Asianet Suvarna News Asianet Suvarna News

Daily Horoscope:ಈ ರಾಶಿಯವರ ಮಧುರ ಮಾತಿಗೆ ಜನ ಮನಸೋಲುತ್ತಾರೆ

22  ನವೆಂಬರ್ 2022, ಮಂಗಳವಾರ ಮಿಥುನ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಯಶಸ್ಸು, ಕಟಕ ರಾಶಿಯವರಿಗೆ ವೆಚ್ಚ ಹೆಚ್ಚಳ

Daily Horoscope of November 22nd 2022 in Kannada
Author
First Published Nov 22, 2022, 5:00 AM IST

ಮೇಷ(Aries): ಇಂದು ಕುಟುಂಬ ಸದಸ್ಯರು ಹಾಗೂ ಬಂಧುಗಳ ಜೊತೆಗೆ ಉತ್ತಮವಾಗಿ ಸಮಯ ಕಳೆಯುತ್ತೀರಿ. ಸ್ನೇಹಿತರ ಭೇಟಿಯಿಂದ ಲಾಭ. ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಮ್ಮ ಯೋಚನೆಗೆ ಕುಟುಂಬ ಸದಸ್ಯರ ಪ್ರೋತ್ಸಾಹ. ಅಪರಿಚಿತ ವ್ಯಕ್ತಿಯ ಜೊತೆಗೆ ಯಾವುದೇ ಪ್ರಮುಖವಾದ ಮಾತುಕತೆ ಅಥವಾ ಕೆಲಸ ಮಾಡುವ ಮುನ್ನ ಈ ಬಗ್ಗೆ ಚರ್ಚೆ ನಡೆಸಿ. ಸಣ್ಣ ನಿರ್ಲಕ್ಷ್ಯವೂ ವಂಚನೆಗೆ ಕಾರಣವಾಗಬಲ್ಲದು.

ವೃಷಭ(Taurus):ಪ್ರಭಾವಶಾಲಿ ಹಾಗೂ ಮಧುರ ಮಾತಿನಿಂದ ಇತರರ ಮೇಲೆ ಪ್ರಭಾವ ಬೀರುತ್ತೀರಿ. ಜನರು ನಿಮ್ಮ ವ್ಯಕ್ತಿತ್ವದೆಡೆಗೆ ಆಕರ್ಷಿತರಾಗುತ್ತಾರೆ. ಮನೆಗೆ ವಿಶೇಷ ವ್ಯಕ್ತಿಯ ಆಗಮನದಿಂದ ಪ್ರಮುಖ ವಿಚಾರಗಳ ಚರ್ಚೆ ನಡೆಯಲಿದೆ. ನೀವು ನಿಮ್ಮ ಸಾಮರ್ಥ್ಯವನ್ನು ಸಕಾರಾತ್ಮಕ ಮಾರ್ಗದಲ್ಲಿ ಬಳಸಿದ್ರೆ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಸ್ವಾರ್ಥ ಹಾಗೂ ಅಹಂ ಇತರರೊಂದಿಗೆ ವಾಗ್ವಾದಕ್ಕೆ ಕಾರಣವಾಗಲಿದೆ. ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ. 

ಮಿಥುನ(Gemini):ಹಣಕಾಸಿನ ವಿಚಾರಗಳಿಗೆ ಸಂಬಂಧಿಸಿ ಕೆಲವು ಹೊಸ ಯೋಜನೆಗಳನ್ನು ರೂಪಿಸುತ್ತಿರಿ ಹಾಗೂ ಅದರಲ್ಲಿ ಯಶಸ್ಸು ಕೂಡ ಗಳಿಸುತ್ತೀರಿ. ಯಾವುದೇ ಕಾರಣಕ್ಕೂ ಪ್ರಯತ್ನ ನಿಲ್ಲಿಸಬೇಡಿ. ಕುಟುಂಬದ ನೆಮ್ಮದಿಗೆ ಹಣ ವ್ಯಯಿಸುತ್ತೀರಿ. ಅಧಿಕ ವೆಚ್ಚದಿಂದ ಹೊರೆ ಹೆಚ್ಚುವ ಸಾಧ್ಯತೆಯಿದ್ದು, ಎಚ್ಚರ ವಹಿಸಿ. ಕುಟುಂಬ ಸದಸ್ಯರ ಅನಾರೋಗ್ಯ ಚಿಂತೆಗೆ ಕಾರಣವಾಗಲಿದೆ. ಉದ್ಯಮ ಸ್ಥಳದಲ್ಲಿ ಬದಲಾವಣೆ ಮಾಡಿ.

ಕಟಕ(Cancer):ಹೂಡಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಮಯ ಕಳೆಯುತ್ತೀರಿ. ವೆಚ್ಚ ಹೆಚ್ಚುವ ಸಾಧ್ಯತೆಯಿದ್ದರೂ ಅದಕ್ಕೆ ತಕ್ಕುದಾದ ಆದಾಯದ ಮೂಲವೂ ಇರಲಿದೆ. ಹೀಗಾಗಿ ಯಾವುದೇ ಸಂಕಷ್ಟ ಎದುರಾಗೋದಿಲ್ಲ. ಕುಟುಂಬ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಮಯ ಕಳೆಯಿರಿ. ಪ್ರಭಾವಿ ವ್ಯಕ್ತಿಗಳ ನೆರವಿನಿಂದ ಉದ್ಯಮದಲ್ಲಿ ಯಶಸ್ಸು ಲಭಿಸುವ ಸಾಧ್ಯತೆ. 

ದೇವರ ಫೋಟೋಗೆ ಪೂಜಿಸುತ್ತೀರೋ, ಮೂರ್ತಿಗೋ? ವ್ಯತ್ಯಾಸವೇನು ತಿಳ್ಕೊಳ್ಳಿ

ಸಿಂಹ(Leo):ಇಂದು ನೀವು ಅಪರಿಚಿತ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದೀರಿ. ಇದರಿಂದ ನಿಮಗೆ ಪ್ರಯೋಜನವಾಗಲಿದೆ ಕೂಡ. ಆಸ್ತಿ ಮಾರಾಟ ಮಾಡುವ ಯೋಜನೆಗಳಿದ್ದರೆ ಅದರ ಮೇಲೆ ಗಮನ ಕೇಂದ್ರೀಕರಿಸಿ. ಮನೆಯ ಹಿರಿಯರ ಆರೋಗ್ಯ ನಿರ್ಲಕ್ಷಿಸಬೇಡಿ. ಕೋರ್ಟ್ ಕೇಸ್ ಮನಸ್ಸಿನ ನೆಮ್ಮದಿ ಕೆಡಿಸುವ ಸಾಧ್ಯತೆಯಿದೆ. ಮಾರ್ಕೆಟಿಂಗ್ ಹಾಗೂ ಮಾಧ್ಯಮಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳು ಸಮರ್ಪಕವಾಗಿ ಪೂರ್ಣಗೊಳ್ಳಲಿವೆ. ಪತಿ ಹಾಗೂ  ಪತ್ನಿ ನಡುವೆ ವೈಮನಸ್ಸು. 

ಕನ್ಯಾ(Virgo):ಕೆಲಸದ ಮೇಲೆ ಪೂರ್ಣ ಪ್ರಮಾಣದಲ್ಲಿ ಗಮನ ಕೇಂದ್ರೀಕರಿಸುತ್ತೀರಿ. ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಮೂಡುವ ಸಾಧ್ಯತೆ. ಇದ್ರಿಂದ ನಿದ್ರಾಭಂಗ. ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗುವ ಜನರೊಂದಿಗೆ ಸಮಯ ಕಳೆಯಿರಿ. ಉದ್ಯಮದ ಮೇಲೆ ಸಂಪೂರ್ಣ ಗಮನ ನೀಡಿ. ಆರೋಗ್ಯ ಉತ್ತಮವಾಗಿರಲಿದೆ.

ತುಲಾ(Libra):ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಪ್ರಮುಖ ವ್ಯಕ್ತಿಯೊಬ್ಬರ ನೆರವಿನಿಂದ ಮಕ್ಕಳ ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಲಿದ್ದೀರಿ. ಮನೆಯ ಹಿರಿಯರ ಪ್ರೀತಿ ಹಾಗೂ ಆಶೀರ್ವಾದ ನಿಮಗೆ ಶ್ರೀರಕ್ಷೆ. ಕಿರಿಕಿರಿ ಹಾಗೂ ಅಸಹನೆ ಕೂಡ ನಿಮ್ಮನ್ನು ಕಾಡಲಿದೆ. ವೃತ್ತಿ ಕ್ಷೇತ್ರದ ಹೊರಗೆ ಹಾಗೂ ಸಾರ್ವಜನಿಕ ವಲಯದಲ್ಲಿ ನಿಮ್ಮ ಸಂಬಂಧವನ್ನು ಬಲಗೊಳಿಸಿ. ಮನೆಯ ವಾತಾವರಣದಲ್ಲಿ ಶಿಸ್ತನ್ನು ನಿರ್ವಹಣೆ ಮಾಡೋದು ಅಗತ್ಯ. 

ವೃಶ್ಚಿಕ(Scorpio):ನಿಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಕೆಲವು ಬದಲಾವಣೆಗಳನ್ನು ತನ್ನಿ. ಇದ್ರಿಂದ ನಿಮ್ಮ ಕಾರ್ಯಕ್ಷಮತೆ ಹೆಚ್ಚಲಿದೆ. ಧರ್ಮ ಹಾಗೂ ಕರ್ಮಕ್ಕೆ ಸಂಬಂಧಿಸಿದ ವಿಚಾರಗಳಿಗೆ ಮಹತ್ವ ನೀಡುತ್ತೀರಿ. ಆಸ್ತಿಗೆ ಸಂಬಂಧಿಸಿದ ವಿವಾದ ತಾರಕಕ್ಕೇರಲಿದೆ. ಹಣಕ್ಕೆ ಸಂಬಂಧಿಸಿದ ವಿಷಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಕೋಪವನ್ನು ನಿಗ್ರಹಿಸಿ. 

ಧನುಸ್ಸು(Sagittarius):ಯೋಜಿತ ವಿಧಾನದಲ್ಲಿ ಬಹುತೇಕ ಕೆಲಸಗಳನ್ನು ಇಂದು ಪೂರ್ಣಗೊಳಿಸುತ್ತೀರಿ. ನಿಮ್ಮ ಒಳ್ಳೆಯ ಗುಣ ಇತರರನ್ನು ನಿಮ್ಮೆಡೆಗೆ ಆಕರ್ಷಿಸಲಿದೆ. ನಿಮ್ಮ ಸಾಮರ್ಥ್ಯವನ್ನು ಒಗ್ಗೂಡಿಸಿ ಕೆಲಸ -ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸಲು ಯಶಸ್ವಿಯಾಗುತ್ತೀರಿ. ಉದ್ಯಮದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯಲಿವೆ.

ಈ Zodiac Signs ಜನ ಭರವಸೆ ಈಡೇರಿಸ್ತಾರೆ ಅನ್ನೋ ನಿರೀಕ್ಷೆ ಬಿಟ್ಬಿಡಿ

ಮಕರ(Capricorn): ಧಾರ್ಮಿಕ ಸಂಸ್ಥೆಗಳೊಂದಿಗೆ ವಿವಿಧ ಕಾರ್ಯಗಳಲ್ಲಿ ಕೈಜೋಡಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ನಿಮ್ಮ ಗೌರವ ಹಾಗೂ ಆಧ್ಯಾತ್ಮಿಕ ಪ್ರಗತಿ ಇಂದು ಇನ್ನಷ್ಟು ಹೆಚ್ಚಲಿದೆ. ಆಸ್ತಿ ಖರೀದಿ ಅಥವಾ ಮಾರಾಟದ ಯೋಜನೆಗಳು ಯಶಸ್ವಿಯಾಗಲಿವೆ. ಯಾವುದೇ ರೀತಿಯ ಕಾಗದಪತ್ರ ವ್ಯವಹಾರಗಳಿದ್ದರೂ ಹೆಚ್ಚಿನ ಎಚ್ಚರ ವಹಿಸಿ. ಸಣ್ಣ ತಪ್ಪು ದೊಡ್ಡ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಯಿದೆ. ಉದ್ಯಮ ಸಂಬಂಧಿ ಚಟುವಟಿಕೆಗಳು ಸುಗಮವಾಗಿ ಸಾಗಲಿವೆ. 

ಕುಂಭ(Aquarius):ದೇವರ ಅನುಗ್ರಹದ ಅನುಭವ ಇಂದು ನಿಮಗಾಗುತ್ತದೆ. ಎಲ್ಲ ಕೆಲಸ-ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ. ಸಂಬಮಧಿಗಳು ಹಾಗೂ ನೆರೆಹೊರೆಯವರ ಜೊತೆಗಿನ ಸಂಬಂಧ ಸುಧಾರಿಸಲಿದೆ. ಆದಾಯದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ಉದ್ಯಮ ಅಥವಾ ವೃತ್ತಿಯ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುವುದು ಅತ್ಯಗತ್ಯ.

ಮೀನ(Pisces):ಪ್ರಾಯೋಗಿಕವಾಗಿ ಇಂದು ಎಲ್ಲ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ನಿಮ್ಮ ಬುದ್ಧಿವಂತಿಕೆಯನ್ನು ಸ್ನೇಹಿತರು ಹಾಗೂ ಬಂಧುಗಳು ಶ್ಲಾಘಿಸಲಿದ್ದಾರೆ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ಕೆಲವೊಂದು ಕೆಲಸಗಳಲ್ಲಿ ತಪ್ಪಾಗುವ ಸಾಧ್ಯತೆ. ಪತಿ ಹಾಗೂ ಪತ್ನಿ ನಡುವೆ ವೈಮನಸ್ಸು. ಆರೋಗ್ಯ ಉತ್ತಮವಾಗಿರಲಿದೆ. 
 

Follow Us:
Download App:
  • android
  • ios