Asianet Suvarna News Asianet Suvarna News

Daily Horoscope: ತುಲಾ ರಾಶಿಗಿಂದು ಅನಿರೀಕ್ಷಿತ ಶುಭ, ಉಳಿದ ರಾಶಿಯ ಫಲ ಹೇಗಿದೆ?

28 ನವೆಂಬರ್ 2021, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಶ್ಚಿಕ ರಾಶಿಗೆ ಅದೃಷ್ಟದ ದಿನ, ಸಿಂಹ ರಾಶಿಯವರ ಮನಸ್ಸಿಗೆ ಕ್ಲೇಶ
 

Daily horoscope of November 28th 2021 in Kannada SKR
Author
Bangalore, First Published Nov 28, 2021, 5:05 AM IST
  • Facebook
  • Twitter
  • Whatsapp

ಮೇಷ(Aries): ಸಾಂಪತ್ತಿಕ ಸ್ಥಿತಿ ಉತ್ತಮ. ವ್ಯವಹಾರ ಜಯ. ಪ್ರಯಾಣದಿಂದ ಆಯಾಸವಾದರೂ ಮನಸ್ಸಿಗೆ ಪ್ರಫುಲ್ಲತೆ. ಇಷ್ಟಾರ್ಥ ಸಿದ್ದಿ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಗಣೇಶ ದೇವಾಲಯಕ್ಕೆ ಭೇಟಿ ನೀಡಿ. 

ವೃಷಭ(Taurus): ಗೃಹಾಲಂಕಾರ, ಬಟ್ಟೆಬರೆಯ ನಿಮಿತ್ತ ಅಧಿಕ ವ್ಯಯ, ವಾಗ್ವಾದ ಘರ್ಷಣೆಗಳಾಗಿ ಆಪ್ತರು ದೂರಾಗುವ ಸಾಧ್ಯತೆ. ವಿವಾಹಾಪೇಕ್ಷಿಗಳಿಗೆ ಪರೀಕ್ಷೆಯ ದಿನ. ಕೃಷಿಕರಿಗೆ ಲಾಭ, ಸಂತೋಷದ ದಿನ. ಗ್ರಾಮದಲ್ಲಿ ಹಿತವಾದ ವಾತಾವರಣ. ಉದ್ಯೋಗರಂಗದಲ್ಲಿ ಬದಲಿ ಅವಕಾಶ ಒದಗಿ ಬರಲಿವೆ. ಅವರೆ ಧಾನ್ಯ ದಾನ ಮಾಡಿ. 

ಮಿಥುನ(Gemini): ಸಹೋದರರ ಸಹಕಾರ ಧೈರ್ಯ ತರಲಿದೆ. ಮನೆಯಲ್ಲಿ ಮಂಗಲ ಕಾರ್ಯ ನಡೆಯುವುದು. ಯಾವ ಕಾರ್ಯವೂ ಚೆನ್ನಾಗಿ ಕೈಗೂಡುವುದು. ಲಾಭ ಸಮೃದ್ಧಿಯಿದ್ದರೂ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸದಿಂದ ಕೊಂಚ ಆತಂಕ ಕಾಡಬಹುದು. ಹರಕೆಗಳಿದ್ದರೆ ಶೀಘ್ರ ಈಡೇರಿಸಿ. ಹಸುವಿಗೆ ಅಕ್ಕಿಬೆಲ್ಲ ತಿನ್ನಿಸಿ. 

ಕಟಕ(Cancer): ಕುಟುಂಬ ಸೌಖ್ಯ, ಮನೆಯಲ್ಲಿ ಶುಭ ಫಲ, ಇಷ್ಟ ಭೋಜನದಿಂದ ಸಂತೃಪ್ತಿ. ವ್ಯಾಪಾರಸ್ಥರಿಗೆ ಕೆಲಸದಲ್ಲಿ ಕಿರಿಕಿರಿ, ಉದಾಸೀನತೆಯಿಂದ ದಿನನಷ್ಟವಾಗುವುದನ್ನು ತಪ್ಪಿಸಿ. ಆಗಬೇಕಾದ ಕೆಲಸಕ್ಕಾಗಿ ಮನೋಇಚ್ಛೆ ಒಗ್ಗೂಡಿಸಿ ಮುನ್ನುಗ್ಗಿದರೆ ಯಶಸ್ಸು ಸಿದ್ಧಿ. ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ.

ಸಿಂಹ(Leo): ವ್ಯಯದ ದಿನ, ನಷ್ಟಫಲ. ಮನೆಯಲ್ಲಿ ಕೆಲ ಅಹಿತಕರ ಘಟನೆಗಳು ನಡೆಯುವ ಸಂಭವ. ಮನಸ್ಸಿಗೆ ಕ್ಲೇಶ. ಮಕ್ಕಳಿಂದ ಸಹಾಯ, ನಿಧಾನಗತಿಯ ಕಾರ್ಯ ಪ್ರವೃತ್ತಿ. ಸ್ವಉದ್ಯೋಗ ಆರಂಭಿಸಲಿಚ್ಛಿಸುವವರಿಗೆ ಆ ಸಂಬಂಧ ಮಾತುಕತೆಗೆ ಒಳ್ಳೆ ದಿನ. ಕೃಷ್ಣ ಪ್ರಾರ್ಥನೆ ಮಾಡಿ.

Power around you: ನಿಮ್ಮ ಸುತ್ತ ಇರೋ ಪ್ರಭಾವಳಿಯನ್ನು ತಿಳಿಯುವುದು ಹೇಗೆ?

ಕನ್ಯಾ(Virgo): ವಾಹನ, ವ್ಯಾಪಾರ, ಕುಶಲ ಕೈಗಾರಿಕೆಯವರಿಗೆ, ವಸ್ತ್ರ ವ್ಯಾಪಾರಿಗಳಿಗೆ, ವಾಹನ ಚಾಲಕರಿಗೆ ಲಾಭ. ಆರೋಗ್ಯದಲ್ಲಿ ವ್ಯತ್ಯಾಸ, ಆಸ್ಪತ್ರೆ ಓಡಾಟದಿಂದ ಖರ್ಚು ಹೆಚ್ಚು. ದೂರಪ್ರಯಾಣದಲ್ಲಿ ಮೋಸ ಹೋಗದ ಹಾಗೆ ಹೆಚ್ಚಿನ ಎಚ್ಚರಿಕೆ ಅಗತ್ಯ. ಬಹಳ ಕಾಲದಿಂದ ಮುಂದೂಡಿದ ಕಾರ್ಯ ತಾನಾಗಿಯೇ ಸಿದ್ಧಿಸುವುದು. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ.

ತುಲಾ(Libra): ಮನಸ್ಸು ಬಿಚ್ಚಿ ಮಾತನಾಡುವುದರಿಂದ ಬಹುಕಾಲದಿಂದ ಮನಸ್ಸನ್ನು ಹದಗೆಡಿಸಿದ್ದ ಸಮಸ್ಯೆಗೆ ಪರಿಹಾರ. ಬೆಟ್ಟದಂತೆ ಬಂದ ಕಷ್ಟ ಬೆಣ್ಣೆಯಂತೆ ಕರಗಿ ಹೋಗುವುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹಲವಾರು ಅವಕಾಶಗಳು ಕಂಡುಬರುತ್ತದೆ. ಕೆಲಸಕ್ಕೆ ಮಾನ್ಯತೆ, ಮನೋಲಾಭ, ಆದಿತ್ಯ ಹೃದಯ ಪಠಿಸಿ.

Sexy zodiac Signs: ನಿಮ್ಮ ರಾಶಿಚಕ್ರಕ್ಕೆ ಯಾವುದು ಸೂಕ್ತ?

ವೃಶ್ಚಿಕ(Scorpio): ಕಾರ್ಯಸಿದ್ಧಿ, ಕೆಲಸಗಳು ಸುಲಲಿತವಾಗುತ್ತದೆ. ಯಾವ ವಿಧದ ವೃತ್ತಿಯವರಿಗೂ ಶುಭಫಲ. ಶತ್ರುಬಾಧೆಯಿಂದ ತಪ್ಪಿಸಿಕೊಳ್ಳಲು ನವಗ್ರಹ ಪ್ರಾರ್ಥನೆ ಮಾಡಿ. ಮನೆ, ನಿವೇಶನ ಖರೀದಿ ಸಂಬಂಧ ಮಾತುಕತೆಗೆ ಉತ್ತಮ ದಿನ. ಗೃಹದಲ್ಲಿ ಮಂಗಳಕಾರ್ಯಕ್ಕೆ ನಾಂದಿ.

ಧನುಸ್ಸು(Sagittarius): ಬುದ್ಧಿಮಂದ, ಮಕ್ಕಳಿಂದ ವಿರೋಧ, ವ್ಯತಿರಿಕ್ತ ಫಲಗಳಿವೆ. ಅಮ್ಮನವರಿಗೆ ಪ್ರಾರ್ಥನೆ ಮಾಡಿ ದೈವಾನುಕೂಲ ಪಡೆಯಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಬಂಧ ಅರಸಿ ಬರುವುದು. ಸಂತಾನ ವಿಷಯದಲ್ಲಿ ಸಕಾರಾತ್ಮಕ ಸುದ್ದಿ.

ಮಕರ(Capricorn): ಪ್ರಯಾಣದಲ್ಲಿ ತೊಡಕು, ಕೃಷಿಯಲ್ಲಿ ವಿಘ್ನಗಳು ಸಂಭವ. ದುರ್ಗಾ ಕವಚ ಪಠಿಸಿ. ಅನಿರೀಕ್ಷಿತ ಶುಭದಿಂದ ಸಂತಸ. ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ನೆಂಟರಿಷ್ಟರ ಆಗಮನದಿಂದ ಸಂತಸ. ವಾತದಿಂದ ದೇಹಾಯಾಸ.

ಕುಂಭ(Aquarius): ಭಯದ ವಾತಾವರಣ, ಸಹೋದರರ ಅಸಹಕಾರ, ಕೌಟುಂಬಿಕವಾಗಿ ಕಿರಿಕಿರಿಗಳು ತಪ್ಪಲಾರವು. ಮನ್ಸಸಿನ ಗೊಂದಲಗಳಿಗೆಲ್ಲ ಸಂಗಾತಿಯ ಮಾರ್ಗದರ್ಶನ ಪಡೆಯಿರಿ. ಆದಾಯವಿದ್ದರೂ ದುಡುಕದೇ ಖರ್ಚನ್ನು ಹೆಚ್ಚು ಯೋಚಿಸಿ ಮಾಡಿ.  ಗಣಪತಿ ಪ್ರಾರ್ಥನೆ ಮಾಡಿ

ಮೀನ(Pisces): ಆಹಾರದಲ್ಲಿ ವ್ಯತ್ಯಾಸ. ನೀರಿನ ವ್ಯತ್ಯಾಸದಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ದೂರ ಸಂಚಾರದಿಂದ ಕಾರ್ಯಾನುಕೂಲ. ಸಾಂಪತ್ತಿಕ ಸ್ಥಿತಿ ಉತ್ತಮ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತಸ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

Follow Us:
Download App:
  • android
  • ios