ಇಂದು, 26ನೇ ಮೇ 2026, ಸಿದ್ಧಿ ಮತ್ತು ವ್ಯತಿಪತ್ ಯೋಗದ ವಿಶಿಷ್ಟ ಸಂಯೋಜನೆಯು ಕರ್ಕಾಟಕ ರಾಶಿಯವರಿಗೆ ಹಳೆಯ ಸಮಸ್ಯೆಗಳಿಂದ ಮುಕ್ತಿ ನೀಡಲಿದೆ. ಈ ದಿನದಂದು ಎಲ್ಲಾ 12 ರಾಶಿಗಳ ಫಲಾಫಲಗಳು, ಅದೃಷ್ಟ ಸಂಖ್ಯೆ ಮತ್ತು ಬಣ್ಣಗಳ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ.

ಇಂದು ಮಂಗಳವಾರ ದಿನಾಂಕ 26ನೇ ಮೇ 2026 ಆಗಿದೆ.ವಿಶೇಷ ಗ್ರಹ ಸ್ಥಾನಗಳಿಂದ ಸಿದ್ಧಿ ಮತ್ತು ವ್ಯತಿಪತ್ ಯೋಗದ ವಿಶಿಷ್ಟ ಸಂಯೋಜನೆ ಸೃಷ್ಟಿಸಿವೆ. ಶುಭ ಕಾರ್ಯಗಳಿಗೆ ಶುಭ ಸಮಯ ಬೆಳಿಗ್ಗೆ 11:57 ರಿಂದ ಮಧ್ಯಾಹ್ನ 12:50 ರವರೆಗೆ, ರಾಹುಕಾಲ ಮಧ್ಯಾಹ್ನ 3:42 ರಿಂದ ಸಂಜೆ 5:22 ರವರೆಗೆ ಇರುತ್ತದೆ. ವಿಶಿಷ್ಟ ಸಂಯೋಜನೆ ರಾಶಿಗಳ ಸಕಾರಾತ್ಮಕ ಪರಿಣಾಮ ಬೀರಲಿವೆ. ಕರ್ಕ ರಾಶಿಯವರು ಹಳೆಯ ಸಮಸ್ಯೆಗಳು ಮತ್ತು ಸಾಲಗಳಿಂದ ಪರಿಹಾರವನ್ನು ಪಡೆಯಬಹುದು. ಇನ್ನೆರಡು ರಾಶಿಗಳಿಗೂ ಈ ಯೋಗಗಳಿಂದ ಲಾಭ ಸಿಗಲಿದೆ.

Add Asianetnews Kannada as a Preferred SourcegooglePreferred

ಮೇಷ ರಾಶಿ

ಇಂದು ದಾನ ಕಾರ್ಯಗಳಲ್ಲಿ ತೊಡಗುತ್ತೀರಿ. ಕೆಲಸಗಳಲ್ಲಿ ನಿಮಗೆ ಆಪ್ತರಿಂದ ಸಹಾಯ ಸಿಗಲಿದೆ. ಇದರಿಂದ ನಿಮ್ಮ ಸಮಸ್ಯೆ ಮತ್ತು ಕೆಲಸದ ಒತ್ತಡ ನಿವಾರಣೆಯಾಗಲಿದೆ. ಆತುರದಿಂದ ಯಾವುದೇ ಭರವಸೆಗಳನ್ನು ಯಾರಿಗೂ ನೀಡಬೇಡಿ. ಅತಿಥಿಗಳ ಆಗಮನದಿಂದ ನಿಮ್ಮ ದಿನನಿತ್ಯದ ಖರ್ಚುಗಳು ಹೆಚ್ಚಾಗಲಿವೆ.

  • ಅದೃಷ್ಟ ಬಣ್ಣ: ಕೆಂಪು
  • ಅದೃಷ್ಟ ಸಂಖ್ಯೆ: 9

ವೃಷಭ ರಾಶಿ

ಇಂದು ನೀವು ಪ್ರತಿಕೂಲ ಪರಿಸ್ಥಿತಿಯಲ್ಲಿ ತಾಳ್ಳೆ ಕಳೆದುಕೊಳ್ಳಬೇಡಿ. ಸಂಗಾತಿಯ ಕುಟುಂಬಸ್ಥರ ಪರಿಚಯವಾಗುತ್ತದೆ. ಆದ್ರೆ ಇಲ್ಲಿ ನೀವು ಮೋಸ ಹೋಗುವ ಸಾಧ್ಯತೆಗಳಿವೆ. ಬಹುದಿನಗಳ ನಂತ್ರ ಆಪ್ತ ಸ್ನೇಹಿತರನ್ನು ಭೇಟಿಯಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿರುವ ಜನರು ತುಂಬಾ ಎಚ್ಚರಿಕೆಯಿಂದಿರಬೇಕು.

  • ಅದೃಷ್ಟ ಬಣ್ಣ: ಬಿಳಿ
  • ಅದೃಷ್ಟ ಸಂಖ್ಯೆ: 2

ಮಿಥುನ ರಾಶಿ

ಇಂದು ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ಮೇಲಾಧಿಕಾರಿಗಳೊಂದಿಗೆ ವಾದ ಮಾಡಿಕೊಳ್ಳಬೇಡಿ. ಸಾಮಾಜಿಕ ಕ್ಷೇತ್ರದಲ್ಲಿರುವ ಜನರಿಗೆ ಹೆಚ್ಚು ಪ್ರಶಂಸೆ ಸಿಗಲಿದೆ. ಸಹೋದರರಿಂದ ಆರ್ಥಿಕ ಸಹಾಯ ಸಿಗಲಿದೆ. ಹೊಸ ಮನೆ, ವಾಹನ ಸೇರಿದಂತೆ ಆಸ್ತಿ ಖರೀದಿಸುವ ಅವಕಾಶಗಳು ಬರಲಿವೆ.

  • ಅದೃಷ್ಟ ಬಣ್ಣ: ಹಸಿರು
  • ಅದೃಷ್ಟ ಸಂಖ್ಯೆ: 5

ಕರ್ಕಾಟಕ ರಾಶಿ

ಇಂದು ಈ ರಾಶಿಯವರಿಗೆ ಸ್ವಲ್ಪ ಗೊಂದಲದ ದಿನವಾಗಿರಲಿದೆ. ನಿಮ್ಮ ಮಕ್ಕಳ ವೃತ್ತಿಜೀವನದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಹಾಗಾಗಿ ಈ ಕುರಿತು ಪೋಷಕರಾಗಿ ಮಹತ್ತರವಾದ ನಿರ್ಧಾರ ತೆಗೆದುಕೊಳ್ಳಿ. ಕೆಲಸದ ನಿಮಿತ್ ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ಬಾಕಿ ಉಳಿದಿದ್ದ ಹಣ ಹಿಂದುರುಗಿ ಬರಲಿದೆ.

  • ಅದೃಷ್ಣ ಬಣ್ಣ: ಹಾಲಿನ ಬಿಳಿ
  • ಅದೃಷ್ಟ ಸಂಖ್ಯೆ: 7

ಸಿಂಹ ರಾಶಿ

ಇಂದು ಸಿಂಹ ರಾಶಿಯವರಿಗೆ ಸಂತೋಷದ ದಿನವಾಗಿರಲಿದೆ. ಸಹೋದರ, ಸಹೋದರಿಯರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗಲಿದೆ. ಇಂದು ನಿಮ್ಮ ಪ್ರಮುಖವಾದ ಕೆಲಸಕ್ಕೆ ಆದ್ಯತೆ ನೀಡಿ. ವ್ಯವಹಾರದಲ್ಲಿ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

  • ಅದೃಷ್ಟ ಬಣ್ಣ: ಚಿನ್ನ
  • ಅದೃಷ್ಟ ಸಂಖ್ಯೆ: 1

ಕನ್ಯಾ ರಾಶಿ

ಇಂದು ನೀವು ಸಕಾರಾತ್ಮಕ ಫಲತಾಂಶಗಳನ್ನು ನಿರೀಕ್ಷೆ ಮಾಡಬಹುದು. ನಿಮ್ಮನ್ನು ಮತ್ತು ಮಕ್ಕಳನ್ನು ಋತುಮಾನದ ರೋಗಗಳು ನಿಮ್ಮನ್ನು ಕಾಡಬಹುದು. ಪೋಷಕರ ಆರೈಕಗೆ ಸಮಯ ಮೀಸಲಿಡಿ. ಇದರಿಂದ ನಿಮ್ಮ ಮಾನಸಿಕ ಶಾಂತಿ ನೆಲೆಸುತ್ತದೆ.

  • ಅದೃಷ್ಟ ಬಣ್ಣ: ಗಾಢ ಹಸಿರು
  • ಅದೃಷ್ಟ ಸಂಖ್ಯೆ: 6

ತುಲಾ ರಾಶಿ

ಯಾವುದೇ ವಹಿವಾಟುಗಳನ್ನು ಮಾಡುವಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಯಾರಿಗೂ ಸಾಲ ನೀಡಬೇಡಿ. ಮಕ್ಕಳ ಬೇಡಿಕೆಗಳನ್ನು ಪೂರೈಸಿ. ರಾಜಕೀಯ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಆದ್ರೆ ಕೆಲಸದ ಮೇಲೆ ಪೂರ್ಣ ಗಮನ ನೀಡಿದಾಗ ಮಾತ್ರ ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಳವಾಗುತ್ತದೆ. ಇಂದು ತುಲಾ ರಾಶಿಯವರಿಗೆ ಸಾಮಾನ್ಯ ದಿನವಾಗುತ್ತದೆ.

  • ಅದೃಷ್ಟ ಬಣ್ಣ: ತಿಳಿ ನೀಲಿ
  • ಅದೃಷ್ಟ ಸಂಖ್ಯೆ: 8

ವೃಶ್ಚಿಕ ರಾಶಿ

ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಕೆಲಸದಲ್ಲಿ ತಪ್ಪುಗಳನ್ನು ಮಾಡೋದನ್ನು ತಪ್ಪಿಸಿ, ಇಲ್ಲವಾದ್ರೆ ಇದು ನಿಮ್ಮ ಬಡ್ತಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಸುತ್ತಲೂ ಇರೋ ಹಿತಶತ್ರುಗಳ ಚಲನವಲನದ ಮೇಲೆ ನಿಗಾ ಇರಿಸಿ ಮತ್ತು ಅವರಿಂದ ಜಾಗರೂಕರಾಗಿ. ಕುಟುಂಬದೊಳಗೆ ನಡೆಯುತ್ತಿರುವ ಸಂಘರ್ಷಗಳು ಒತ್ತಡವನ್ನಂಟು ಮಾಡುತ್ತವೆ. ಕುಟುಂಬದ ಸದಸ್ಯರ ವೃತ್ತಿಜೀವನದ ಮೇಲೆ ಒತ್ತಾಯದ ನಿರ್ಧಾರಗಳನ್ನು ಹೇರಬೇಡಿ.

  • ಅದೃಷ್ಟ ಬಣ್ಣ: ಕೆಂಗಂದು
  • ಅದೃಷ್ಟ ಸಂಖ್ಯೆ: 3

ಧನು ರಾಶಿ

ಇಂದು ನಿಮ್ಮ ಕೆಲಸಗಳನ್ನು ಮೇಲಾಧಿಕಾರಿಗಳು ಮೆಚ್ಚಿಕೊಳ್ಳುತ್ತಾರೆ. ನೀವು ನೀಡುವ ಸಲಹೆಗಳನ್ನು ಸಹೋದ್ಯೋಗಿಗಳು ಸೇರಿದಂತೆ ಬಾಸ್ ಸಹ ಮೆಚ್ಚಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಅಧ್ಯಯನದ ಸಮಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ಶಿಕ್ಷಕರಿಂದ ಸಂಪೂರ್ಣ ಬೆಂಬಲ ಮತ್ತು ಸಹಾಯ ಸಿಗಲಿದೆ. ವಿದೇಶ ಪ್ರವಾಸ ಭಾಗ್ಯವೂ ನಿಮಗೆ ದೊರೆಯಲಿದೆ. ಆತುರದಿಂದ ತೆಗೆದುಕೊಳ್ಳುವ ನಿರ್ಧಾರಗಳು ಆರ್ಥಿಕ ನಷ್ಟವನ್ನುಂಟು ಮಾಡುತ್ತವೆ.

  • ಅದೃಷ್ಟ ಬಣ್ಣ: ಹಳದಿ
  • ಅದೃಷ್ಟ ಸಂಖ್ಯೆ: 4

ಮಕರ ರಾಶಿ

ಇಂದು ಮಕರ ರಾಶಿಯವರು ಆದಾಯ ಮತ್ತು ಖರ್ಚುಗಳನ್ನು ನಿರ್ವಹಿಸಲು ಕಷ್ಟಪಡಬೇಕಾಗುತ್ತದೆ. ಇಂದು ಇಡೀ ದಿನ ನಿಮ್ಮ ಮನಸ್ಸು ಗೊಂದಲಮಯವಾಗಿರುತ್ತದೆ. ವಾಹನ ಚಾಲನೆ ಮತ್ತು ಪ್ರಯಾಣದ ಸಂದರ್ಭದಲ್ಲಿ ಜಾಗರೂಕರಾಗಿರಿ. ದೈನಂದಿನ ಕೆಲಸಗಳನ್ನು ಮಾಡಲು ಸಹ ಕಷ್ಟಪಡಬೇಕಾಗುತ್ತದೆ. ಆದಾಯ ಹೆಚ್ಚಳ ಮಾಡಿಕೊಳ್ಳಲು ಪ್ರಯತ್ನ ಬೇಕಾಗುತ್ತದೆ.

  • ಅದೃಷ್ಟ ಬಣ್ಣ: ಕಪ್ಪು
  • ಅದೃಷ್ಟ ಸಂಖ್ಯೆ: 10

ಕುಂಭ ರಾಶಿ

ಪ್ರಗತಿ ಮತ್ತು ಬೆಳವಣಿಗೆಗೆ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ವ್ಯಾಪಾರ ಮತ್ತು ಕೆಲಸದಲ್ಲಿರುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಲಿವೆ. ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡುತ್ತೀರಿ. ಕುಟುಂಬದವರು ನಿಮ್ಮ ನಿರ್ಧಾರಗಳಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಕೆಲಸ ಮಾಡುವ ಸ್ಥಳದಲ್ಲಿ ತಾಳ್ಮೆಯಿಂದಿರಿ.

  • ಅದೃಷ್ಟ ಬಣ್ಣ: ನೀಲಿ
  • ಅದೃಷ್ಟ ಸಂಖ್ಯೆ: 11

ಮೀನ ರಾಶಿ

ಇವತ್ತು ಸಂತೋಷವಾಗಿ ಇಡೀ ದಿನವನ್ನು ಕಳೆಯುತ್ತೀರಿ. ವೃತ್ತಿಜೀವನದಲ್ಲಿರುವ ಉನ್ನತ ಸ್ಥಾನಕ್ಕೆ ನೀವು ತಲಪುತ್ತೀರಿ. ಸಹೋದ್ಯೋಗಿಗಳಿಂದ ನಿಮಗೆ ಶೀಘ್ರ ಸಹಾಯ ಸಿಗಲಿದೆ. ತಾಯಿಯಿಂದ ನಿಮಗೆ ಆಶೀರ್ವಾದ ಮತ್ತು ಆರ್ಥಿಕ ಸಹಾಯ ಸಿಗಲಿದೆ. ಆತ್ಮವಿಶ್ವಾಸದಿಂದ ಇಡೀ ದಿನವನ್ನು ಗೆಲುವು ಆಗಿ ಕಳೆಯುತ್ತೀರಿ.

  • ಅದೃಷ್ಟ ಬಣ್ಣ: ಕೇಸರಿ
  • ಅದೃಷ್ಟ ಸಂಖ್ಯೆ: 12