Daily Horoscope: ಮಿಥುನಕ್ಕೆ ಧನಲಾಭ, ಕನ್ಯಾ ರಾಶಿಗೆ ಉದಾಸೀನತೆ

2 ಫೆಬ್ರವರಿ 2022, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಕರ ರಾಶಿಯ ನಿರುದ್ಯೋಗಿಗಳಿಗೆ ಎದುರಾಗಲಿದೆ ಅವಕಾಶ

Daily horoscope of February 2nd 2022 in Kannada SKR

ಮೇಷ(Aries): ಬಹಳ ಕಾಲದಿಂದ ಬಾಕಿ ಇರಿಸಿಕೊಂಡ ಸರ್ಕಾರಿ ಕೆಲಸಗಳು ಈಡೇರಲಿವೆ. ಕಚೇರಿಯಲ್ಲಿ ಬಿಡುವಿರದ ಕೆಲಸವಾದರೂ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಮನೆಯಲ್ಲಿ ಕುಟುಂಬ ಸದಸ್ಯರಿಗೆ ಸಮಯ ಸಿಗದ ಕಾರಣಕ್ಕೆ ಜಗಳವಾಗಬಹುದು. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

ವೃಷಭ(Taurus): ಹೊಸ ವಿಷಯಗಳ ಕಲಿಕೆಯಲ್ಲಿ ಆಸಕ್ತಿ ಇರಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಿದ್ದಿಸಲಿದೆ. ಧಾರ್ಮಿಕ ವಿಚಾರಗಳಲ್ಲಿ ಸಮಯ ವ್ಯಯಿಸುವಿರಿ. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಬಹುದು. ನಿರುದ್ಯೋಗಿಗಳಿಗೆ ಅವಕಾಶಗಳು ಬರಲಿವೆ. ಇರುವೆಗಳಿಗೆ ಸಿಹಿ ತಿನ್ನಿಸಿ. 

ಮಿಥುನ(Gemini): ಗೃಹೋಪಯೋಗಿ ವಸ್ತುಗಳಿಗಾಗಿ ಧನ ವ್ಯಯ ಮಾಡಲಿರುವಿರಿ. ಮಾತು ಮುಖ್ಯವಾಗಿರುವ ಕೆಲಸಗಳಲ್ಲಿ ಪ್ರಶಂಸೆ ಗಳಿಸುವಿರಿ. ಮುಂದಾಲೋಚನೆಯಿಂದ ನೀವು ಇಂದು ಹೂಡಿಕೆ ಮಾಡಬಹುದು. ಷೇರು ವ್ಯವಹಾರಗಳಲ್ಲಿ ಲಾಭ ದಕ್ಕಲಿದೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕಟಕ(Cancer): ಮತ್ತೊಬ್ಬರ ಕೊಂಕು ಮಾತುಗಳು ನಿಮ್ಮನ್ನು ಕುಗ್ಗಿಸಬಹುದು. ಮನಸ್ಸಿನಿಂದ ನೋಯುವ ಬದಲು ಬುದ್ಧಿಯಿಂದ ಅದನ್ನು ನಿರ್ಲಕ್ಷಿಸುವುದನ್ನು ಕಲಿಯಿರಿ. ಉದ್ಯೋಗಸ್ಥರಿಗೆ, ವಿದ್ಯಾರ್ಥಿಗಳಿಗೆ ಪ್ರಗತಿ ಇರಲಿದೆ. ಸಾಲ ವಾಪಸಾತಿ ಇದೆ. ಗಣಪತಿಗೆ ದರ್ಬೆ ಅರ್ಪಿಸಿ. 

ಸಿಂಹ(Leo): ಕೆಲಸಗಳಿಗೆ ಹೆಚ್ಚಿನ ಪರಿಶ್ರಮ ಹಾಕಿದರೆ ಫಲ ಸಿದ್ದಿಸಿಯೇ ತೀರುತ್ತದೆ. ಅವಿವಾಹಿತರು ಕೊಂಚ ನಿರೀಕ್ಷೆ ಕಡಿಮೆ ಮಾಡಿಕೊಳ್ಳಿ. ವಿವಾಹದ ವಿಚಾರದಲ್ಲಿ ಗುಣಕ್ಕೆ ಮಣೆ ಹಾಕಿ. ಪ್ರಮುಖ ನಿರ್ಧಾರಗಳ ವಿಷಯದಲ್ಲಿ ನಿಮ್ಮ ನಿಲುವುಗಳು ಮೊದಲು ನಿಮಗೆ ಸ್ಪಷ್ಟವಿರಲಿ. ಗಣಪತಿ ದೇವಾಲಯಕ್ಕೆ ಭೇಟಿ ನೀಡಿ. 

ಕನ್ಯಾ(Virgo): ಏನಾದರೂ ಮಾಡಬೇಕು ಎಂದು ಕನಸು ಕಾಣುವ ಬದಲು ಮುನ್ನುಗ್ಗಿ ಅದಕ್ಕೆ ಬೇಕಾದ ಪ್ರಯತ್ನಗಳನ್ನು ಮಾಡಿ. ಪ್ರಯತ್ನವೇ ಇಲ್ಲದೆ ಫಲ ಬೇಕೆಂದರೆ ಹೇಗೆ? ಸಂಗಾತಿಯೊಂದಿಗೆ ಜಗಳ, ಮುನಿಸು ಹೆಚ್ಚಬಹುದು. ನೆಮ್ಮದಿ ಬೇಕೆಂದರೆ ತಾಳ್ಮೆ ಮೈಗೂಡಿಸಿಕೊಳ್ಳಿ. ಕುಲ ದೇವರ ಆರಾಧನೆ ಮಾಡಿ. 

ತುಲಾ(Libra): ಮಕ್ಕಳ ಕಲಿಕೆ ವಿಷಯದಲ್ಲಿ ಆತಂಕ ಹೆಚ್ಚಬಹುದು. ಬೃಹತ್ ಕೈಗಾರಿಕೆ, ರಿಯಲ್ ಎಸ್ಟೇಟ್ ಮುಂತಾದ ಉದ್ಯಮದಲ್ಲಿರುವವರು ನಷ್ಟದಿಂದ ಕಂಗಾಲಾಗಬಹುದು. ಅವಿವಾಹಿತರಿಗೆ ನಿರಾಶೆ. ನೀವು ಮನೆಯವರ ಬಗ್ಗೆ ತೋರುತ್ತಿರುವ ಅಸಡ್ಡೆಯ ಪರಿಣಾಮಗಳನ್ನು ಎದುರಿಸುವಿರಿ. ಮನೆ ಹಿರಿಯರ ಆಶೀರ್ವಾದ ಪಡೆಯಿರಿ. 

ಇಂದು Purandara Dasa ಪುಣ್ಯತಿಥಿ, ಕರ್ನಾಟಕ ಸಂಗೀತ ಪಿತಾಮಹನ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು

ವೃಶ್ಚಿಕ(Scorpio): ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದೆ ತಳಮಳ ಅನುಭವಿಸುವಿರಿ. ಸಾಲ ಪಡೆಯಬೇಕಾಗಬಹುದು. ದೂರ ಪ್ರಯಾಣ ಕೈಗೊಳ್ಳಲಿದ್ದೀರಿ. ವಿದ್ಯಾರ್ಥಿಗಳು ಚಂಚಲ ಮನಸ್ಥಿತಿ ಅನುಭವಿಸಬಹುದು. ಅವಿವಾಹಿತರಿಗೆ ನಿರಾಸೆ. ಗುರುವಿನ ಸ್ಮರಣೆ ಮಾಡಿ. 

ಧನುಸ್ಸು(Sagittarius): ನಿಮ್ಮ ಮುಂದಾಳತ್ವದಲ್ಲಿ ಸಾಮಾಜಿಕ ಕಾರ್ಯಗಳು ಜರುಗಿ ಮನಸ್ಸಿಗೆ ಸಂತೋಷ ಸಿಗಲಿದೆ. ವೃತ್ತಿಯಲ್ಲಿ ಪೈಪೋಟಿ ಇದ್ದರೂ ನಿಮ್ಮ ಕೈ ಮೇಲಾಗಲಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉತ್ಸಾಹ, ಪ್ರಶಂಸೆ ಇರಲಿದೆ. ಮನೆ ದೇವರಿಗೆ ಪ್ರಾರ್ಥಿಸಿ. 

ಮಕರ(Capricorn): ನಿರುದ್ಯೋಗಿಗಳಿಗೆ ಒಂದಕ್ಕೂ ಹೆಚ್ಚು ಅವಕಾಶಗಳು ಬಂದು ಆಯ್ಕೆಯಲ್ಲಿ ಗೊಂದಲವಾಗಬಹುದು. ಕೇವಲ ಹಣವೊಂದನ್ನೇ ನೋಡದೆ, ಎಲ್ಲ ರೀತಿಯಲ್ಲಿ ಯಾವುದು ಲಾಭಕರವಾಗಿದೆ ನೋಡಿ ಆಯ್ಕೆ ಮಾಡಿ. ಉದ್ಯೋಗದಲ್ಲಿ ಬಲವಿದೆ. ಶಾರದಾಂಬೆ ಸ್ಮರಣೆ ಮಾಡಿ. 

Astrology and dreams : ಬೆಳಗಿನ ಜಾವ ಬೀಳೋ ಕನಸುಗಳು ನಿಜವಾಗ್ತಾವಾ?

ಕುಂಭ(Aquarius): ಮನೆ ಸದಸ್ಯರ ಸಮಸ್ಯೆಗಳೇನು ವಿಚಾರಿಸಿ. ನಿಮ್ಮ ಆರೋಗ್ಯದಲ್ಲಿ ಕೊಂಚ ಏರುಪೇರಾಗಬಹುದು. ಆಹಾರದ ಕಡೆ ಹೆಚ್ಚಿನ ಗಮನ ವಹಿಸಿ. ವೃತ್ತಿಯಲ್ಲಿ ಏರುಪೇರಿಲ್ಲ. ವಾಹನ ಯೋಗವಿದೆ. ಲೇವಾದೇವಿ ವ್ಯವಹಾರದಲ್ಲಿ ಲಾಭವಿರಲಿದೆ. ಗಣಪತಿ ಸ್ಮರಣೆ ಮಾಡಿ. 

ಮೀನ(Pisces): ನಿಮ್ಮ ಅತಿಯಾದ ಆತ್ಮಪ್ರತಿಷ್ಠೆ ಬಿಟ್ಟರೆ ಮಾತ್ರ ಪ್ರಗತಿ ಸಾಧ್ಯ. ಇದರಿಂದ ಜನರನ್ನು ಕಳೆದುಕೊಳ್ಳುವ ಜೊತೆಗೆ ಅವಕಾಶಗಳನ್ನೂ ಕೈ ಚೆಲ್ಲುವಿರಿ. ಮಕ್ಕಳ ಮಾನಸಿಕ ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ಅಗತ್ಯ. ಶಿವ ಪಾರ್ವತಿಯ ಪೂಜೆ ಮಾಡಿ. 

Latest Videos
Follow Us:
Download App:
  • android
  • ios