ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕ್ಲೋರಿನ್ ಸೋರಿಕೆ, ಉಸಿರಾಡಲು ಪರದಾಡಿದ ಜನ
ಕುಕ್ಕೆ ಸುಬ್ರಹ್ಮಣ್ಯದ ಕಲ್ಲಪಣೆಯಲ್ಲಿರುವ ಕುಡಿಯುವ ನೀರಿನ ಘಟಕದಲ್ಲಿ ಕ್ಲೋರಿನ್ ಸೋರಿಕೆಯಾಗಿ ಸೋಮವಾರ ತಡರಾತ್ರಿ ಈ ಪರಿಸರದ ಜನತೆಯಲ್ಲಿ ಆತಂಕ ಮನೆ ಮಾಡಿತ್ತು. ಕ್ಲೋರಿನ್ ಸೋರಿಕೆಯಿಂದ ವಾತಾವರಣದಲ್ಲಿ ಆಮ್ಲಜನಕ ಕೊರತೆ ಉಂಟಾಗಿ ಕೆಲವು ಸಮಯ ಇಲ್ಲಿನ ಜನರು ಉಸಿರಾಡಲು ತೊಂದರೆ ಪಡುವ ಸ್ಥಿತಿ ನಿರ್ಮಾಣಗೊಂಡಿತು.
ಸುಬ್ರಹ್ಮಣ್ಯ(ಅ.30): ಕುಕ್ಕೆ ಸುಬ್ರಹ್ಮಣ್ಯದ ಕಲ್ಲಪಣೆಯಲ್ಲಿರುವ ಕುಡಿಯುವ ನೀರಿನ ಘಟಕದಲ್ಲಿ ಕ್ಲೋರಿನ್ ಸೋರಿಕೆಯಾಗಿ ಸೋಮವಾರ ತಡರಾತ್ರಿ ಈ ಪರಿಸರದ ಜನತೆಯಲ್ಲಿ ಆತಂಕ ಮನೆ ಮಾಡಿತ್ತು.
ಕ್ಲೋರಿನ್ ಸೋರಿಕೆಯಿಂದ ವಾತಾವರಣದಲ್ಲಿ ಆಮ್ಲಜನಕ ಕೊರತೆ ಉಂಟಾಗಿ ಕೆಲವು ಸಮಯ ಇಲ್ಲಿನ ಜನರು ಉಸಿರಾಡಲು ತೊಂದರೆ ಪಡುವ ಸ್ಥಿತಿ ನಿರ್ಮಾಣಗೊಂಡಿತು. ನಂತರ ಅಗ್ನಿಶಾಮಕ ದಳ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಆತಂಕ ದೂರ ಮಾಡಿತು. ಒಟ್ಟಾರೆಯಾಗಿ ರಾತ್ರಿ 1 ಗಂಟೆಯಿಂದ ಆರಂಭಗೊಂಡು ಆತಂಕವು ಬೆಳಗ್ಗೆ 5 ಗಂಟೆ ವೇಳೆಗೆ ಶಮನಗೊಂಡಿತ್ತು.
'ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳ್ಕೊಂಡಿದ್ದಾರೆ' ಎಂದ್ರು ಶೋಭಾ..!
ಸೋಮವಾರ ತಡರಾತ್ರಿ ಕುಡಿಯುವ ನೀರಿನ ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿ ದುರ್ವಾಸನೆ ಹಬ್ಬಿತು. ಇದರಿಂದಾಗಿ ಭಯಬೀತರಾಗಿದ್ದ ಆಸುಪಾಸಿನ ಮನೆಯವರನ್ನು ರಾತ್ರಿ ಒಂದು ಘಂಟೆಗೆ ಬೇರೆಡೆಗೆ ಕಳಿಸಲಾಯಿತು. ಶುದ್ಧೀಕರಣ ಘಟಕದಲ್ಲಿ ಉಂಟಾದ ಪರಿಸ್ಥಿತಿಯ ಬಗ್ಗೆ ದೇವಳದ ಅಧಿಕಾರಿಗಳಿಗೆ, ಪೋಲಿಸರಿಗೆ ಸುದ್ದಿ ಮುಟ್ಟಿಸಲಾಯಿತು. ಬಳಿಕ ಅವರು ಸ್ಥಳಕ್ಕಾಮಿಸಿದರು.ಅಲ್ಲದೆ ತಕ್ಷಣ ಅಗ್ನಿಶಾಮಕ ದಳವನ್ನು ಕರೆಸಲು ವ್ಯವಸ್ಥೆ ಮಾಡಲಾಯಿತು.
ಸುಳ್ಯದ ಅಗ್ನಿಶಾಮಕ ದಳದವರು ಬಂದು ನೋಡಿದಾಗ ಶುದ್ಧೀಕರಣ ಘಟಕದ ಟ್ಯಾಂಕ್ ಒಳಗೆ ತುಂಬಿಸಿಟ್ಟಿದ್ದ ಕ್ಲೋರಿನ್ ಸೋರಿಕೆಯಾದುದು ಕಂಡು ಬಂತು. ಬಳಿಕ ಅದನ್ನು ದುರಸ್ತಿಗೊಳಿಸಲಾಯಿತು.
ಹುಬ್ಬಳ್ಳಿ ಸ್ಫೋಟ: ಎರಡು ವಾರದಲ್ಲಿ ಎಫ್‌ಎಸ್‌ಎಲ್ ವರದಿ ನಿರೀಕ್ಷೆ
ಅಕ್ಟೋಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: