Daily Horoscope: ವೃಷಭ ರಾಶಿಗಿಂದು ಖರ್ಚು ಹೆಚ್ಚು

3  ಡಿಸೆಂಬರ್ 2021, ಶುಕ್ರವಾರದ ಭವಿಷ್ಯ ಹೇಗಿದೆ?
ವೃಷಭ ರಾಶಿಗಿಂದು ಖರ್ಚು ಹೆಚ್ಚು, ಉಳಿದ ರಾಶಿಗಳ ಭವಿಷ್ಯವೇನು?
ಯಾವ ರಾಶಿಗೆ ಶುಭ ಫಲವಿದೆ?

Dina Bhavishya of December 3rd 2021 in Kannada SKR

ಮೇಷ(Aries): ವೃತ್ತಿಯಲ್ಲಿ ಅನುಕೂಲ, ಬಿಡುವಿಲ್ಲದ ದುಡಿಮೆಯಿಂದ ದೇಹಾಯಾಸ. ಆಕಸ್ಮಿಕ ಧನಲಾಭದಿಂದ ಕಾರ್ಯಸಿದ್ಧಿಯಾಗಲಿದೆ. ಕುಟುಂಬದಲ್ಲಿ ಕಹಿ ವಾತಾವರಣ, ದಾಂಪತ್ಯದಲ್ಲಿ ಉತ್ತಮ ಸಹಕಾರದಿಂದ ಕುಟುಂಬದ ವೈಮನಸ್ಸು ಶಮನ. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.

ವೃಷಭ(Taurus): ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗಳಿಗಾಗಿ ಅಲೆದಾಟ. ಖರ್ಚು ವಿಪರೀತ, ವಸ್ತು ನಷ್ಟ. ಸ್ತ್ರೀಯರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ. ಕೋರ್ಟ್ ವ್ಯವಹಾರಗಳಲ್ಲಿ ಹಿನ್ನಡೆ. ವಿದ್ಯಾರ್ಥಿಗಳಿಗೆ ನಿರಾಸೆ, ಸಮಯ ಪೋಲು ಮಾಡಬೇಡಿ. ನಿರುದ್ಯೋಗಿಗಳಿಗೆ ನಿರಾಸೆ. ದುರ್ಗಾ ಕವಚ ಪಠಿಸಿ.

ಮಿಥುನ(Gemini): ಸ್ತ್ರೀಯರಿಂದ ನಷ್ಟಫಲ, ದಾಂಪತ್ಯದಲ್ಲಿ ಅಸಮಾಧಾನ, ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿ ಕಾಡಬಹುದು. ಮೌನಂ ಸರ್ವತ್ರ ಸಾಧನಂ ಎಂಬ ಮಾತು ನೆನಪಿಡಿ. ಹಿತ್ತಾಳೆ ಕಿವಿಯವರಾಗದಂತೆ ಎಚ್ಚರ ವಹಿಸಿ. ಉದ್ಯೋಗಿಗಳಿಗೆ ಉತ್ತಮ ಫಲ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ.

ಕಟಕ(Cancer): ಆರೋಗ್ಯ ಬಾಧೆ, ಸಾಲದಿಂದ ತತ್ತರಿಸುತ್ತೀರಿ, ಕೆಲವೊಂದು ದುಡುಕಿನ ಕೆಲಸಗಳಿಂದ ನೆಮ್ಮದಿ ಹಾಳು. ದೊಡ್ಡ ದೊಡ್ಡ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬೇಡಿ. ಜಾಗ್ರತೆ ಇರಲಿ, ವೃತ್ತಿಯಲ್ಲಿ ಬಲವಿದೆ, ರಸ ವ್ಯಾಪಾರಿಗಳಿಗೆ ಉತ್ತಮ ಫಲ, ದುರ್ಗಾ ದೇವಸ್ಥಾನಕ್ಕೆ ಕ್ಷೀರ ದಾನ ಮಾಡಿ.

Never admit mistakes: ಈ ರಾಶಿಯವರು ತಪ್ಪನ್ನು ಒಪ್ಪಿಕೊಳ್ಳೋರಲ್ಲ!

ಸಿಂಹ(Leo): ಸಹೋದರರ ಸಹಕಾರ, ಮಕ್ಕಳಿಂದ ವಿರೋಧ, ಮಾತಿನ ಕಲಹ, ಮನಸ್ಸು ಕಹಿಯಾಗುತ್ತದೆ. ಸಮಾಧಾನ ಚಿತ್ತದಿಂದ ಯೋಚಿಸಿ ದೃಢ ನಿರ್ಧಾರ ಕೈಗೊಳ್ಳಿ. ಪ್ರಭಾವ ಹಾಗೂ ಸಹಕಾರದಿಂದ ವೃತ್ತಿರಂಗದಲ್ಲಿ ಮುನ್ನಡೆ.  ವಾಹನ ವ್ಯಾಪಾರಿಗಳಿಗೆ ಲಾಭದ ದಿನ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ.

ಕನ್ಯಾ(Virgo): ವೃತ್ತಿರಂಗದಲ್ಲಿ ವಿವೇಚನೆಯಿಂದ ನಡೆಯಿರಿ. ತಾಳಿದವನು ಬಾಳಿಯಾನು ಎಂಬ ಮಾತನ್ನು ಆಗಾಗ ಹೇಳಿಕೊಂಡು ಮುನ್ನಡೆಯುವುದರಿಂದ ಯಶಸ್ಸು, ಪ್ರಯಾಣದಲ್ಲಿ ತೊಡಕು, ಸ್ತ್ರೀಯರು ಜಾಗ್ರತೆಯಿಂದ ಇರಬೇಕು. ಕೃಷಿ-ಹಣ್ಣು-ಹೂವಿನ ವ್ಯಾಪಾರಿಗಳಿಗೆ ಲಾಭ, ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ.

ತುಲಾ(Libra): ವೃತ್ತಿಯಲ್ಲಿ ಬಲ, ನಿಮ್ಮ ಕಾರ್ಯಸಾಧನೆಗೆ ಮನಸೋತು ಶತ್ರುಗಳೂ ಮೂಗಿಗೆ ಬೆರಳಿಟ್ಟಾರು. ವ್ಯಾಪಾರಿಗಳಿಗೆ ಅನುಕೂಲ, ಯಂತ್ರೋದ್ಯಮದಲ್ಲಿರುವವರಿಗೆ ಉತ್ತಮ ಫಲ. ನೂತನ ಗೃಹ ನಿರ್ಮಾಣ, ವಾಹನ ಖರೀದಿ ಸಂಬಂಧಿ ಕೆಲಸಗಳು ಸುಗಮ. ನಿತ್ಯದ ಕೆಲಸ ತುಸು ಶ್ರಮ ಎನಿಸಲಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

Lucky Zodiac of 2022: ಹೊಸ ವರ್ಷ ಈ ಆರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ವೃಶ್ಚಿಕ(Scorpio): ಆರೋಗ್ಯದಲ್ಲಿ ಏರುಪೇರು, ಹೆಣ್ಣುಮಕ್ಕಳು ಮಾತಿನಲ್ಲಿ ಜಾಗೃತರಾಗಿರಿ, ವಿದ್ಯಾರ್ಥಿಗಳಿಗೆ ಕೋಪ ಸ್ವಭಾವ, ಉದ್ಯೋಗರಂಗದಲ್ಲಿ ಬದಲಿ ಅವಕಾಶ ಒದಗಿ ಬರಲಿವೆ. ಮನೆಯಲ್ಲಿ ಶುಭ ಕಾರ್ಯಗಳಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ.

ಧನುಸ್ಸು(Sagittarius): ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಲಿವೆ.  ಸಹೋದರ ವರ್ಗದಿಂದ ಸಂತಸದ ಸುದ್ದಿ ಕಿವಿಗೆ ಬೀಳಲಿದೆ. ಶಾಂತತೆ ಇರಲಿ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರವಾಗಿರಿ. ಅವಿವಾಹಿತರಿಗೆ ಕಂಕಣಬಲ. ಮಹಾಲಕ್ಷ್ಮಿಗೆ ಕುಂಕುಮಾರ್ಚನೆ ಮಾಡಿ.

ಮಕರ(Capricorn): ಅಧಿಕ ವ್ಯಯ, ಮಾತಿನಿಂದ ಕಾರ್ಯ ಸಾಧನೆ, ವಾಗ್ಬಲ ಇರಲಿದೆ. ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಸಾಮಾಜಿಕವಾಗಿ, ಧಾರ್ಮಿಕವಾಗಿ, ದಾನ-ಧರ್ಮಾದಿ ಸದ್ವಿನಿಯೋಗಕ್ಕೆಡೆಯಿದೆ. ದೂರ ಸಂಚಾರದಿಂದ ಕಾರ್ಯಾನುಕೂಲ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಕುಂಭ(Aquarius): ಲಾಭ ಸಮೃದ್ಧಿ, ಕೂಡಿಟ್ಟ ಹಣದ ಸದುಪಯೋಗವಾಗಿ ಬಂಧುಮಿತ್ರರಿಂದ ಪ್ರಶಂಸೆಗೊಳಗಾಗುವಿರಿ. ಕುಟುಂಬ ಸದಸ್ಯರಿಗೆ ಆರೋಗ್ಯದಲ್ಲಿ ವ್ಯತ್ಯಾಸದಿಂದ ಚಿಂತೆ. ದೂರ ಪ್ರಯಾಣ ಮಾಡುವ ಮುನ್ನ ಮನೆದೇವರ ಪ್ರಾರ್ಥನೆ ಮಾಡಿ. ದುರ್ಗಾ ಕವಚ ಪಠಿಸಿ ಅನುಕೂಲವಾಗಲಿದೆ.

ಮೀನ(Pisces): ಮನಸ್ಸು ಚಂಚಲವಾಗಿತ್ತದೆ, ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ವೃತ್ತಿಯಲ್ಲಿ ಅಸಮಾಧಾನ, ಆರೋಗ್ಯ ವೃದ್ಧಿ, ವೈಯಕ್ತಿಕ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಯತ್ನಿಸಿ. ಮಕ್ಕಳೊಂದಿಗೆ ಸಮಯ ಕಳೆಯಿರಿ. ದುರ್ಗಾ ಸಪ್ತಶತಿ ಪಾರಾಯಣ ಮಾಡಿ.
 

 

Latest Videos
Follow Us:
Download App:
  • android
  • ios