24 ಜನವರಿ 2022, ಸೋಮವಾರದ ಭವಿಷ್ಯ ಹೇಗಿದೆ?ಯಾವ ರಾಶಿಗೆ ಶುಭ ಫಲವಿದೆ?ನಿಮ್ಮ ರಾಶಿಯ ಇಂದಿನ ಫಲ ಏನಿದೆ ನೋಡಿ..

ಮೇಷ(Aries): ಉದ್ಯೋಗದಲ್ಲಿ ಸಹೋದ್ಯೋಗಿಗಳ ಅಸೂಯೆ ಕಾಡಬಹುದು. ವಿದ್ಯಾರ್ಥಿಗಳು ಹೊಸ ಕಲಿಕೆಯಲ್ಲಿ ಆಸಕ್ತಿ ತೋರುವರು. ಸ್ನೇಹಿತರಿಂದ ಪ್ರೇಮ ವಿಚಾರಗಳಲ್ಲಿ ನೆರವು ದೊರೆಯಲಿದೆ. ದಾಂಪತ್ಯದಲ್ಲಿ ಕೆಲ ಸಣ್ಣಪುಟ್ಟ ವಾದವಿವಾದಗಳು ಕಾಣಿಸಿಕೊಳ್ಳಬಹುದು. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ(Taurus): ತಂದೆ, ಸಹೋದರರಿಗೆ ಕೆಲಸದಲ್ಲಿ ನೆರವಾಗಿ. ನಿರುದ್ಯೋಗಿಗಳು ಕುಟುಂಬದ ಉದ್ಯೋಗವನ್ನೇ ಮುಂದುವರಿಸಿಕೊಂಡು ಹೋಗುವುದು ಉತ್ತಮ. ಅವಿವಾಹಿತರಿಗೆ ಹತ್ತಿರದ ಸಂಬಂಧದಲ್ಲೇ ಕಂಕಣ ಬಲ ಕೂಡಿ ಬರಬಹುದು. ಹಸುವಿಗೆ ಹಸಿರು ತಿನ್ನಿಸಿ. 

ಮಿಥುನ(Gemini): ಮನೆಯಲ್ಲಿ ಕೆಲವರ ಆರೋಗ್ಯ ಹದಗೆಟ್ಟು ಚಿಂತಿತರಾಗುವಿರಿ. ಉದ್ಯೋಗದಲ್ಲಿ ತಪ್ಪುಗಳು, ಎಡವಟ್ಟುಗಳಾಗುವ ಸಾಧ್ಯತೆ ಹೆಚ್ಚಿದೆ. ಧನ ವ್ಯಯ ಹೆಚ್ಚಬಹುದು. ಮಕ್ಕಳು ಹಾದಿ ತಪ್ಪಿದ್ದರ ಸುಳಿವು ಸಿಕ್ಕಿ ಚಿಂತೆಗಳು ಹೆಚ್ಚಲಿವೆ. ಕುಲ ದೇವರಿಗೆ ತುಪ್ಪದ ದೀಪ ಹಚ್ಚಿ. 

ಕಟಕ(Cancer): ಪ್ರಮುಖ ಕೆಲಸ ಆಗುತ್ತಿಲ್ಲ ಎಂದು ಕೊರಗುತ್ತಾ ಕುಳಿತರೆ ಪ್ರಯೋಜನವಿಲ್ಲ. ಅದಕ್ಕಾಗಿ ನೀವು ಹಾಕುತ್ತಿರುವ ಪ್ರಯತ್ನ ಸಾಲದು. ಇನ್ನಷ್ಟು ಶ್ರಮ ಹಾಕಿ. ದುರಭಿಮಾನ ಪಕ್ಕಕ್ಕಿಟ್ಟರೆ ಒಳಿತಾಗಲಿದೆ. ಸುಳ್ಳು ಹೇಳಿದರೆ ಸಿಕ್ಕಿ ಬೀಳುವ ಅಪಾಯವಿದೆ. ಪ್ರಾಮಾಣಿಕತೆ ಕೈ ಹಿಡಿಯುವುದು. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಸಿಂಹ(Leo): ಉದ್ಯೋಗದಲ್ಲಿ ಅನಿರೀಕ್ಷಿತವಾಗಿ ಶುಭ ಸುದ್ದಿ ಕಿವಿಗೆ ಬೀಳಬಹುದು. ಇದರಿಂದ ಇಡೀ ದಿನ ಚೈತನ್ಯಭರಿತವಾಗಿರಲಿದೆ. ಆರ್ಥಿಕ ಪ್ರಗತಿ ಇರಲಿದೆ. ಹೂಡಿಕೆ ಮಾಡಲು ಸುದಿನ. ಷೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಸಂಗಾತಿಯ ಸಂಪೂರ್ಣ ಸಹಕಾರ ಸಿಗಲಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

Astro Tips: ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ..

ಕನ್ಯಾ(Virgo): ಬಹು ದಿನಗಳ ಕನಸೊಂದು ಈಡೇರಲಿದೆ. ಹಿತಶತ್ರುಗಳು ಹಿಂದೆ ಸರಿಯುವರು. ಸಾಲ ಸಿಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗರೂಕತೆ ಅಗತ್ಯ. ಸಾತ್ವಿಕ ಆಹಾರಗಳನ್ನೇ ಸೇವಿಸಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವಿರಲಿದೆ. ಬಡವರಿಗೆ ಧಾನ್ಯ ದಾನ ಮಾಡಿ. 

ತುಲಾ(Libra): ಪ್ರಮುಖ ವಿಷಯದಲ್ಲಿ ನಿರ್ಧಾರಕ್ಕೆ ಬರಲಾರದೆ ಗೊಂದಲದಲ್ಲಿ ಬೀಳುವಿರಿ. ಮನೆಯ ಇತರರ ಬಳಿ ಈ ವಿಷಯ ಚರ್ಚಿಸಿ. ಇದರಿಂದ ನಿರ್ಧಾರ ತೆಗೆದುಕೊಳ್ಳಲು ಸುಲಭವಾಗುವುದು. ವೃತ್ತಿಯಲ್ಲಿ ತೊಡಕುಗಳು ಕಾಣಿಸಬಹುದು. ಶಿವನಿಗೆ ಜಲಾಭಿಷೇಕ ಮಾಡಿ. 

ವೃಶ್ಚಿಕ(Scorpio): ನೀರು, ಬೆಂಕಿಯ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ಇರಲಿ. ಉದ್ಯೋಗದಲ್ಲಿ ಪ್ರಶಂಸೆ ಸಿಗಲಿದೆ. ಹೊಸ ಉದ್ಯಮ ಆರಂಭಿಸಲು ಯೋಚಿಸುತ್ತಿರುವವರು ಆ ಸಂಬಂಧ ಕೆಲಸ ಶುರು ಮಾಡಬಹುದು, ಸರ್ಕಾರಿ ಕೆಲಸಗಳು ಮುಗಿದು ನಿರಾಳವಾಗುವಿರಿ. ಲಕ್ಷ್ಮೀ ನಾರಾಯಣ ಪ್ರಾರ್ಥನೆ ಮಾಡಿ. 

Cleaning home: ಮನೆಯನ್ನು ಈ ರೀತಿ ಸ್ವಚ್ಛಗೊಳಿಸಿದರೆ ಲಕ್ಷ್ಮಿ ದೇವಿಗೆ ಪ್ರಿಯ

ಧನುಸ್ಸು(Sagittarius): ಬದಲಿ ಉದ್ಯೋಗಕ್ಕಾಗಿ ನೋಡುತ್ತಿರುವವರಿಗೆ ಅವಕಾಶಗಳು ಒದಗಿ ಬರಲಿವೆ. ನಿರುದ್ಯೋಗಿಗಳು ಕೂಡಾ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಿ. ಗೊಂದಲ ಬೇಡ. ಮನೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಆತಂಕ ಹೆಚ್ಚಬಹುದು. ಈ ಬಗ್ಗೆ ಜಾಗರೂಕತೆ ವಹಿಸಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಮಕರ(Capricorn): ಮನಸ್ಸು- ಬುದ್ಧಿ ಎರಡೂ ಒಂದೇ ಹಾದಿಗೆ ಬರುವುದರಿಂದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಲಭಿಸಲಿದೆ. ಚರ್ಮ ಸಂಬಂಧಿ ಸಮಸ್ಯೆಗಳು ಕಾಡಬಹುದು. ಯಾರಿಗೂ ಸಾಲ ಕೊಡಲು ಹೋಗಬೇಡಿ. ಅಶ್ವತ್ಥ ಕಟ್ಟೆಗೆ ದೀಪ ಹಚ್ಚಿ. 

ಕುಂಭ(Aquarius): ಕೆಲಸದಲ್ಲಿ ಒತ್ತಡ ಹೆಚ್ಚಬಹುದು. ಜವಾಬ್ದಾರಿಯುತ ಕೆಲಸಗಳನ್ನು ಚೆನ್ನಾಗಿ ನಿಭಾಯಿಸಿ ಸೈ ಎನಿಸಿಕೊಳ್ಳುವಿರಿ. ಮನೆಯಲ್ಲಿನ ಮುನಿಸುಗಳು ಶಮನವಾಗುವುವು. ಸರ್ಕಾರಿ ನೌಕರರಿಗೆ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ದುರ್ಗಾ ಅಷ್ಟೋತ್ತರ ಹೇಳಿಕೊಳ್ಳಿ. 

ಮೀನ(Pisces): ಕೆಲಸ ಕಾರ್ಯಗಳಲ್ಲಿ ವಿಳಂಬ ಎದುರಾಗಲಿವೆ. ಸುಮ್ಮನೆ ನೆಂಟರಿಷ್ಟರ ನಡುವೆ ಸಣ್ಣ ವಿಷಯ ದೊಡ್ಡದಾಗಿ ಮನಸ್ಸಿನ ನೆಮ್ಮದಿ ಕದಡಬಹುದು. ಸಂಗಾತಿಯ ಸಹಕಾರ ಇರಲಿದೆ. ಮಕ್ಕಳ ಮನಸ್ಸಿನ ಮಾತುಗಳನ್ನು ಕೇಳಿಸಿಕೊಳ್ಳಿ. ಶಿವ ಸಹಸ್ರನಾಮ ಮಾಡಿ.