Asianet Suvarna News Asianet Suvarna News

Daily Horoscope: ಕುಂಭಕ್ಕೆ ಮಾನಸಿಕ ಅಸ್ಥಿರತೆ, ಕಟಕಕ್ಕೆ ಕಸಿವಿಸಿ

29 ಜನವರಿ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕನ್ಯಾ ರಾಶಿಗೆ ಹೆಚ್ಚುವ ಜಡತ್ವ, ತುಲಾ ರಾಶಿಗೆ ತಿರುಗಾಟದ ಸಂತಸ

Daily horoscope of January 29th 2022 in Kannada SKR
Author
Bangalore, First Published Jan 29, 2022, 5:00 AM IST

ಮೇಷ(Aries): ಇಂದು ಸ್ನೇಹಿತರ ಜೊತೆ ಹೆಚ್ಚಿನ ಸಮಯ ಕಳೆದು ಸಂತೋಷವಾಗಿರುವಿರಿ. ಹಣದ ಖರ್ಚು ಹೆಚ್ಚಿದ್ದರೂ ಆದಾಯ ಹೆಚ್ಚಿರುವುದರಿಂದ ಚಿಂತೆಯಿರುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರಲಿದೆ. ಸಂಗಾತಿಯ ಕಷ್ಟವೇನೆಂದು ಆಲಿಸಿ. ಶನಿ ಸ್ಮರಣೆ ಮಾಡಿ. 

ವೃಷಭ(Taurus): ಒತ್ತಡವಿದ್ದರೂ ಕೆಲಸಗಳನ್ನು ಸುಲಭವಾಗಿ ನಿಭಾಯಿಸುವಿರಿ. ಕುಟುಂಬದವರ ಮೇಲೆ ಕೋಪತಾಪಗಳನ್ನು ತೋರಬೇಡಿ. ವಸ್ತುಗಳನ್ನು ಕಳೆದುಕೊಳ್ಳಬಹುದು. ಕಚೇರಿ ಅಸಾಮಾಧಾನಗಳು ನಿಮ್ಮ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಲಿವೆ. ಕಪ್ಪು ವಸ್ತ್ರ ದಾನ ಮಾಡಿ. 

ಮಿಥುನ(Gemini): ಶ್ರಮ, ಪ್ರಯತ್ನಗಳು ನಿರರ್ಥಕವೆನಿಸಿ ದುಃಖವಾಗುವುದು. ಮಕ್ಕಳಿಗೆ ಸಂಬಂಧಿಸಿ ಮತ್ತಷ್ಟು ಆತಂಕ ಎದುರಾಗಬಹುದು. ಈ ದಿನ ಹೊಸ ಯೋಜನೆಗಳ ಪ್ರಾರಂಭ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಶಿವ ಸ್ಮರಣೆ ಮಾಡಿ. 

ಕಟಕ(Cancer): ಸವಾಲುಗಳು ಎದುರಾದಾಗ ನನಗೇ ಏಕೆ ಹೀಗೆ ಎನ್ನುವ ಬದಲು, ನನಗೇಕಲ್ಲ.. ಎದುರಿಸಿಯೇ ತೀರುತ್ತೇನೆ ಎಂದು ಮುಂದುವರಿಯಿರಿ. ಸ್ನೇಹಿತರು ಸರಿಯಾಗಿ ಪ್ರತಿಕ್ರಿಯಿಸದೆ ಮನಸ್ಸಿಗೆ ಕಸಿವಿಸಿಯಾಗುವುದು. ಸೃಜನಶೀಲತೆಯಿಂದ ಲಾಭವಿದೆ. ಅಶ್ವತ್ಥ ಮರಕ್ಕೆ ದೀಪ ಹಚ್ಚಿ 

ಸಿಂಹ(Leo): ಸಾಮಾಜಿಕ ಮತ್ತು ಸಾರ್ವಜನಿಕ ವ್ಯವಹಾರಗಳು ಸುಲಭವಾಗಿ ನಡೆಯಲಿವೆ. ಸಂಗಾತಿಯ ಆರೋಗ್ಯದ ವಿಚಾರವಾಗಿ ಆತಂಕ ಎದುರಾಗಬಹುದು. ಉದ್ಯಮದಲ್ಲಿ ಕಷ್ಟನಷ್ಟ ಉಂಟಾಗಬಹುದು. ಸಹೋದರ, ಸಹೋದರಿಯರ ಸಹಕಾರ ಸಿಕ್ಕಿ ಕೊಂಚ ಸಮಾಧಾನ ಸಿಗಲಿದೆ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಕನ್ಯಾ(Virgo): ಇಂದು ನೀವು ಗೊಂದಲದಲ್ಲಿರುವ ಸಾಧ್ಯತೆಯಿದೆ. ಕೆಲಸದಲ್ಲಿ ನಿತ್ರಾಣ, ಜಡತ್ವ ಮತ್ತು ನಿರಾಸಕ್ತಿ ಎದುರಾಗಬಹುದು. ಉದರ ಸಮಸ್ಯೆ ಉಂಟಾಗಬಹುದು. ದುಂದುವೆಚ್ಚದ ಸಾಧ್ಯತೆಯಿದೆ. ಯಾವುದೋ ಭಯ, ಬೇಜಾರು ಕಾಡಬಹುದು. ನವಗ್ರಹ ಆರಾಧನೆ ಮಾಡಿ. 

Zodiac Signs And Traits: ಈ ನಾಲ್ಕು ರಾಶಿಯ ಹೆಣ್ಮಕ್ಕಳ ಕೈಲಿರುತ್ತೆ ಗಂಡನ ಜುಟ್ಟು!

ತುಲಾ(Libra): ತಿರುಗಾಟದಿಂದ ಸಂತಸ ಹೆಚ್ಚಲಿದೆ. ಮನೆಗೆ ಬೇಕಾದ ವಸ್ತುಗಳಿಗಾಗಿ ಧನವ್ಯಯ ಮಾಡಲಿರುವಿರಿ. ಮಕ್ಕಳು ತಮ್ಮ ಓದಿನಲ್ಲಿ ಎಂದಿಗಿಂತ ಹೆಚ್ಚಿನ ಶ್ರಮ ಪಡಬೇಕಾಗಬಹುದು. ಬಂಡವಾಳ ಹೂಡಿಕೆಯ ವೇಳೆ ವಿವೇಚನೆಯಿಂದಿರುವ ಅಗತ್ಯವಿದೆ. ಗಣಪತಿಯ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಆಭರಣಗಳು, ವಸ್ತ್ರಗಳ ಖರೀದಿಗಾಗಿ ಖರ್ಚು ಮಾಡುವಿರಿ. ಆಪ್ತರು, ಸ್ನೇಹಿತರೊಂದಿಗೆ ಹೊರಗೆ ಆಹಾರ ಸೇವಿಸುವಿರಿ. ಆರೋಗ್ಯ ಚೆನ್ನಾಗಿರಲಿದೆ. ಕಾನೂನು ವಿಚಾರಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಅನಿರೀಕ್ಷಿತ ಧನ ಲಾಭವಿರಲಿದೆ. ಬಡವರಿಗೆ ಹಣ ದಾನ ಮಾಡಿ. 

ಧನುಸ್ಸು(Sagittarius): ಬಾಕಿ ಉಳಿದಿರುವ ಕಾರ್ಯಗಳು ಪೂರ್ಣಗೊಳ್ಳಲಿವೆ. ಮಕ್ಕಳಿಗೆ ಸಮಯ ಹೊಂದಿಸಿಕೊಳ್ಳುವಿರಿ. ಸಂಗಾತಿಯ ಸಹಕಾರದಿಂದ ಕೆಲಸಗಳು ಈಡೇರಲಿವೆ. ಮನೆಯಲ್ಲಿ ವಿಶೇಷ ಪ್ರೀತಿ, ಗೌರವವನ್ನು ಕಾಣುವಿರಿ. ನೂತನ ಗೃಹ ನಿರ್ಮಾಣಕ್ಕೆ, ವಾಹನ ಖರೀದಿಗೆ ಸಕಾಲ. ಮನೆದೇವರಿಗೆ ದೀಪ ಹಚ್ಚಿ.

Pregnancy and Planets: 9 ತಿಂಗಳ ಗರ್ಭಾವಸ್ಥೆ ಹಾಗೂ 9 ಗ್ರಹಗಳ ನಡುವೆ ಇರುವ ಸಂಬಂಧ ಏನು ಗೊತ್ತೇ ?

ಮಕರ(Capricorn): ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು. ನೆಂಟರಿಷ್ಟರ ಭೇಟಿಯಿಂದ ಉಲ್ಲಾಸ. ಉದರ ಸಮಸ್ಯೆ ಉಂಟಾಗಬಹುದು. ದುಂದುವೆಚ್ಚದ ಸಾಧ್ಯತೆಯಿದೆ. ಕಾನೂನು ಬಾಹಿರವಾದ ಯಾವುದೇ ಕಾರ್ಯ ಮಾಡಬೇಡಿ. ಅದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಎಣ್ಣೆ, ಕಪ್ಪು ಧಾನ್ಯ ದಾನ ಮಾಡಿ. 

ಕುಂಭ(Aquarius): ಮಾನಸಿಕ ಅಸ್ಥಿರತೆ ಮತ್ತು ವ್ಯಥೆ ಉಂಟಾಗಬಹುದು. ನಿಮ್ಮ ಧೈರ್ಯ ಕಳೆದುಕೊಳ್ಳಬೇಡಿ. ನಿತ್ಯದ ಕೆಲಸದಲ್ಲಿ ತುಸು ಶ್ರಮ ಎನಿಸಲಿದೆ. ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಯಾರೊಂದಿಗೂ ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯ ಸಾಧಿಸಿ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಮೀನ(Pisces): ಅರ್ಥ ಪೂರ್ಣವಾಗಿ ದಿನ ಕಳೆಯುವಿರಿ. ನಿಮ್ಮಿಂದ ಇತರರಿಗೆ ಸಹಾಯ ದೊರಕಬಹುದು. ಹೊಸ ಕಲಿಕೆಯಲ್ಲಿ ಆಸಕ್ತಿ ಇರಲಿದೆ. ಮನೆಯ ಸದಸ್ಯರ ಅನಾರೋಗ್ಯವು ಚಿಂತೆಗೆ ದೂಡಬಹುದು. ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿ ಕಾಡಬಹುದು. ಶನಿಯನ್ನು ಸ್ಮರಿಸಿ. 

Follow Us:
Download App:
  • android
  • ios