Daily Horoscope: ವೈವಾಹಿಕ ಸಮಸ್ಯೆಗಳಿಂದ ಈ ರಾಶಿ ನುಜ್ಜುಗುಜ್ಜು..

6 ಮೇ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕನ್ಯಾ ರಾಶಿಗೆ ತಪ್ಪು ನಿರ್ಧಾರದಿಂದ ಸಮಸ್ಯೆ

Daily horoscope of May 6th 2022 in Kannada SKR

ಮೇಷ(Aries): ವೈಯಕ್ತಿಕ ಸಮಸ್ಯೆಗಳಿಂದ ದೂರ ಓಡಬೇಡಿ. ಅವುಗಳ ಜೊತೆಗೇ ಇದ್ದು ಬಗೆಹರಿಸುವ ಬಗ್ಗೆ ಗಮನ ಹರಿಸಿ. ಅವಮಾನವಾಗುವಂಥ ಸಂದರ್ಭಗಳು ಎದುರಾಗಬಹುದು. ವಿದ್ಯಾರ್ಥಿಗಳು ಮೊಂಡುತನ ಬಿಟ್ಟು ಓದುವುದರತ್ತ, ತಮ್ಮ ಪ್ರತಿಭೆಗಳತ್ತ ಹೆಚ್ಚು ಗಮನ ಹರಿಸಬೇಕು. ಲಲಿತಾ ಸಹಸ್ರನಾಮ ಪಠಣ ಮಾಡಿ. 

ವೃಷಭ(Taurus): ಪೋಷಕರಿಗೆ ತಿರುಗಿ ಹೇಳಿ ಅವರ ಮನ ನೋಯಿಸುವಿರಿ. ಉಳಿತಾಯದತ್ತ ಗಮನ ಹರಿಸದಿದ್ದರೆ ಭವಿಷ್ಯದಲ್ಲಿ ಪರದಾಡಬೇಕಾಗುತ್ತದೆ. ಯಾವುದೋ ಆಸ್ತಿ, ಹಣ ಬಿಟ್ಟಿ ಬರಬೇಕೆಂಬ ನಿರೀಕ್ಷೆ ಬೇಡ. ನಿಮ್ಮ ಜೀವನವನ್ನು ನೀವೇ ಕಟ್ಟಿಕೊಳ್ಳಿ. ಮಹಾಲಕ್ಷ್ಮೀ ಧ್ಯಾನ ಮಾಡಿ.

ಮಿಥುನ(Gemini): ವೈವಾಹಿಕ ಜೀವನದ ಸಮಸ್ಯೆಗಳು ಮುಗಿಯುವಂತೆ ಕಾಣದೆ ದಿಗಿಲಾಗಬಹುದು. ಕೆಲ ಪರಿಚಿತರು ಸಿಕ್ಕಿ ಸಂತೋಷವಾಗುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆಧ್ಯಾತ್ಮ ಸಂಗತಿಗಳು ಸೆಳೆಯುವುವು. ಉದ್ಯೋಗದಲ್ಲಿ ಸಾಮಾನ್ಯ ದಿನ. ದುರ್ಗಾ ಅಷ್ಟೋತ್ತರ ಹೇಳಿಕೊಳ್ಳಿ.

ಕಟಕ(Cancer): ಗುರಿ ಸಾಧನೆಗೆ ಅಡ್ಡಿ ಆತಂಕಗಳು ಎದುರಾಗುವುವು. ಪರಿಚಿತರೇ ವಂಚಿಸಬಹುದು. ಅನಾರೋಗ್ಯ ಕಾರಣದಿಂದ ತೂಕ ಇಳಿಕೆಯಾಗಬಹುದು. ಈ ಬಗ್ಗೆ ಗಮನ ಹರಿಸಿ. ಪ್ರೇಮ ವ್ಯವಹಾರಗಳಲ್ಲಿ ರಗಳೆ, ತಾಪತ್ರಯ ಹೆಚ್ಚುವುದು. ಸೌಂದರ್ಯ ಲಹರಿ ಹೇಳಿ. 

ತಪ್ಪು ಸಮಯದಲ್ಲಿ ಈ ಕಾರ್ಯಗಳ ಮಾಡಿದರೆ ಭಾರೀ ನಷ್ಟ!

ಸಿಂಹ(Leo): ಪ್ರೀತಿಯ ಬಗ್ಗೆ ನಿಮ್ಮ ಯೋಚನೆಗಳು ಬದಲಾಗಬಹುದು. ಯಾರಿಗೂ ನಂಬಿಸಿ ಮೋಸ ಮಾಡಬೇಡಿ. ಎಲ್ಲರ ಭಾವನೆಗಳಿಗೂ ಬೆಲೆ ಕೊಡಿ. ಸಾಲ ಹೆಚ್ಚಾಗಬಹುದು. ಸಂಬಳವೂ ಹೆಚ್ಚಲಿದೆ. ಕುಟುಂಬದ ಒಟ್ಟು ಆದಾಯವೂ ಹೆಚ್ಚಲಿದೆ. ಹೀಗಾಗಿ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ದೇವಿ ಸ್ತ್ರೋತ್ರ ಹೇಳಿ. 

ಕನ್ಯಾ(Virgo): ನೈಜತೆಗೆ ದೂರವೆನಿಸುವಂಥ ದಿನವಾಗುವುದು. ಸೌಂದರ್ಯವರ್ಧಕಗಳಿಗಾಗಿ ಖರ್ಚು ಮಾಡುವಿರಿ.  ಹಿಂದೆ ಮುಂದೆ ಯೋಚಿಸದೇ ಸಡನ್ನಾಗಿ ತೆಗೆದುಕೊಳ್ಳುವ ನಿರ್ಧಾರದಿಂದ ಸಮಸ್ಯೆ ಉಂಟಾಗಬಹುದು. ಮಹಾಲಕ್ಷ್ಮೀಗೆ ಬಿಳಿ ಹೂಗಳನ್ನು ಅರ್ಪಿಸಿ. 

ತುಲಾ(Libra): ನೀವು ಹೇಳಬೇಕು ಅಂದುಕೊಂಡಿದ್ದನ್ನು ಮನಸ್ಸು ಬಿಚ್ಚಿ ಹೇಳಲಾಗದು. ಗೊಂದಲ, ಅಧೈರ್ಯ ಉಂಟಾಗಬಹುದು. ಇದರಿಂದ ಕಳೆದುಕೊಳ್ಳುವವರು ನೀವೇ ಎಂಬುದು ತಿಳಿದಿರಲಿ. ಆರೋಗ್ಯ ಸ್ಥಿರವಾಗಿರುವುದು. ಮುತ್ತೈದೆಗೆ ಬಾಗೀನ ನೀಡಿ. 

ವೃಶ್ಚಿಕ(Scorpio): ನಿಮ್ಮಿಂದ ಇನ್ನೊಬ್ಬರಿಗೆ ನೋವಾಗುತ್ತಿರುವ ಬಗ್ಗೆ ಕೊಂಚ ಯೋಚಿಸಿ. ಸ್ವಾರ್ಥತೆಗೂ ಮಿತಿ ಬೇಕು. ಇನ್ನೊಬ್ಬರ ವಸ್ತುಗಳನ್ನು, ಮತ್ತೊಬ್ಬರಿಗೆ ಸೇರುವ ವ್ಯಕ್ತಿಗಳನ್ನು ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಬೇಡ. ಇದರಿಂದ ಕಷ್ಟ ಅನುಭವಿಸಬೇಕಾಗುತ್ತದೆ. ತಾಯಿಯ ಆಶೀರ್ವಾದ ಪಡೆಯಿರಿ. 

ಧನುಸ್ಸು(Sagittarius): ಮನಸ್ಸಿಗೆ ಖುಷಿ ನೀಡುವ ಕೆಲವು ಕೆಲಸದಲ್ಲಿ ತೊಡಗಿಸಿಕೊಳ್ಳುವಿರಿ. ವ್ಯಾಪಾರದಲ್ಲಿ ಮಿಶ್ರ ಫಲ. ಸ್ವಂತ ಉದ್ಯೋಗದಲ್ಲಿರುವವರಿಗೆ ಉತ್ತಮ ಫಲಗಳಿವೆ. ಮನೆ ಕುರಿತು ನೀವು ತೆಗೆದುಕೊಂಡ ನಿರ್ಧಾರಗಳು ಸರಿ ಎಂದು ಸಾಬೀತಾಗಲಿವೆ. ತಾಯಿಯ ಕೈಯಿಂದ ಸಿಹಿ ತಿನ್ನಿಸಿಕೊಳ್ಳಿ. 

ಮಕರ(Capricorn): ದೂರ ಪ್ರಯಾಣಕ್ಕೆ ಸಜ್ಜಾಗುವಿರಿ. ಮಕ್ಕಳ ಹೊಸ ವ್ಯವಹಾರದಲ್ಲಿ ಹಿರಿಯರ ಸಹಾಯ ಸಹಕಾರ ದೊರೆಯಲಿದೆ. ಪ್ರಭಾವ ಬೀರುವ ವ್ಯಕ್ತಿಗಳ ಒಡನಾಟದಿಂದ ಯೋಚನೆಗಳಲ್ಲಿ ಫಲಕಾರಿ ಬೆಳವಣಿಗೆಗೆ ಕಾರಣವಾಗಲಿದೆ. ದುರ್ಗಾ ಕವಚ ಸ್ತೋತ್ರ ಹೇಳಿಕೊಳ್ಳಿ. 

ಮನೆ ಬಾಡಿಗೆಗೆ ನೀಡುವ ಮುನ್ನ ಈ vastu tips ಗಮನಿಸಿ

ಕುಂಭ(Aquarius): ಎಲ್ಲರ ಭಾವನೆಗಳಿಗೆ ಬೆಲೆ ಕೊಡುವ ಭರದಲ್ಲಿ, ಯಾರಿಗೂ ನೋವಾಗಬಾರದೆಂದು ನಿಮ್ಮನ್ನು ನೀವು ನೋಯಿಸಿಕೊಳ್ಳಬೇಡಿ. ಸಂಕೋಚಕ್ಕೆ ಬಸಿರಾಗುವ ಸ್ವಭಾವ ಬಿಡಲು ಯತ್ನಿಸಿ. ಯಾರು ಏನಾದರೂ ಅಂದುಕೊಳ್ಳಲಿ. ನಿಮ್ಮ ಹವ್ಯಾಸಗಳಿಗೆ ಸಮಯ ನೀಡಿ. ಲಕ್ಷ್ಮೀ ಅಷ್ಟಕಂ ಹೇಳಿಕೊಳ್ಳಿ. 

ಮೀನ(Pisces): ರಫ್ತು ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಇರಲಿದೆ. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಪರಿಚಯವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಲಾಭದಿಂದ ಅದೃಷ್ಟ ಬದಲಾಗಲಿದೆ. ಬಂಧು ಮಿತ್ರರು ನಿಮ್ಮನ್ನು ಆದರದಿಂದ ಕಾಣುತ್ತಾರೆ. ಲಲಿತಾ ಸಹಸ್ರನಾಮ ಹೇಳಿಕೊಳ್ಳಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios