Daily Horoscope: ಕುಂಭಕ್ಕೆ ನಂಬಿದವರಿಂದಲೇ ಮೋಸ, ಮೀನಕ್ಕೆ ಗೌರವ ವೃದ್ಧಿ

16 ಜನವರಿ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಈ ರಾಶಿಗೆ ಪಿತ್ರಾರ್ಜಿತ ಆಸ್ತಿ ಸಂಬಂಧ ಶುಭ ಸಮಾಚಾರ

Daily horoscope of January 16th 2022 in Kannada SKR

ಮೇಷ(Aries): ಬೇರೆ ಬೇರೆ ಮೂಲಗಳಿಂದ ಧನಲಾಭ. ನೂತನ ಗೃಹ ನಿರ್ಮಾಣಕ್ಕೆ, ವಾಹನ ಖರೀದಿಗೆ ಸಕಾಲ. ಪತ್ನಿಯ ಸಹಕಾರದಿಂದ ಕಾರ್ಯಗಳು ಈಡೇರುವುವು. ಕೆಲಸದಲ್ಲಿ ಕ್ರಿಯಾಶೀಲತೆ ಹೆಚ್ಚಿಸುವತ್ತ ಗಮನ ಹರಿಸಿದರೆ ಲಾಭವಿದೆ. ಕೈ ಕೆಳಗಿನವರನ್ನು ಪ್ರೀತಿಯಿಂದ ಕಾಣಿ. ಸೂರ್ಯ ನಮಸ್ಕಾರ ಮಾಡಿ. 

ವೃಷಭ(Taurus): ದೊಡ್ಡ ಲಾಭದ ಆಸೆಗೆ ಬಿದ್ದು ಸಿಗುವುದನ್ನೂ ಕಳೆದುಕೊಳ್ಳಬೇಡಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿರುವವರಿಗೆ ಶುಭ ಸುದ್ದಿ ಕಿವಿಗೆ ಬೀಳಲಿದೆ. ನಿಮ್ಮ ಬಗ್ಗೆ ಇತರರು ಹೀನಾಯವಾಗಿ ಮಾತಾಡುವುದು ತಿಳಿದು ಮನಸ್ಸಿಗೆ ಖೇದ ಉಂಟಾಗಲಿದೆ. ಗಣಪತಿ ಅರ್ಚನೆ ಮಾಡಿಸಿ. 

ಮಿಥುನ(Gemini): ಮತ್ತೊಬ್ಬರ ಸಂಸಾರದ ವಿಷಯದಲ್ಲಿ ಮೂರನೆಯವರಾಗಿ ಬಾಯಿ ಹಾಕಿಕೊಂಡು ಹೋಗುವುದು, ಗಂಡ ಹೆಂಡತಿ ನಡುವೆ ತಂದಿಡುವುದು ಮಾಡಬೇಡಿ. ಪೋಷಕರ ಮಾತುಗಳಿಗೆ ಬೆಲೆ ನೀಡಿ. ಅವರಿಗೆ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಅದನ್ನು ಕಡೆಗಣಿಸದೆ ತಪಾಸಣೆ ಮಾಡಿಸಿ. ಆದಿತ್ಯ ಹೃದಯ ಪಠಿಸಿ. 

ಕಟಕ(Cancer): ಪಿತ್ರಾರ್ಜಿತ ಆಸ್ತಿಯ ನಿರೀಕ್ಷೆಯಲ್ಲಿದ್ದಲ್ಲಿ ಆ ಸಂಬಂಧ ಶುಭ ಸಮಾಚಾರ ಕೇಳಲಿದ್ದೀರಿ. ಉದರ ಸಂಬಂಧಿ ಸಮಸ್ಯೆಗಳು ಕಾಣಿಸಬಹುದು. ಮಕ್ಕಳಿಗಾಗಿ ಸಮಯ ನೀಡದಿದ್ದುದರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ತಂದೆ ತಾಯಿಯ ಆಶೀರ್ವಾದ ಪಡೆಯಿರಿ. 

ಸಿಂಹ(Leo): ರೈತರು, ಕಾರ್ಮಿಕರು, ಸಣ್ಣ ಪುಟ್ಟ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರಿಗೆ ಲಾಭವಿರಲಿದೆ. ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎಂಬ ವಿಷಯ ನೆನಪಿಡಿ. ಆಹಾರದ ವಿಷಯದಲ್ಲಿ ಜಾಗ್ರತೆ ಮಾಡಿ. ಮನೆ ದೇವರ ಸ್ಮರಣೆ ಮಾಡಿ. 

Thursday Born: ಗುರುವಾರ ಹುಟ್ಟಿದವರ ಗುಣ ಹೀಗಿರತ್ತೆ..

ಕನ್ಯಾ(Virgo): ಮನೆಯಲ್ಲಿ ಶುಭ ಕಾರ್ಯಕ್ರಮಗಳು ಜರುಗಲಿವೆ. ಇಷ್ಟಮಿತ್ರರ ಭೇಟಿಯಿಂದ ಸಂತುಷ್ಟರಾಗಲಿರುವಿರಿ. ಬಾಕಿ ಉಳಿದ ಗೃಹ ಕಾರ್ಯಗಳು ಪೂರ್ಣಗೊಳ್ಳಲಿವೆ. ಮಕ್ಕಳ ವಿದ್ಯಾಭ್ಯಾಸ ಸಂಬಂಧ ಚಿಂತಿತರಾಗುವಿರಿ. ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿ. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ. 

ತುಲಾ(Libra): ವ್ಯಾಪಾರದಲ್ಲಿ ಮಿಶ್ರಫಲ. ಮನರಂಜನೆಯಲ್ಲಿ ಕಾಲ ವ್ಯಯಿಸುವಿರಿ. ಪತ್ನಿಯ ಕಡೆಯಿಂದ ತಕರಾರುಗಳು ಏಳಬಹುದು. ಅದರ ಸತ್ಯಾಸತ್ಯತೆ ಬಗ್ಗೆ ಯೋಚಿಸಿ ಮಾತನಾಡಿ. ವಿದ್ಯಾರ್ಥಿಗಳಿಗೂ ಚಂಚಲ ಮನಸ್ಥಿತಿ, ದೇಹಾಲಸ್ಯ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

Vastu For Mental Health: ಒತ್ತಡದಿಂದ ಮುಕ್ತರಾಗ್ಬೇಕಂದ್ರೆ ಈ ರೀತಿ ಮಾಡಿ..

ವೃಶ್ಚಿಕ(Scorpio): ವ್ಯಾಪಾರದಲ್ಲಿ ಅಧಿಕ ಲಾಭವಾಗಿ ಮನಸ್ಸು ಸಂತೋಷಗೊಳ್ಳುವುದು. ಹೆಚ್ಚಿನ ಜನರ ಭೇಟಿಯಿಂದ ಉಲ್ಲಾಸ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಭಾಗಿ. ಸಹಾಯ ಬೇಡಿ ಬಂದವರನ್ನು ಹಾಗೆಯೇ ಕಳುಹಿಸಬೇಡಿ. ಗಣಪತಿಗೆ ಬೆಲ್ಲ ಕಡಲೆ ನೈವೇದ್ಯ ಮಾಡಿ. 

ಧನುಸ್ಸು(Sagittarius): ಮಂದಗತಿಯಲ್ಲಿ ಸಾಗುವ ಕೆಲಸಗಳು. ಮನೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳವಿರಿ. ಮಕ್ಕಳ ಪಾಲನೆ ಕಿರಿಕಿರಿ ಎನಿಸುವುದು. ಸಂಗಾತಿಯ ಆರೋಗ್ಯ ಉತ್ತಮವಾಗಿ ಸಮಾಧಾನ ತರುವುದು. ಕುಲದೇವತಾ ಸ್ಮರಣೆ ಮಾಡಿ. 

ಮಕರ(Capricorn): ದುರ್ಜನರ ಸಹವಾಸದಿಂದ ಕೆಟ್ಟ ಕೆಲಸಕ್ಕೆ ಪ್ರೇರಣೆ ಸಿಗಬಹುದು. ವಿವೇಚನಾ ಶಕ್ತಿ ಕಳೆದುಕೊಳ್ಳಬೇಡಿ. ಕೆಲಸ ಕಾರ್ಯಗಳಲ್ಲಿ ಎಡವಟ್ಟು ಮಾಡಿ ಸುಳ್ಳುಗಳನ್ನು ಹೇಳುವ ಸಾಧ್ಯತೆ. ಇದರಿಂದ ತಾತ್ಕಾಲಿಕವಾಗಿ ತಪ್ಪಿಸಿಕೊಂಡರೂ ಮುಂದೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಪ್ರಾಮಾಣಿಕತೆ ಮರೆಯದಿರುವುದು ಉತ್ತಮ. 

ಕುಂಭ(Aquarius): ಆತ್ಮೀಯರೇ ನಿಮ್ಮ ಬೆನ್ನಿಗೆ ಚೂರಿ ಹಾಕುವ ಸಾಧ್ಯತೆ ಇದೆ. ಸಿಗುತ್ತೇನೆಂದವರು ಕೈ ಕೊಟ್ಟು ಕಿರಿಕಿರಿಯಾಗಬಹುದು. ಕೊಂಡ ಹೊಸ ವಸ್ತುಗಳು ಮನೆಗೆ ತರುತ್ತಲೇ ಹಾಳಾಗಿ ಧನವ್ಯಯ ಎನಿಸುವುದು. ಮಕ್ಕಳ ಮಾನಸಿಕ ಆರೋಗ್ಯದ ವಿಷಯಕ್ಕಾಗಿ ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದೆ. ಹಸಿದವರಿಗೆ ಆಹಾರ ನೀಡಿ.

ಮೀನ(Pisces): ಗೌರವ ವೃದ್ಧಿಯಾಗಲಿದೆ. ಕುಟುಂಬವರ್ಗದವರಿಂದ ನಿಮ್ಮ ಕಾರ್ಯ ವೈಖರಿಗೆ ಶ್ಲಾಘನೆ ದೊರೆತು ಮತ್ತಷ್ಟು ಹುರುಪು ಬರಲಿದೆ. ಪ್ರತಿಭಾ ರಂಗದಲ್ಲಿರುವವರಿಗೆ ಅವಕಾಶಗಳು ದೊರೆತು ಸಂತಸವಾಗುವುದು.  ಸ್ವಂತ ಉದ್ಯಮ ಬೆಳೆಸುವತ್ತ ಮನೋಧರ್ಮ ಹೆಚ್ಚಬಹುದು. ಹಕ್ಕಿಗಳಿಗೆ ನೀರು, ಕಾಳು ಒದಗಿಸಿ. 

Latest Videos
Follow Us:
Download App:
  • android
  • ios