ಧರ್ಮಸ್ಥಳದಲ್ಲಿ ಮುಸುಕುದಾರಿ ದೂರುದಾರ ಗುರುತಿಸಿದ ಸಮಾದಿ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಆದರೆ ಮೊದಲ ಸಮಾಧಿ ಸ್ಥಳದಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ. ಹೀಗಾಗಿ 2ನೇ ಸಮಾಧಿ ಅಗೆಯುವ ಕೆಲಸ ಆರಂಭಗೊಂಡಿದೆ.
ಧರ್ಮಸ್ಥಳ (ಜು.29) ಧರ್ಮಸ್ಥಳದಲ್ಲಿ ನಾರೂರು ಶವ ಹೂತಿಟ್ಟ ಪ್ರಕರಣದ ತನಿಖೆ ಹಂತ ಹಂತಕ್ಕೂ ತೀವ್ರ ಕುತೂಹಲ ಹೆಚ್ಚಿಸುತ್ತಿದೆ. ಕರ್ನಾಟಕ ಸೇರಿದಂತೆ ಇದೀ ದೇಶವೇ ಇದೀಗ ಎಸ್ಐಟಿ ತನಿಖೆ ಮೇಲೆ ಕಣ್ಣಿಟ್ಟಿದೆ. ಮುಸುಕುಧಾರಿ ದೂರುದಾರ ಮೊದಲ ದಿನ ಮಹಜರಿನಲ್ಲಿ 13 ಸಮಾಧಿ ಸ್ಥಳಗಳನ್ನು ಗುರುತಿಸಿದ್ದ. ಈ ಪೈಕಿ ಮೊದಲ ಸಮಾಧಿಯನ್ನು ಎಸ್ಐಟಿ ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ಅಗೆಯಲಾಗಿದೆ. 4 ಅಡಿ ಅಗೆದರೂ ಯಾವುದೇ ಕಳೇಬರದ ಸುಳಿವಿಲ್ಲ. ಹೀಗಾಗಿ ಇದೀಗ 2ನೇ ಸಮಾಧಿ ಅಗೆಯುವ ಕಾರ್ಯ ಆರಂಭಗೊಂಡಿದೆ.
ಸ್ನಾನಘಟ್ಟದ ಪಕ್ಕದಲ್ಲೇ ಮೊದಲ ಮಾರ್ಕ್
ದೂರುದಾರ ಗುರುತಿಸಿದ ಮೊದಲ ಸಮಾಧಿ ಸ್ಥಳ ನೇತ್ರಾವತಿ ಸ್ನಾನಘಟ್ಟ ಪಕ್ಕದಲ್ಲೇ ಇದೆ. ಮೊದಲ ಸಮಾಧಿ ಸ್ಥಳವನ್ನು ಅಗೆಯಲಾಗಿದೆ. ಭಾರಿ ಮಳೆ ನಡುವೆ ಸಮಾಧಿ ಸ್ಥಳ ಅಗೆಯಲಾಗಿದೆ. 4 ಅಡಿಗಿಂತ ಹೆಚ್ಚು ಸಮಾಧಿ ಸ್ಥಳವನ್ನು ಅಗೆಯಲಾಗಿದೆ. ಆದರೆ ಯಾವುದೇ ಕೇಳಬೇರದ ಸುಳಿವು ಸಿಕಿಲ್ಲ. ಭಾರಿ ಮಳೆ ಕಾರಣ ಅಗೆದ ಜಾಗದಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಸದ್ಯಕ್ಕೆ ಮೊದಲ ಸಮಾಧಿ ಸ್ಥಳ ಅಗೆತ ನಿಲ್ಲಿಸಲಾಗಿದೆ. ದೂರುದಾರ ಮತ್ತಷ್ಟು ಅಗೆಯಲು ಹೇಳಿದರೆ ಅಗೆಯಲಾಗುತ್ತದೆ. ಮಳೆ ಹಾಗೂ ನೀರಿನ ಒರತೆಯಿಂದ ಸಮಾಧಿ ಅಗೆದ ಸ್ಥಳದಲ್ಲಿ ನೀರು ತುಂಬಿಕೊಂಡಿದೆ.
ದೂರುದಾರನ ಪ್ರಶ್ನಿಸಿದ ಎಸ್ಐಟಿ
ದೂರುದಾರ ಹೇಳಿದ ಪ್ರಕಾರ ಮೊದಲ ಸಮಾಧಿ ಸ್ಥಳವನ್ನು ಎಸ್ಐಟಿ ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ಅಗೆಯಲಾಗಿದೆ. ಮೂರು ಅಡಿ ಅಗೆದ ಬಳಿಕ ಕಳೇಬರ ಸಿಗದ ಕಾರಣ ಎಸ್ಐಟಿ ಅಧಿಕಾರಿಗಳು ದೂರುದಾರನ ಪ್ರಶ್ನಿಸಿದ್ದಾರೆ. ಇನ್ನು ಎಷ್ಟು ಅಡಿ ಅಗೆಯಬೇಕು ಎಂದು ಪ್ರಶ್ನಿಸಿದ್ದಾರೆ. ಮತ್ತೆ ಎರಡಿಂದ ಮೂರು ಫೀಟ್ ಅಗೆಯೋಕೆ ದೂರುದಾರ ಹೇಳಿದ್ದಾನೆ. ಆದರೆ ನಾಲ್ಕು ಅಡಿ ಅಗೆದರೂ ಕಳೇಬರ ಸಿಕ್ಕಿಲ್ಲ. ಇದೀಗ ಗುಂಡಿಯಲ್ಲಿ ನೀರು ತುಂಬಿಕೊಂಡಿರುವ ಕಾರಣ ಉತ್ಖನನಕ್ಕೆ ಅಡ್ಡಿಯಾಗಿದೆ.
ಮತ್ತೆರೆಡು ಅಡಿ ಸಮಾಧಿ ಅಗೆಯಲು ನಿರ್ಧಾರ
ದೂರುದಾರ ನೀಡಿದ ಮಾಹಿತಿ ಪ್ರಕಾರ ಮತ್ತೆರಡು ಅಡಿ ಸಮಾಧಿ ಅಗೆಯಲು ಎಸ್ಐಟಿ ನಿರ್ಧರಿಸಿದೆ. ಒಟ್ಟು 6 ಅಡಿ ಸಮಾಧಿ ಸ್ಥಳ ಅಗೆಯಲು ಎಸ್ಐಟಿ ಮುಂದಾಗಿದೆ. ನಾಲ್ಕು ಅಡಿ ಅಗೆದರೂ ಯಾವುದೇ ಕಳೇಬರ ಪತ್ತೆಯಾಗದ ಹಿನ್ನಲೆಯಲ್ಲಿ ದೂರುದಾರನಂತೆ ಮತ್ತೆರಡು ಅಡಿ ಅಗೆಯಲು ನಿರ್ಧರಿಸಲಾಗಿದೆ.
ಭಾರಿ ಮಳೆ ಹಾಗೂ ಊಟದ ವಿರಾಮದ ಕಾರಣ ಅಗೆತ ಕಾರ್ಯ ಸ್ಥಗಿತ
ನಾಲ್ಕು ಅಡಿ ಅಗೆಯಲಾಗಿದ್ದರೂ ಕಳೇಬರ ಸುಳಿವಿಲ್ಲ. ಜೊತೆಗೆ ಭಾರಿ ಮಳೆ ಕಾರಣದಿಂದ ಉತ್ಖನನಕ್ಕೆ ಅಡ್ಡಿಯಾಗಿದೆ. ಇನ್ನು ಊಟದ ವಿರಾಮದ ಕಾರಣ ಸಮಾಧಿ ಅಗೆತ ಕಾರ್ಯ ಅಡ್ಡಿಯಾಗಿದೆ.
ಉತ್ಖನನ ನಡೆಯುವ ಸ್ಥಳದಲ್ಲಿ ಡಿಐಜಿ ಅನುಚೇತ್
ಸಮಾಧಿ ಅಗೆಯುತ್ತಿರುವ ನೇತ್ರಾವತಿ ಸ್ನಾನಘಟ್ಟ ಸ್ಥಳಕ್ಕೆ ಡಿಐಜಿ ಅನುಚೇತ್ ಆಗಮಿಸಿದ್ದಾರೆ. ಎರಡು ಗಂಟೆಯಿಂದಲೂ ಹೆಚ್ಚು ಕಾಲ ಎಸ್ಪಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸಮಾಧಿ ಅಗೆಯುವ ಕಾರ್ಯ ನಡೆಯುತ್ತಿದೆ. ಆದರೆ ಯಾವುದೇ ಕಳೇಬರ ಸಿಕ್ಕಿಲ್ಲ. ಡಿಐಜಿ ಅನುಚೇತ್ ಈ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
2ನೇ ದಿನವೂ ಮಹಜರು ಮುಂದುವರಿಕೆ
ದೂರುದಾರನ ಜೊತೆ ಪೊಲೀಸರು ಎರಡನೇ ದಿನವೂ ನೇತ್ರಾವತಿ ಸ್ನಾನಘಟ್ಟದ ಬಳಿ ಮಹಜರು ಮುಂದುವರಿಸಿದ್ದಾರೆ. ಎರಡನೇ ದಿನ ಹಲವು ಸಮಾಧಿ ಸ್ಥಳಗಳನ್ನು ಗುರುತಿಸಿರುವುದಾಗಿ ಹೇಳಲಾಗುತ್ತಿದೆ. ಮೊದಲ ದಿನ ದೂರುದಾರ 13 ಸಮಾಧಿ ಸ್ಥಳಗಳನ್ನು ಗುರುತಿಸಲಾಗಿದೆ. ಈ ಪೈಕಿ ಮೊದಲ ಸಮಾಧಿ ಅಗೆಯಲಾಗುತ್ತಿದೆ. ದೂರುದಾರ ಇಂದು ಸರಿಸುಮಾರು 15 ಸಮಾಧಿ ಸ್ಥಳ ಗುರುತಿಸುವ ಸಾಧ್ಯತೆ ಇದೆ. ಒಟ್ಟು 30 ರಿಂದ 40 ಸಮಾಧಿ ಸ್ಥಳ ಗುರುತಿಸಿ ಉತ್ಖನನ ನಡೆಸುವ ಸಾಧ್ಯತೆ ಇದೆ. ಒಂದು ತಂಡ ಉತ್ಖನನ ನಡೆಸುತ್ತಿದ್ದರೆ, ಮತ್ತೊಂದು ತಂಡ ಸ್ಥಳ ಮಹಜರು ಪ್ರಕ್ರಿಯೆ ನಡೆಸುತ್ತಿದೆ.
