4 ಫೆಬ್ರವರಿ 2022, ಶುಕ್ರವಾರದ ಭವಿಷ್ಯ ಹೇಗಿದೆ?ಯಾವ ರಾಶಿಗೆ ಶುಭ ಫಲವಿದೆ?ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ

ಮೇಷ(Aries): ವಿದೇಶ ಪ್ರಯಾಣಕ್ಕೆ ಅವಕಾಶಗಳು ಒದಗಬಹುದು. ಸೃಜನಶೀಲತೆ ಕ್ಷೇತ್ರದಲ್ಲಿರುವವರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳು ದೊರಕುವುದು. ದೈವಾನುಕೂಲ ಇರಲಿದೆ. ಮನೆಯಲ್ಲಿ ಧಾರ್ಮಿಕ, ಕೌಟುಂಬಿಕ ಶುಭ ಕಾರ್ಯಗಳು ನಡೆಯುವುದರಿಂದ ಮನಸ್ಸು ಆಹ್ಲಾದಕರವಾಗಿರುವುದು. ನವಗ್ರಹ ಪ್ರಾರ್ಥನೆ ಮಾಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ(Taurus): ಇಂದು ಬಹಳ ಸಮಾಧಾನದಿಂದ ದಿನ ಕಳೆಯುವುದು. ಸೌಂದರ್ಯ ಸಂಬಂಧಿ ವಿಷಯಗಳಿಗಾಗಿ ಖರ್ಚು. ಪೂಜಾಕೈಂಕರ್ಯಗಳಲ್ಲಿ ಭಾಗಿಯಾಗುವ ಸಂಭವ. ಕೋಪಕ್ಕೆ ಆಸ್ಪದ ಕೊಡಬೇಡಿ. ಶ್ರದ್ಧೆಯಿಂದ ಲಲಿತಾ ಸಹಸ್ರನಾಮ ಪಠಿಸಿ. 

ಮಿಥುನ(Gemini): ಯಾವುದರಲ್ಲಿ ಧನಾತ್ಮಕ ಫಲಿತಾಂಶ ನಿರೀಕ್ಷಿಸುತ್ತಿದ್ದೀರೋ ಆ ವಿಷಯಕ್ಕಾಗಿ ಇನ್ನೂ ಹೆಚ್ಚಿನ ಪ್ರಯತ್ನ ಹಾಕಿದರಷ್ಟೇ ಫಲ ಸಿದ್ಧಿ. ಇಲ್ಲದಿದ್ದಲ್ಲಿ ನಿರಾಶೆ ಅನುಭವಿಸಬೇಕಾಗುತ್ತದೆ. ಮಾತಿನ ಬಲದಿಂದ ಎಲ್ಲರನ್ನು ಗೆಲ್ಲುವಿರಿ. ಮನರಂಜನೆಗಾಗಿ ಖರ್ಚು ಮಾಡುವಿರಿ. ದುರ್ಗಾ ಅಷ್ಟೋತ್ತರ ಪಠಿಸಿ. 

ಕಟಕ(Cancer): ಹಳೆಯ ಕೈ ಬಿಟ್ಟ ಸಾಲವೊಂದು ಅನಿರೀಕ್ಷಿತವಾಗಿ ಹಿಂದೆ ಬರಲಿದೆ. ಹೊಸ ಕೆಲಸ ಪ್ರಾರಂಭಕ್ಕೆ ಅತ್ಯುತ್ತಮ ದಿನ. ನ್ಯಾಯಾಲಯ ಪ್ರಕರಣಗಳಲ್ಲಿ ನಿಮಗೆ ಜಯ ಸಿಗಲಿದೆ. ಪ್ರೇಮ ಸಂಬಂಧವನ್ನು ಬಲು ಸೂಕ್ಷ್ಮವಾಗಿ ನಿಭಾಯಿಸಬೇಕು. ಮಹಾಲಕ್ಷ್ಮೀ ಆರಾಧನೆ ಮಾಡಿ. 

ಸಿಂಹ(Leo): ನೆಂಟರಿಷ್ಟರ ನಡೆ ಬೇಸರ ಮೂಡಿಸಬಹುದು. ಅವಮಾನಿಸುವ ಮಾತುಗಳನ್ನು ಕೇಳಬೇಕಾಗಬಹುದು. ಯಾವುದಕ್ಕೂ ತಾಳ್ಮೆ ಹಾಗೂ ಕೆಲಸವೇ ಉತ್ತರ ನೀಡಲಿ. ಪ್ರಯಾಣದಲ್ಲಿ ಸೌಖ್ಯ, ಆಲೋಚನೆಗಳು ವ್ಯತಿರಿಕ್ತ ಫಲ ಕೊಡಲಿವೆ. ಆರೋಗ್ಯದಲ್ಲಿ ಕೊಂಚ ಏರುಪೇರು. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 

ಕನ್ಯಾ(Virgo): ನಿಮ್ಮ ಚಾಣಾಕ್ಷತನದಿಂದ ಕೆಲಸಗಳೆಲ್ಲವೂ ಸರಾಗವಾಗಿ ಸಾಗುವುವು. ವಿದ್ಯಾರ್ಥಿಗಳಿಗೆ ಸ್ಪರ್ಧೆ, ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶದಲ್ಲಿ ಅವಕಾಶಗಳು ಸಿಗಲಿವೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ. 

ತುಲಾ(Libra): ಪಾಲುದಾರಿಕೆ ಕೆಲಸಗಳಲ್ಲಿ ಲಾಭವಿರಲಿದೆ. ವೃತ್ತಿಯಲ್ಲಿ ಒತ್ತಡ ಹೆಚ್ಚಿರಲಿದೆ. ತಲೆನೋವು, ಕತ್ತು, ಬೆನ್ನು ನೋವಿಗೆ ಹೈರಾಣಾಗುವಿರಿ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ. ಕುಟುಂಬ ಸದಸ್ಯರೊಂದಿಗೆ ಉತ್ತಮ ಮಾತುಕತೆ ಇರಲಿದೆ. ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಿ. 

Father And Son: ಅಪ್ಪನಿಗೆ ಹೆಮ್ಮೆ ತರುವ ಹುಡುಗರ ರಾಶಿಯಿದು..

ವೃಶ್ಚಿಕ(Scorpio): ಆರೋಗ್ಯ ಸಮಸ್ಯೆಗಳು ಹೆಚ್ಚಬಹುದು. ಯೋಗ, ಮತ್ತಿತ್ತರೆ ಯಾವುದೇ ದೈಹಿಕ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ. ಕೆಲಸ ವಿರಾಮದಲ್ಲಿ ಸಾಗಲಿದೆ. ಸಂಗಾತಿಗೆ ಹೆಚ್ಚಿನ ಸಮಯ ಕೊಡಿ. ಹೊಸ ಖರೀದಿಯಿಂದ ಸಂತುಷ್ಟರಾಗುವಿರಿ. ತಂದೆ ತಾಯಿಯ ಆಶೀರ್ವಾದ ಪಡೆಯಿರಿ. 

ಧನುಸ್ಸು(Sagittarius): ದಿನ ನಿತ್ಯದ ಚಟುವಟಿಕೆಗಳಿಗೆ ಸಮಯ ಒದಗಲಿದೆ. ಮಕ್ಕಳಿಗಾಗಿ ಸಮಯ ಹೊಂದಿಸುವಿರಿ. ನಿಮ್ಮ ಸಂವಹನ ಕೌಶಲ್ಯಗಳಿಂದ ಜನ ಮೆಚ್ಚುಗೆ ಗಳಿಸುತ್ತೀರಿ. ಹೊಸ ವಸ್ತುಗಳ ಖರೀದಿಯಿಂದ ಸಂತಸ ಹೆಚ್ಚಲಿದೆ. ಶಾರದಾ ದೇವಿ ಆರಾಧನೆ ಮಾಡಿ. 

ಮಕರ(Capricorn): ಆಪ್ತರೆನಿಸಿಕೊಂಡವರ ಮಾತುಗಳು ಮನಸ್ಸಿಗೆ ದುಃಖ ಉಂಟು ಮಾಡಬಹುದು. ಹೊಸ ಉದ್ಯಮ ಆರಂಭಿಸಬಹುದು. ಮನೆಯಲ್ಲಿ ನಲ್ಲಿ, ಎಲೆಕ್ಟ್ರಿಕ್ ಉಪಕರಣಗಳು ರಿಪೇರಿಗೆ ಬಂದು ಕಿರಿಕಿರಿ ಉಂಟಾಗಬಹುದು. ಹೊಸ ಸಂಘಗಳನ್ನು ಸೇರಿಕೊಳ್ಳುವಿರಿ. ಮಹಾಲಕ್ಷ್ಮೀಯಲ್ಲಿ ಪ್ರಾರ್ಥನೆ ಮಾಡಿ. 

Best Preachings: ಭೀಷ್ಮ ಪಿತಾಮಹ ಹೇಳಿದ ಜೀವನ ಪಾಠಗಳು

ಕುಂಭ(Aquarius): ಕೌಟುಂಬಿಕ ಜೀವನವು ಉದ್ವಿಗ್ನತೆಯಿಂದ ಕೂಡಿರಲಿದೆ. ಅತ್ತೆ ಸೊಸೆ ನಡುವೆ ಜಗಳಗಳು ಏರ್ಪಡಬಹುದು. ಮಗುವಿನ ಭವಿಷ್ಯದ ಬಗ್ಗೆ ಚಿಂತೆ ಕಾಡಲಿದೆ. ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಮನಸ್ಸು ವಿಚಾರ ಮಾಡಬಹುದು. ಲಲಿತಾ ಸಹಸ್ರನಾಮ ಹೇಳಿಕೊಳ್ಳಿ. 

ಮೀನ(Pisces): ಸಿಹಿ ತಿನ್ನುವ ಭಾಗ್ಯ. ಸಂಗಾತಿಯ ಸಹಕಾರದಿಂದ ಕೆಲಸಕಾರ್ಯಗಳು ಯಶಸ್ವಿಯಾಗಲಿವೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹೊಸ ಅವಕಾಶಗಳು ಅರಸಿ ಬರಲಿವೆ. ಹೊಸ ಆಸ್ತಿ ಖರೀದಿ ಹಾಗೂ ಮಾರಾಟ ಸಾಧ್ಯತೆಗಳಿವೆ. ಅಮ್ಮನವರಿಗೆ ಬಾಗೀನ ನೀಡಿ.