Daily Horoscope: ವೃಷಭಕ್ಕೆ ಅವಮಾನ, ಮಕರಕ್ಕೆ ಕಾಡುವ ನೋವು
10 ಮಾರ್ಚ್ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೇಷಕ್ಕೆ ಮಾನಸಿಕ ತುಮುಲ, ನಿಮ್ಮ ರಾಶಿಯ ಇಂದಿನ ಫಲವೇನಿದೆ ನೋಡಿ
ಮೇಷ(Aries): ವಿಚಿತ್ರವಾದ ಕೊರಗು ಮನಸ್ಸನ್ನಾವರಿಸಲಿದೆ. ಯಾಕೆ ಬೇಜಾರಾಗುತ್ತಿದೆ ಎಂಬುದೇ ತಿಳಿಯದೇ ಹೋಗಬಹುದು. ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾಧಿಸುವುದು ಕಷ್ಟವಾಗಬಹುದು. ಸಂಗಾತಿಯ ಮಾತು ಮನಸ್ಸಿಗೆ ನೋವು ಉಂಟು ಮಾಡಬಹುದು. ಗುರು ರಾಯರ ಸ್ಮರಣೆ ಮಾಡಿ.
ವೃಷಭ(Taurus): ಬೇರೆಯವರ ತಪ್ಪಿಗೆ ನೀವು ತಲೆ ಕೊಡಬೇಕಾದ ಸಾಧ್ಯತೆ ಇದೆ. ನಿಮ್ಮದೊಂದು ತಪ್ಪು ಮಾತಿಗೆ ಕೊರಗುವಂಥ ಸಂದರ್ಭ ಎದುರಾಗಲಿದೆ. ಚಟಗಳು ನಿಮ್ಮ ಅಧಃಪತನಕ್ಕೆ ಕಾರಣವಾಗುತ್ತಿವೆ ಎಂಬುದನ್ನು ಬೇಗ ಅರ್ಥ ಮಾಡಿಕೊಳ್ಳಿ. ಅನೈತಿಕ ಚಟುವಟಿಕೆಗಳಿಂದ ಅವಮಾನ, ರಾಮ ಧ್ಯಾನ ಮಾಡಿ.
ಮಿಥುನ(Gemini): ಹಳೆಯ ಮಿತ್ರರೊಬ್ಬರ ಜೊತೆ ಮಾತುಕತೆಯಿಂದ ಮನಸ್ಸು ಮುದಗೊಳ್ಳುವುದು. ಹೊಸ ವಾಹನ, ಯಂತ್ರೋಪರಣಗಳ ಖರೀದಿ ಮಾಡಲಿರುವಿರಿ. ವ್ಯಾಪಾರಿಗಳಿಗೆ ಉತ್ತಮ ಲಾಭ. ಅವಿವಾಹಿತರಿಗೆ ಶುಭ ಫಲ, ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ಶುಭ ಸುದ್ದಿ, ನವಗ್ರಹ ಆರಾಧನೆ ಮಾಡಿ.
ಕಟಕ(Cancer): ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವವರಿಗೆ ಮಾನ, ಸಮ್ಮಾನಗಳಿಂದ ಸಂತಸ, ಬೇಡದ ರಾಜಕೀಯದಲ್ಲಿ ಮೂಗು ತೂರಿಸಿ ಹೆಸರು ಹಾಳು ಮಾಡಿಕೊಳ್ಳಬೇಡಿ. ಕುಟುಂಬದಲ್ಲಿ ಹಿರಿಯರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗದೆ ಅಸಮಾಧಾನ ಕಾಡಬಹುದು. ವಿಷ್ಣು ಸಹಸ್ರನಾಮ ಪಠಣ ಮಾಡಿ.
ಸಿಂಹ(Leo): ಕೈ ಹಾಕಿದ ಕೆಲಸಗಳಲ್ಲೆಲ್ಲ ವಿಘ್ನಗಳು ಎದುರಾಗುತ್ತಿವೆ ಎಂದೆನಿಸಬಹುದು. ಮಕ್ಕಳ ಶಾಲಾ ವಿಷಯಗಳು ತಲೆನೋವು ತರಬಹುದು. ಉದರ ಸಂಬಂಧಿ ಸಮಸ್ಯೆಗಳು ಹೆಚ್ಚಲಿವೆ. ಕ್ರೀಡೆಯಲ್ಲಿ ಸಣ್ಣಪುಟ್ಟ ಗಾಯಗಳಾಗುವ ಸಾಧ್ಯತೆ, ಎಚ್ಚರಿಕೆ ಅಗತ್ಯ. ರಾಯರ ಮಠಕ್ಕೆ ಭೇಟಿ ನೀಡಿ.
Astrology 2022: ಆರೋಗ್ಯ ಚೆನ್ನಾಗಿರ್ಬೇಕು ಅಂದ್ರೆ ಹೀಗೆ ನಿಮ್ಮ ಗ್ರಹಗಳನ್ನು ಬಲಪಡಿಸಿಕೊಳ್ಳಿ..
ಕನ್ಯಾ(Virgo): ಮಕ್ಕಳ ಬೆಳವಣಿಗೆ ಸಂತೋಷ ತರಲಿದೆ. ಉದ್ಯೋಗದಲ್ಲಿ ಪ್ರಗತಿ ಇದೆ. ವ್ಯಾಪಾರ, ಸ್ವಂತ ಉದ್ದಿಮೆಯಲ್ಲಿ ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಆರೋಗ್ಯ ಸುಧಾರಿಸಲಿದೆ. ಪತ್ನಿಯೊಂದಿಗೆ ಸುಂದರ ಸಮಯ ಕಳೆಯುವಿರಿ. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ.
ತುಲಾ(Libra): ಇನ್ನೊಬ್ಬರನ್ನು ಮೆಚ್ಚಿಸುವ ಭರದಲ್ಲಿ ನಿಮ್ಮತನ ಬಲಿ ಕೊಡಬೇಡಿ. ಪ್ರಾಮಾಣಿಕ ಹಾದಿಯನ್ನಷ್ಟೇ ತುಳಿಯಿರಿ. ಸುಳ್ಳುಗಳು ನಿಮ್ಮ ಕೈ ಹಿಡಿಯುವುದಿಲ್ಲ. ಆಪ್ತರನ್ನು ಮಾತಿನಿಂದ ಕಳೆದುಕೊಳ್ಳಬೇಕಾದ ಸಾಧ್ಯತೆ, ಉದ್ಯೋಗದಲ್ಲಿ ಏರುಪೇರಿಲ್ಲ, ಕೃಷ್ಣನಿಗೆ ತುಳಸಿ ಅರ್ಪಿಸಿ.
ವೃಶ್ಚಿಕ(Scorpio): ಸ್ನೇಹಿತರ ಭೇಟಿಯಿಂದ ಸಂತಸ. ಹೊಸ ಉದ್ಯಮಗಳಿಗೆ ಕೈ ಹಾಕಲಿರುವಿರಿ. ದೂರ ಪ್ರಯಾಣಗಳಿಂದ ಕಾರ್ಯ ಸಿದ್ಧಿ. ಕಾಲು ನೋವು ಕಾಡಬಹುದು. ಸಾಮಾಜಿಕವಾಗಿ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತೀರಿ. ನೆಂಟರಿಷ್ಟರ ಸಹಾಯ ಒದಗಲಿದೆ. ಗೋಧಿ ದಾನ ಮಾಡಿ.
Putin Kundli: ಅಣ್ವಸ್ತ್ರ ಮಹಾಯುದ್ಧ ನಡೆಯುತ್ತಾ? ಪುಟಿನ್ ಜಾತಕ ಏನನ್ನುತ್ತೆ?
ಧನುಸ್ಸು(Sagittarius): ನೀವು ಮಾಡುವ ಕೆಲಸಕ್ಕೆ ಸಂಗಾತಿ ಹಾಗೂ ಪೋಷಕರ ಸಹಕಾರ ಸಿಕ್ಕಿ ಯಶಸ್ಸು ಸುಲಭವಾಗುವುದು. ಮಕ್ಕಳ ಪ್ರಗತಿ ಸಂತಸ ತರಲಿದೆ. ಹೊಸ ಜವಾಬ್ದಾರಿಗಳು ಹೆಗಲೇರುವುವು. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ವಿಷ್ಣು ಸಹಸ್ರನಾಮ ಪಠಣ ಮಾಡಿ.
ಮಕರ(Capricorn): ಕುಟುಂಬಕ್ಕಾಗಿ ಎಷ್ಟು ಶ್ರಮಿಸಿದರೂ ಅದನ್ನು ಯಾರೂ ಗುರುತಿಸುತ್ತಿಲ್ಲ ಎಂಬ ನೋವು ಕಾಡಬಹುದು. ಹೂಡಿಕೆಗಳು ಫಲ ನೀಡಲಿವೆ. ಕೋರ್ಟ್ ವ್ಯಾಜ್ಯಗಳು ಮುಂದೂಡಲಿವೆ. ಉದ್ಯೋಗಿಗಳಿಗೆ ಅಂದುಕೊಂಡಷ್ಟು ಫಲ ಸಿಗದೆ ನಿರಾಸೆಯಾಗುವುದು. ರಾಮ ಸ್ಮರಣೆ ಮಾಡಿ.
ಕುಂಭ(Aquarius): ಕಮಿಶನ್ ಆಧಾರದ ಮೇಲೆ ಕೆಲಸ ಮಾಡುವವರಿಗೆ ಉತ್ತಮ ಆದಾಯ ಸಿಗಲಿದೆ. ಷೇರು ವ್ಯವಹಾರಗಳಲ್ಲಿ ಧನಲಾಭವಿದೆ. ಬೆನ್ನುನೋವು, ಕೈ ನೋವು ಕಾಡಬಹುದು. ನರಸಂಬಂದಿ ಸಮಸ್ಯೆಗಳು ಹೆಚ್ಚಲಿವೆ. ಸೂಕ್ತ ಔಷಧೋಪಚಾರ ಮಾಡಿಕೊಳ್ಳಿ. ರಾಘವೇಂದ್ರ ಶತನಾಮಾವಳಿ ಹೇಳಿಕೊಳ್ಳಿ.
ಮೀನ(Pisces): ನಿಮ್ಮ ಉತ್ತಮ ಕೆಲಸಗಳಿಗೆ ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ. ವೈವಾಹಿಕವಾಗಿ ನೆಮ್ಮದಿ ಕಳೆದು ಹೋಗಬಹುದು. ಎಷ್ಟು ಒದ್ದಾಡಿದರೂ ಆದಾಯ ಸಾಲುತ್ತಿಲ್ಲ ಎನಿಸಬಹುದು. ಸಾಲ ಮಾಡಲು ಹೋಗಬೇಡಿ. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ.