರೆ. ಇದು ಸಹಜ ಸಾವಾಗಿರುವುದಲ್ಲ. ಪ್ರಭಾವಿಗಳು ಬೆದರಿಕೆ ಕಾರಣ ಇಲ್ಲೀವರೆಗೆ ಈ ಮಾಹಿತಿ ಯಾರಿಗೂ ಹೇಳಿರಲಿಲ್ಲ. ಆಧರ ಪಾಪ ಪ್ರಜ್ಞೆಯಿಂದ ಇದೀಗ ಹೊರಬಂದಿದ್ದೇನೆ.ಅನಾಥವಾಗಿ ಬಿದ್ದಿರುವ ಶವಗಳಿಗೆ ಮುಕ್ತಿ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ದೂರುದಾರ ಆಗ್ರಹಿಸಿದ್ದಾನೆ.