1 ಮಾರ್ಚ್ 2022, ಮಂಗಳವಾರದ ಭವಿಷ್ಯ ಹೇಗಿದೆ?ಯಾವ ರಾಶಿಗೆ ಶುಭ ಫಲವಿದೆ?ಕಾಯಕವೇ ಕೈಲಾಸ ಎಂದವರಿಗೆ ಸಮೃದ್ಧಿ

ಮೇಷ(Aries): ಇಂದು ನಿಮ್ಮ ಕಾಯಕವೇ ಕೈಲಾಸ ಎಂಬ ನಂಬಿಕೆಗೆ ಪುಷ್ಠಿ ದೊರೆಯುವುದು. ನಿಮ್ಮ ಪರಿಶ್ರಮಕ್ಕೆ ಅಪಾರ ಮೆಚ್ಚುಗೆ ಸಿಗುವುದು. ಉದ್ಯೋಗ, ವ್ಯಾಪಾರ, ಉದ್ಯಮ, ಕೃಷಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಿರುವಿರಿ. ನಿಮ್ಮ ಕೆಲಸಕ್ಕೆ ಸಂಗಾತಿಯ ಸಾಥ್ ಸಿಗುವುದು. ಶಿವಧ್ಯಾನ ಮಾಡಿ. 

Add Asianetnews Kannada as a Preferred SourcegooglePreferred

ವೃಷಭ(Taurus): ಮತ್ತೊಬ್ಬರನ್ನು ಮೆಚ್ಚಿಸಲು ವಿನಾ ಕಾರಣ ಮಾತನಾಡಬೇಡಿ. ನಿಜವೇನೋ ಅಷ್ಟನ್ನೇ ಮಾತನಾಡಿ. ಮಗುವಿಗೆ ಅನಾರೋಗ್ಯ ಕಾಡಿ ಕಂಗಾಲಾಗುವಿರಿ. ಉದ್ಯೋಗದಲ್ಲಿ ಮೇಲಧಿಕಾರಿಗಳು ನಿಮ್ಮನ್ನು ಪ್ರಶ್ನಿಸಿ ಬೆವರಿಳಿಸಬಹುದು. ನಿಮ್ಮ ತಪ್ಪಿಲ್ಲದಿದ್ದರೂ ಸರಿಯಾದ ಉತ್ತರ ಕೊಡಲಾಗದೆ ಪೇಚಾಡಬಹುದು. ಆಂಜನೇಯ ಸ್ಮರಣೆ ಮಾಡಿ. 

ಮಿಥುನ(Gemini): ಆಸ್ತಿ ಖರೀದಿ ಇಲ್ಲವೇ ಮಾರಾಟ ಕೆಲಸಕ್ಕೆ ಶುಭ ದಿನ. ಆಭರಣ ಖರೀದಿಸಲಿರುವಿರಿ. ಧಾರ್ಮಿಕ ವಿಚಾರಗಳಲ್ಲಿ ಮನಸ್ಸು ತೊಡಗಲಿದೆ. ಧಾರ್ಮಿಕ ಪ್ರವಾಸ ನಡೆಸಬಹುದು. ನೆಂಟರಿಷ್ಟರ ಭೇಟಿಯಿಂದ ಸಂತಸ ಹೆಚ್ಚುವುದು. ಶಿವನಿಗೆ ಬಿಲ್ವಪತ್ರೆ ಅರ್ಪಿಸಿ. 

ಕಟಕ(Cancer): ಮನೆಯಲ್ಲಿ ಶುಭ ಕಾರ್ಯಗಳು, ಪೂಜೆ, ವ್ರತ ಕತೆಗಳು ನಡೆದು ಮನಸ್ಸು ಪ್ರಫುಲ್ಲಿತವಾಗುವುದು. ಸ್ತ್ರೀಯರು ಉತ್ಸಾಹದಿಂದ ಹಬ್ಬಾಚರಣೆಯಲ್ಲಿ ತೊಡಗುವರು. ಹಿಂದಿನಿಂದ ಮಾತನಾಡುವವರ ಬಗ್ಗೆ, ಹಲ್ಲು ಮಸೆಯುವವರ ಬಗ್ಗೆ ಎಚ್ಚರಿಕೆ ಅಗತ್ಯ. ಹತ್ತಿರದ ಶಿವ ದೇವಾಲಯಕ್ಕೆ ಭೇಟಿ ನೀಡಿ. 

ಸಿಂಹ(Leo): ದೊಡ್ಡದೊಂದು ನಿರ್ಧಾರ ತೆಗೆದುಕೊಳ್ಳುವಿರಿ. ಮನೆಯಲ್ಲಿ ಮದುವೆ ಮಾತುಕತೆ ನಡೆಯಲಿದೆ. ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಸಹಕಾರ ದೊರಕಲಿದೆ. ಮಕ್ಕಳ ವಿಚಾರದಲ್ಲಿ ಗೊಂದಲ ಕಾಡುವುದು. ಸಂಗಾತಿಯೊಂದಿಗೆ ಮನ ಬಿಚ್ಚಿ ಮಾತನಾಡಿ. ಶಿವ ನಾಮ ಜಪ ಮಾಡಿ.

Mahashivratri 2022: ಶಿವನಿಗೆ ಇಷ್ಟದ ವಸ್ತುಗಳನ್ನು ಅರ್ಪಿಸಿ, ನಿಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಿ

ಕನ್ಯಾ(Virgo): ಇಟ್ಟ ಹೆಜ್ಜೆ ಹಿಂದಿಡಬೇಡಿ. ಸಂಬಂಧಗಳ ಮಧ್ಯೆ ಏರ್ಪಟ್ಟಿರುವ ಅಂತರ ಕಡಿಮೆಯಾಗಿ ಸಮಾಧಾನವಾಗುವುದು. ನಿದ್ರೆಯ ಕೊರತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗದಂತೆ ಎಚ್ಚರ ವಹಿಸಿ. ದೂರದ ಸಂಬಂಧಿಕರಿಂದ ಸಹಾಯ ದೊರಕುವುದು. ಕೆಲಸದಲ್ಲಿ ಶ್ರದ್ಧೆ ಇದ್ದರೆ ಲಾಭ ಇರುವುದು. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ. 

ತುಲಾ(Libra): ಕೆಲವೊಮ್ಮೆ ಸೋಲುವುದರಂತೆ ತೋರುವುದರಲ್ಲೇ ಗೆಲುವಿದೆ ಎಂಬುದನ್ನು ಅರಿತುಕೊಳ್ಳಿ. ಆಪ್ತರ ವಿಷಯದಲ್ಲಿ ಸೋತು ನೋಡಿ. ಮರುಕ್ಷಣದಲ್ಲೇ ಗೆಲುವು ನಿಮ್ಮದಾಗಿರುತ್ತದೆ. ಕೆಲಸದ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಯಾಗುವುದು. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ವೃಶ್ಚಿಕ(Scorpio): ಇದೀಗ ಕೊಂಚ ಸರಿಯಾದ ಹಾದಿಯಲ್ಲಿದ್ದೀರಿ. ಇನ್ನೂ ಸುಧಾರಣೆ ಅಗತ್ಯವಿದೆ. ಸಂಬಂಧಿಕರ ನೆರವಿನಿಂದ ಬಹುಕಾಲದ ಆತಂಕ ನಿವಾರಣೆಯಾಗುವುದು. ಧನ ಸಮೃದ್ಧಿಯಿಂದ ಸಂತೋಷ. ಸಂತಾನಾಪೇಕ್ಷಿ ದಂಪತಿಗೆ ಸಿಹಿ ಸುದ್ದಿ ಸಿಗಲಿದೆ. ಶಿವ ದೇವಾಲಯಕ್ಕೆ ಭೇಟಿ ನೀಡಿ. 

ಧನುಸ್ಸು(Sagittarius): ತಂದೆಯ ಬೆಂಬಲದಿಂದ ಆಸ್ತಿವ್ಯಾಜ್ಯಗಳು ಮಾತುಕತೆಯಲ್ಲೇ ಇತ್ಯರ್ಥ. ನಿಮ್ಮ ಉದ್ಯೋಗ, ವ್ಯಕ್ತಿತ್ವ ವಿಕಸನದ ಕಡೆ ಹೆಚ್ಚಿನ ಯೋಚನೆ ಹರಿಸಿ. ದೈವ ಬಲವಿರಲಿದೆ. ಕಾರ್ಯ ನಿಮಿತ್ತ ತಿರುಗಾಟಗಳಿರಬಹುದು. ಕುಟುಂಬದವರೊಡನೆ ಸಮಯ ಕಳೆಯುವಿರಿ. ಶಿವರಾತ್ರಿಯ ಭಜನೆಯಲ್ಲಿ ಪಾಲ್ಗೊಳ್ಳಿ. 

ಮಕರ(Capricorn): ಕಚೇರಿಯಲ್ಲಿ ಕೆಲಸ ವಿಪರೀತವಾಗಿ ಆಯಾಸವಾಗುವುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರ ನಡುವೆ ಗೊಂದಲಗಳು ಕಾಣಿಸಬಹುದು. ಧೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಪಥ್ಯ ತಪ್ಪಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಬಡವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡಿ. 

Mahashivratri 2022: ಶಿವ ಪೂಜೆಯ ವಿಷಯದಲ್ಲಿ ನೆನಪಿಟ್ಟುಕೊಳ್ಳಲೇಬೇಕಾದ 18 ನಿಯಮಗಳಿವು..

ಕುಂಭ(Aquarius): ಬೆಳ್ಳಿ ಬಂಗಾರದ ಖರೀದಿಗಾಗಿ ಧನವ್ಯಯ ಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಕಷ್ಟವೊಂದು ಸಲೀಸಾಗಿ ಕರಗಿ ಹೋಗಲಿದೆ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಹೊಸ ಉದ್ಯಮ ಆರಂಭಿಸಲು ಕಾಲ ಸರಿಯಾಗಿದೆ. ಶಿವ ಧ್ಯಾನ ಮಾಡಿ. 

ಮೀನ(Pisces): ವರ್ಗಾವಣೆ ಬಯಸುವವರಿಗೆ ಫಲ ಸಂಭಾವ್ಯತೆ. ಬಿಡುವಿಲ್ಲದ ದುಡಿಮೆಯಾದರೂ ಧನಲಾಭದಿಂದ ಸಂತೃಪ್ತಿ. ವಿವಾಹಾದಿ ಯತ್ನಕ್ಕೆ ಫಲ ಸಿಗಲಿದೆ. ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಒಮ್ಮೆ ತಪಾಸಣೆ ಮಾಡಿಸಿ. ಶಿವ- ಪಾರ್ವತಿಯ ಸ್ಮರಣೆ ಮಾಡಿ.