Daily Horoscope: ಮಿಥುನ ರಾಶಿಯ ನಿರುದ್ಯೋಗಿಗಳಿಗೆ ಅವಕಾಶ, ವೃಶ್ಚಿಕಕ್ಕೆ ಹಣಕಾಸಿನ ಅಡಚಣೆ

24 ಫೆಬ್ರವರಿ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ತುಲಾ ರಾಶಿಗೆ ಮೇಲಧಿಕಾರಿಗಳ ಒತ್ತಡ

Daily horoscope of February 24th 2022 in Kannada SKR

ಮೇಷ(Aries): ನಿಮ್ಮ ಮನೋಭಿಲಾಷೆಯೊಂದು ಈಡೇರಲಿದೆ. ಆಪ್ತರೊಂದಿಗೆ ಬಹು ಕಾಲದ ಮುನಿಸು ಶಮನವಾಗಲಿದೆ. ನಿಮ್ಮ ದೌರ್ಬಲ್ಯವನ್ನು ಯಾರೆದುರೂ ಬಿಟ್ಟು ಕೊಡದಂತೆ ಜಾಗ್ರತೆ ವಹಿಸಿ. ಅದನ್ನವರು ತಮ್ಮ ಲಾಭಕ್ಕೆ ಬಳಸಬಹುದು. ಉದ್ಯೋಗದಲ್ಲಿ ಸಹಕಾರ ಸಿಗಲಿದೆ. ರಾಘವೇಂದ್ರ ಸ್ವಾಮಿಯ ಶತನಾಮಾವಳಿ ಹೇಳಿಕೊಳ್ಳಿ. 

ವೃಷಭ(Taurus): ಚುರುಕಿನಿಂದ ಕೆಲಸಗಳು ಸಾಗುತ್ತಾ ಹೋಗುತ್ತವೆ. ಸುಲಭವಾಗಿ ಕೆಲಸ ಮಾಡುವುದು ಸಾಧ್ಯವಾಗುತ್ತದೆ. ಸಂಗಾತಿಯಿಂದ ನಿಮ್ಮ ಕೆಲಸಕ್ಕೆ ಸಹಾಯ ಸಿಗುತ್ತದೆ. ಪಾಲುದಾರಿಕೆಯ ಕೆಲಸದಲ್ಲಿ ಉತ್ತಮ ಲಾಭ ಗಳಿಸುತ್ತೀರಿ. ವಿಷ್ಣು ಸಹಸ್ರನಾಮ ಹೇಳಿ. 

ಮಿಥುನ(Gemini): ಶೇರು ವ್ಯವಹಾರಗಳಲ್ಲಿ ಧನ ಲಾಭವಿರಲಿದೆ. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಲಿವೆ. ವಾಹನ ಸೌಖ್ಯವಿದೆ, ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಸುಸ್ತು, ಸೊಂಟ ನೋವು ಕಾಡಬಹುದು. ನೆಂಟರಿಷ್ಟರ ಆಗಮನದಿಂದ ಸಂತಸವಾಗುವುದು. ನವಗ್ರಹ ಪ್ರಾರ್ಥನೆ ಮಾಡಿ. 

ಕಟಕ(Cancer): ಹಿತೈಷಿಗಳೊಂದಿಗೆ ಜೀವನದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವಿರಿ. ನಿಮ್ಮ ವಾಕ್ಚಾತುರ್ಯವನ್ನು ಎಲ್ಲರೂ ಮೆಚ್ಚುವರು. ಉದ್ಯೋಗ ರಂಗದಲ್ಲಿ ಬದಲಿ ಅವಕಾಶ ಒದಗಿ ಬರಲಿವೆ. ಕುಟುಂಬ ವರ್ಗದಲ್ಲಿ ವಿಚಾರ ವಿನಿಮಯದಿಂದ ಕಾರ್ಯಸಿದ್ದಿ, ರಾಯರ ಮಠಕ್ಕೆ ಭೇಟಿ ನೀಡಿ. 

ಸಿಂಹ(Leo): ಸರ್ಕಾರಿ ಅಥವಾ ಖಾಸಗಿ ಕೆಲಸದಲ್ಲೂ ಲಾಭವನ್ನೇ ಗಳಿಸುತ್ತೀರಿ. ಅಧಿಕಾರಿ ವರ್ಗಕ್ಕೆ ಸ್ಥಾನ ಬದಲಾವಣೆ, ಶೇರು ವ್ಯವಹಾರಗಳಲ್ಲಿ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ.  ಆಹಾರ ಸಮೃದ್ಧಿ ಇರಲಿದೆ. ಮಕ್ಕಳ ವಿದ್ಯಾಭ್ಯಾಸ ವಿಷಯವಾಗಿ ಖರ್ಚು ಹೆಚ್ಚು. ಲಕ್ಷ್ಮೀ ವೆಂಕಟೇಶ್ವರ ಪ್ರಾರ್ಥನೆ ಮಾಡಿ. 

ಕನ್ಯಾ(Virgo): ಉದ್ಯೋಗದಲ್ಲಿ ಇರುವ ಅಡೆತಡೆಗಳು ನಿವಾರಣೆ ಆಗುತ್ತದೆ. ಅಂದುಕೊಂಡ ಕೆಲಸಗಳು ವೇಗ ಗತಿಯಲ್ಲಿ ನಡೆಯುತ್ತದೆ. ಜೀವನದ ಕಷ್ಟದ ಸಂದರ್ಭದಲ್ಲಿ ಆದವರನ್ನು ಸ್ಮರಿಸಿ ಅವರೊಂದಿಗೆ ಮಾತನಾಡಿ. ಆರೋಗ್ಯದಲ್ಲಿ ಏರುಪೇರಾಗಬಹುದು. ಚರ್ಮ ಸಂಬಂಧಿ ಸಮಸ್ಯೆ ಹೆಚ್ಚಬಹುದು. ಗೋ ಗ್ರಾಸ ನೀಡಿ. 

ತುಲಾ(Libra): ಸರ್ಕಾರಿ ಕೆಲಸ ಮಾಡುವವರಿಗೆ ಮೇಲಾಧಿಕಾರಿಗಳಿಂದ ಒತ್ತಡ(Stress) ಹೆಚ್ಚಾಗಬಹುದು.  ವೃತ್ತಿಗೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಸಂದಿಗ್ಧತೆ ಇದ್ದರೆ, ನಂತರ ನೀವು ಉತ್ತಮ ಸಲಹೆಗಾರರಿಂದ ಸಲಹೆ ಪಡೆಯುವುದೊಳಿತು. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ.

Temple Special: ಈ ದೇವಾಲಯದಲ್ಲಿ ಶಿವನಿಗೆ ಹಾಲು ನೀಡಿ ಮಜ್ಜಿಗೆ ಪ್ರಸಾದ ಪಡೆಯಿರಿ!

ವೃಶ್ಚಿಕ(Scorpio): ಹಣಕಾಸಿನ ಅಡಚಣೆಗಳು ಕಂಗೆಡಿಸಬಹುದು. ಮಾತಿನ ಚಕಮಕಿಯಿಂದ ದಾಂಪತ್ಯದಲ್ಲಿ ಅಸಮಾಧಾನ, ವ್ಯವಸಾಯದಲ್ಲಿ, ರಾಜಕೀಯದದಲ್ಲಿ ಏರುಪೇರಿಲ್ಲ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಪರರಿಂದ ವಂಚನೆ, ಮಾನ-ಮನಸ್ಸಿಗೆ ಭಂಗ. ಹಕ್ಕಿಗಳಿಗೆ ಕಾಳು ತಿನ್ನಿಸಿ. 

ಧನುಸ್ಸು(Sagittarius): ಸಹೋದ್ಯೋಗಿಗಳ ಎಡವಟ್ಟಿನಿಂದ ಕೋಪ ಬರಬಹುದು. ನಿಧಾನವಾಗಿ ಸನ್ನಿವೇಶ ನಿಭಾಯಿಸಿ. ಕಾರ್ಯನಿಮಿತ್ತ ಕೈಗೊಂಡ ದೂರ ಪ್ರವಾಸ ಯಶಸ್ವಿಯಾಗುವುದು. ಮನೆ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಆಶೀರ್ವಾದ ಬಲ ಸಿಗಲಿದೆ. 

ಮಕರ(Capricorn): ದಾಂಪತ್ಯದಲ್ಲಿ ಮಧುರ ಸಂಬಂಧ ಇರಲಿದೆ. ಅವಿವಾಹಿತರಿಗೆ ಸಂಬಂಧ ಕೂಡಿ ಬರಲಿದೆ. ಹಿಂದೆ ಯಾವುದೋ ಕಾರಣಕ್ಕೆ ಅರ್ಧಕ್ಕೆ ನಿಂತ ಕೆಲಸ ಈಗ ಪೂರ್ಣವಾಗಬಹುದು. ಹೊಸ ಹೂಡಿಕೆ ಸಧ್ಯ ಫಲಕಾರಿಯಾಗದು. ನಿಮ್ಮ ಗುರು ಹಿರಿಯರನ್ನು ಸ್ಮರಿಸಿಕೊಳ್ಳಿ. 

Mahashivratri : ಈ ಶಿವರಾತ್ರಿಗೆ ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾಗಿರಿ..

ಕುಂಭ(Aquarius): ನೆರವು ಕೇಳಿ ಬಂದವರನ್ನು ಹಾಗೆಯೇ ಕಳುಹಿಸದೆ ಸಾಧ್ಯವಾದ ನೆರವು ನೀಡಿ. ನಿಮ್ಮ ಅಜಾಗರೂಕತೆಯ ಹಾಗೂ ಅಸಡ್ಡೆಯ ಕಾರಣಗಳಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. ಗೃಹದಲ್ಲಿ ಮಂಗಳ ಕಾರ್ಯಕ್ಕೆ ನಾಂದಿ. ರಾಮ ನಾಮ ಧ್ಯಾನ ಮಾಡಿ. 

ಮೀನ(Pisces): ಒಗ್ಗೂಡಿರುವ ಹಣದ ಪ್ರದರ್ಶನ ಸಲ್ಲದು. ನಿಮ್ಮ ಪ್ರಾಮಾಣಿಕತೆ ಹಾಗೂ ಶ್ರಮಕ್ಕೆ ಬೆಲೆ ಇದ್ದೇ ಇದೆ. ನಿಮ್ಮ ಸಂಪರ್ಕಗಳ ಮೂಲಕ ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಕುಟುಂಬದ ಇತರ ಸದಸ್ಯರ ಮಾತುಗಳಿಗೆ ಬೆಲೆ ನೀಡಿ. ಕೃಷ್ಣನಿಗೆ ತುಳಸಿ ಅರ್ಪಿಸಿ. 

Latest Videos
Follow Us:
Download App:
  • android
  • ios