Asianet Suvarna News Asianet Suvarna News

Daily Horoscope: ಮೀನ ರಾಶಿಗಿಂದು ಧನ ನಷ್ಟ, ನಿಮ್ಮ ಭವಿಷ್ಯ ಏನಿದೆ ನೋಡಿ..

6 ಜನವರಿ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೀನ ರಾಶಿ ಬೆನ್ನ ಹಿಂದೆ ಮಾತಾಡಿ ಸಂಕಷ್ಟ ತಂದುಕೊಳ್ಳುವರು..

Daily horoscope of January 6th 2022 in Kannada SKR
Author
Bangalore, First Published Jan 6, 2022, 5:17 AM IST
  • Facebook
  • Twitter
  • Whatsapp

ಮೇಷ(Aries): ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿದೆ. ಆಹಾರದಲ್ಲಿ ಪಥ್ಯ ಕಟ್ಟುನಿಟ್ಟಾಗಿರಲಿ. ಉದ್ಯೋಗ ವ್ಯವಹಾರದಲ್ಲಿ ಅನೇಕ ರೀತಿಯ ಕೆಲಸಗಳ ಜವಾಬ್ದಾರಿ ನಿಮ್ಮ ಮೇಲೆ ಬೀಳಬಹುದು. ಹೊರೆ ಎಂದುಕೊಳ್ಳದೆ ನಿಮ್ಮ ಸಾಮರ್ಥ್ಯಕ್ಕೆ ಸಿಕ್ಕ ಮನ್ನಣೆ ಎಂದು ಪರಿಗಣಿಸಿ. ಗುರು ರಾಯರ ಸ್ಮರಣೆ ಮಾಡಿ. 

ವೃಷಭ(Taurus): ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಿ. ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನ ಹರಿಸಿ.  ನಡೆಯುವಾಗ ಜಾಗ್ರತೆ. ಸಂಗಾತಿಯ ಸಹಕಾರದಿಂದ ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ.

ಮಿಥುನ(Gemini): ಕಷ್ಟಗಳು ಹೆಚ್ಚುತ್ತಿವೆ ಎನಿಸಬಹುದು. ಆದರೆ, ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇದೆ ಎಂದು ನಂಬಿ ಮುನ್ನಡೆಯಿರಿ. ಷೇರು ವ್ಯವಹಾರದಲ್ಲಿ ಧನನಷ್ಟವಾಗುವುದು. ವ್ಯಾಪಾರದಲ್ಲಿ ಮಿಶ್ರಫಲ. ಮಕ್ಕಳ ಸಲುವಾಗಿ ಹೆಚ್ಚಿನ ಸಮಯ ಕಳೆಯುವಿರಿ. ರಾಘವೇಂದ್ರ ಶತ ನಾಮಾವಳಿ ಹೇಳಿಕೊಳ್ಳಿ.

ಕಟಕ(Cancer): ಸಾಲ ಮಾಡುವ ಯೋಚನೆ ಬೇಡ. ಇದ್ದುದರಲ್ಲಿಯೇ ಹಣ ಹೊಂದಿಸಲು ಪ್ರಯತ್ನಿಸಿ. ದುಡಿಮೆಗೆ ಬೇರೆ ಮೂಲಗಳನ್ನು ಹುಡುಕಲು ಪ್ರಯತ್ನಿಸಿ. ವ್ಯಾಪಾರದಲ್ಲಿ ಲಾಭ ಹೆಚ್ಚುವುದು. ಸಂಗಾತಿಯ ಸಹಕಾರದಿಂದ ಕೆಲಸಗಳು ಸುಗಮವಾಗಿ ಸಾಗುವುವು. ರಾಮ ಸ್ಮರಣೆ ಮಾಡಿ.

ಸಿಂಹ(Leo): ಜೀವನದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಬದಲಾಗುತ್ತಿರುವ ಋತುವಿನಲ್ಲಿ ಅಜಾಗರೂಕತೆ ಬೇಡ. ಮಿತಾಹಾರ, ಹಿತಾಹಾರ ಸೇವಿಸಿ. ಕ್ರೀಡೆಯಿಂದ ಉಲ್ಲಾಸ. ಆಸ್ತಿ ವ್ಯವಹಾರಗಳಲ್ಲಿ ಮಿಶ್ರಫಲವಿದೆ. ಗಣಪತಿಗೆ ದೂರ್ವೆ ಸಮರ್ಪಿಸಿ. 

ಕನ್ಯಾ(Virgo): ನಿರೀಕ್ಷಿಸುತ್ತಿರುವ ದಂಪತಿಗಳಿಗೆ ಸಂತಾನ ವಿಷಯದಲ್ಲಿ ಶುಭ ಸುದ್ದಿ ಸಿಗಬಹುದು. ನಿರುದ್ಯೋಗಿಗಳಿಗೆ ಒಳ್ಳೆಯ ಕೆಲಸ ಸಿಗಲಿದೆ. ಅವಿವಾಹಿತರಿಗೂ ಸಂಬಂಧ ಕೂಡಿ ಬರಲಿದೆ. ಅತಿಥಿಗಳ ಆಗಮನದಿಂದ ಮನಸ್ಸಿಗೆ ನೋವಾಗುವ ಘಟನೆ ನಡೆಯಬಹುದು. ವಿಷ್ಣು ಸಹಸ್ರನಾಮ ಹೇಳಿ. 

ತುಲಾ(Libra): ನೀವು ಎದುರಿಸುತ್ತಿರುವ ಸಮಸ್ಯೆಗೆ ಆಪ್ತರ ನೆರವು ಸಿಕ್ಕಿ ಸಮಾಧಾನ ದೊರೆಯುವುದು. ರೈತರಿಗೆ ಬೆಳೆದ ಬೆಳೆಗೆ ಆದಾಯ ಹೆಚ್ಚಿ ಸಂತಸ. ವಸ್ತ್ರ, ಒಡವೆ ವ್ಯಾಪಾರಗಳಲ್ಲಿ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಷ್ಟ. ಹಕ್ಕಿಗಳಿಗೆ ನೀರು, ಕಾಳುಗಳನ್ನು ನೀಡಿ. 

ವೃಶ್ಚಿಕ(Scorpio): ಇಂದು ಮನಸ್ಸು ಹೆಚ್ಚು ತಾಜಾತಾನದಿಂದಲೂ, ಚೈತನ್ಯದಿಂದಲೂ ಕೂಡಿರುವುದು. ಇಷ್ಟದ ವ್ಯಕ್ತಿಗಳೊಂದಿಗೆ ಸಮಯ ಕಳೆಯುವಿರಿ. ಸಾಕು ಪ್ರಾಣಿಗಳಿಂದ ಮನಸ್ಸಿಗೆ ಸಮಾಧಾನ. ಉದ್ಯೋಗದಲ್ಲಿ ಒತ್ತಡದ ದಿನ. ಹೊಸ ವಸ್ತುಗಳನ್ನು ಕೊಳ್ಳುವಿರಿ. ಕೃಷ್ಣನಿಗೆ ತುಳಸಿ ಸಮರ್ಪಿಸಿ.

Astrology And Personality Traits: ಈ ರಾಶಿಯವರು ಸಂಗಾತಿಗೆಂದೂ ಮೋಸ ಮಾಡಲ್ಲ!

ಧನುಸ್ಸು(Sagittarius): ಬಹಳ ಸಮಯದಿಂದ ಕಾಡುತ್ತಿರುವ ಸಮಸ್ಯೆಗೆ ನಿಮ್ಮ ಹೊಂದಾಣಿಕೆಯಿಂದಲೇ ಪರಿಹಾರ ಸಿಗುವುದು. ಗೃಹಕೆಲಸಗಳಿಗೆ ಪ್ರಶಂಸೆ. ಧಾರ್ಮಿಕ, ಶುಭ ಸಮಾರಂಭಗಳಿಗೆ ಭೇಟಿಯಿಂದ ಸಂತಸ. ಹವ್ಯಾಸಗಳಿಗೆ ಸಮಯ ಮಾಡಿಕೊಳ್ಳಿ. ಕುಲದೇವರ ಸ್ಮರಣೆ ಮಾಡಿ. 

ಮಕರ(Capricorn): ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಅನಿರೀಕ್ಷಿತ ಧನ ಲಾಭ. ಹಿರಿಯರ ಆಸ್ತಿ ಸಂಬಂಧಿ ಕೆಲಸಗಳು ಮುಂದೆ ಹೋಗುವುದು. ಆರೋಗ್ಯ ಸ್ಥಿರವಾಗಿರುವುದು. ಮಕ್ಕಳ ಮೇಲೆ ವಿನಾ ಕಾರಣ ರೇಗದಿರಿ. ಲಕ್ಷ್ಮೀವೆಂಕಟೇಶ್ವರ ಸ್ಮರಣೆ ಮಾಡಿ. 

Indian Mythology: ಎಲ್ಲರನ್ನೂ ಕಾಡುವ ಶನಿಯ ಬಗ್ಗೆ ಎಲ್ಲರಿಗೂ ಗೊತ್ತಿಲ್ಲದ ಸಂಗತಿಗಳು..

ಕುಂಭ(Aquarius): ನೆರೆಹೊರೆಯವರ ಜೊತೆ ಜಗಳವಾಡುವ ಸಂಭವವಿದೆ. ಆದಷ್ಟು ಸೌಮ್ಯವಾಗಿ ಮಾತಾನಾಡುವುದರಿಂದ ಸಮಸ್ಯೆ ಬಗೆ ಹರಿವುದು.  ಮಾಡಿದ ತಪ್ಪಿಗೆ ಇನ್ನೆಷ್ಟು ಕೊರಗುವಿರಿ. ಸಾಧ್ಯವಾದರೆ ಕ್ಷಮೆ ಕೇಳಿ, ಇಲ್ಲದಿದ್ದರೆ ವಿಷಯ ಹಿಂದೆ ಬಿಟ್ಟು ಮುಂದೆ ಹೋಗಿ. ಗಾಯತ್ರಿ ಜಪ ಮಾಡಿ.

ಮೀನ(Pisces): ಸಂಬಂಧಗಳ ನಡುವೆ ವೈಮನಸ್ಯ ಮೂಡುವ ಸಂದರ್ಭಗಳೆದುರಾಗಬಹುದು. ಯಾರದೋ ಬೆನ್ನ ಹಿಂದೆ ಮಾತಾಡಬೇಡಿ. ಹಣ ಕೈಲಿ ನಿಲ್ಲದೆ ಆತಂಕ ಕಾಡುವುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಕಿರಿಕಿರಿ. ಮಾಡಿದ ತಪ್ಪನ್ನೇ ಮತ್ತೆ ಮಾಡಲು ಹೋಗಬೇಡಿ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ.

Follow Us:
Download App:
  • android
  • ios