Daily Horoscope: ಬದುಕು ಬದಲಿಸುವ ನಿರ್ಧಾರ ತೆಗೆದುಕೊಳ್ಳುವ ವೃಶ್ಚಿಕ
13 ಫೆಬ್ರವರಿ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೇಷಕ್ಕೆ ಹಣದ ವಿಷಯಕ್ಕೆ ಕಸಿವಿಸಿ, ಮಕರಕ್ಕೆ ವಿಶೇಷ ದಿನ
ಮೇಷ(Aries): ನೀವು ಕಾಯುತ್ತಿರುವ ಹಣ ಕೈಗೆ ಬರದೆ ಕಸಿವಿಸಿಯಾಗಬಹುದು. ಸುಸ್ತು, ಒತ್ತಡದ ಕಾರಣದಿಂದ ಕೋಪ ಹೆಚ್ಚುವುದು. ಕೋಪದ ಭರದಲ್ಲಿ ನೀವಾಡುವ ಮಾತುಗಳಿಂದ ನೆಮ್ಮದಿ ಕೆಡಬಹುದು. ಈ ಸರಣಿ ಅಪಘಾತಗಳಾಗದಂತೆ ಎಚ್ಚರ ವಹಿಸಲು ಈ ದಿನ ಪೂರ್ತಿ ನೀವು ವಿಶ್ರಾಂತಿ ತೆಗೆದುಕೊಳ್ಳಿ. ಸೂರ್ಯ ನಮಸ್ಕಾರ ಮಾಡಿ.
ವೃಷಭ(Taurus): ನಿಮ್ಮ ಪ್ರೇಮ ನಿವೇದನೆಗೆ ಫಲ ಸಿಗಲಿದೆ. ಹೊಸ ಭಾವನೆಗಳು ಭರಪೂರವಾಗಿ ಮನಸ್ಸನ್ನು ಆವರಿಸಲಿವೆ. ನೀವೇನೇ ಯೋಚನೆ ಮಾಡಿದರೂ ಅದು ತಾನಾಗಿಯೇ ಸಿದ್ದಿಸಿ ಅಚ್ಚರಿ ಮೂಡಿಸುವುದು. ಇದೊಂಥರಾ ಅದೃಷ್ಟದ ದಿನ. ವಿಷ್ಣುವಿನ ಪ್ರಾರ್ಥನೆ ಮಾಡಿ.
ಮಿಥುನ(Gemini): ಸಂಗಾತಿಯೊಂದಿಗೆ ಅತ್ಯುತ್ತಮ ಕ್ಷಣಗಳನ್ನು ಕಳೆಯುವಿರಿ. ದೂರ ಪ್ರಯಾಣ ಸಾಧ್ಯತೆ. ಮಕ್ಕಳಿಂದ ಮನೋರಂಜನೆ. ಆರೋಗ್ಯ ಸಹಕಾರ ಚೆನ್ನಾಗಿರಲಿದೆ. ಲಕ್ಷ್ಮೀ ವೆಂಕಟೇಶ್ವರ ಪ್ರಾರ್ಥನೆಯಿಂದ ಒಳಿತಾಗುವುದು. ಆದಿತ್ಯ ಹೃದಯ ಪಠಿಸಿ.
ಕಟಕ(Cancer): ವ್ಯಾಪಾರ, ಹೋಟೆಲ್ ವ್ಯವಹಾರದಲ್ಲಿ ಅಧಿಕ ಲಾಭವಿರಲಿದೆ. ಇಂದು ಬರುವ ಸಂದೇಶವೊಂದು ನಿಮ್ಮ ಬದುಕನ್ನೇ ಬದಲಿಸಬಹುದು. ಆಧ್ಯಾತ್ಮಿಕ ವಿಷಯಗಳು ಮನಸ್ಸನ್ನು ಆವರಿಸಬಹುದು. ಲಕ್ಷ್ಮೀ ವೆಂಕಟೇಶ್ವರ ಪ್ರಾರ್ಥನೆ ಮಾಡಿ.
ಸಿಂಹ(Leo): ಸಹೋದರ ವರ್ಗದವರಿಂದ ದ್ವೇಷ, ವಿಷ ಬಿತ್ತುವ ಕಾರ್ಯ, ನಂಬಿಸಿ ವಂಚಿಸಬಹುದು. ಮನಸ್ಸು ಸಂಪೂರ್ಣ ಗೊಂದಲದಲ್ಲಿ ಮುಳುಗುವುದು. ಸರಿ ಯಾವುದು, ಯಾರು ಒಳ್ಳೆಯವರು ತಿಳಿಯದೆ ಕಸಿವಿಸಿಯಾಗಬಹುದು. ಏನೂ ಮಾತಾಡದೆ ಸುಮ್ಮನಿದ್ದು, ಧ್ಯಾನ ಮಾಡಿ. ನಂತರ ಮುಂದಿನ ವಿಷಯಗಳ ಬಗ್ಗೆ ಯೋಚಿಸಿ. ಅಶ್ವತ್ಥ ಕಟ್ಟೆಗೆ ದೀಪ ಹಚ್ಚಿ.
Benefits Of Aarti: ನಾವೇಕೆ ದೇವರಿಗೆ ಆರತಿ ಮಾಡುತ್ತೇವೆ?
ಕನ್ಯಾ(Virgo): ನಿಮ್ಮ ಹಾಗೂ ಸಂಗಾತಿಯ ನಡುವಿನ ಸಂವಹನ ಕೊರತೆಯಿಂದಾಗಿ ಸಮಸ್ಯೆಗಳು ಮತ್ತಷ್ಟು ಜಟಿಲಗೊಂಡಾವು. ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸಲು ಬಿಡದಿದ್ದರೆ ಒಳ್ಳೆಯದು. ನವಗ್ರಹ ಶ್ಲೋಕ ಹೇಳಿಕೊಳ್ಳಿ.
ತುಲಾ(Libra): ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಯ ಕಾರಣಕ್ಕೆ ನೀವು ಮಾಡಿದ ಯೋಜನೆ ಬುಡಮೇಲಾಗಬಹುದು. ನಿಮ್ಮನ್ನು ನೀವು ಉತ್ತಮಪಡಿಸಿಕೊಳ್ಳುವತ್ತ ಗಮನ ಹರಿಸುವಿರಿ. ಹವ್ಯಾಸ ಚಟುವಟಿಕೆಗಳು ಸಂತಸ ಕೊಟ್ಟಾವು. ಆದಿತ್ಯ ಹೃದಯ ಪಠಿಸಿ.
Valentines Day : ಪ್ರೇಮಿಗಳ ಮನಸ್ಸು ಕದಿಯಬೇಕೆಂದ್ರೆ ರಾಶಿಗನುಗುಣವಾಗಿ ಗಿಫ್ಟ್ ನೀಡಿ
ವೃಶ್ಚಿಕ(Scorpio): ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಳ್ಳಲಿರುವಿರಿ. ಇದರಿಂದ ಒಳಿತಾಗುವುದು. ಮತ್ತೊಬ್ಬರ ವಿಷಯದಲ್ಲಿ ಸಾಕಷ್ಟು ಅಂತರ ನಿಭಾಯಿಸಿ. ನಿಮ್ಮ ಒಡನಾಟ ಅವರಿಗೆ ಮೂಗು ತೂರಿಸುವಿಕೆ ಎನಿಸದಂತೆ ಎಚ್ಚರ ವಹಿಸಿ. ಗಣಪತಿ ಶ್ಲೋಕ ಹೇಳಿಕೊಳ್ಳಿ.
ಧನುಸ್ಸು(Sagittarius): ಮೂಢನಂಬಿಕೆಯನ್ನು ಬಿಟ್ಟು ಪ್ರಾಕ್ಟಿಕಲ್ಲಾಗಿ ಯೋಚಿಸಿ. ರಾಜಕೀಯ, ಜಾತಿ, ಮತ, ಧರ್ಮದ ಕಿರಿಕಿರಿಗಳನ್ನು ಮೇ ಮೇಲೆ ಎಳೆದುಕೊಳ್ಳಬೇಡಿ. ಅದರಿಂದ ಅಪಾರ ದ್ವೇಷ ಎದುರಿಸಬೇಕಾಗಬಹುದು. ಹೊಸ ಕಲಿಕೆಯಲ್ಲಿ ತೊಡಗಿಸಿಕೊಳ್ಳಿ. ಹಳದಿ ಬಣ್ಣದ ವಸ್ತ್ರ ದಾನ ಮಾಡಿ.
ಮಕರ(Capricorn): ವೈವಾಹಿಕ ಜೀವನದಲ್ಲಿ ಹೆಚ್ಚು ನೆಮ್ಮದಿ ಇರಲಿದೆ. ಭೂರಿ ಬೋಜನ ಸವಿಯುವ ಅವಕಾಶ ಇರಲಿದೆ. ಪ್ರೇಮಿಗಳಿಗೆ ಈ ದಿನ ವಿಶೇಷವಾಗಿರಲಿದೆ. ಹೊಸ ವಸ್ತುಗಳನ್ನು ಕೊಳ್ಳುವಿರಿ. ಮಕ್ಕಳ ಪ್ರಗತಿ ಸಂತಸ ತರುವುದು. ಗೋವಿಗೆ ಹಸಿರು ಹುಲ್ಲನ್ನು ತಿನ್ನಿಸಿ.
Sleep Direction: ವಾಸ್ತು ಮಾತ್ರವಲ್ಲ, ವಿಜ್ಞಾನವೂ ಹೇಳುತ್ತೆ, ಈ ದಿಕ್ಕಿಗೇ ತಲೆ ಹಾಕಬೇಕೆಂದು, ಯಾಕೆ ಗೊತ್ತಾ?
ಕುಂಭ(Aquarius): ನೀವು ಕದ್ದು ಮುಚ್ಚಿ ನಡೆಸುವ ವ್ಯವಹಾರಗಳು ಇತರರಿಗೆ ತಿಳಿದು ಪರಿಣಾಮ ಎದುರಿಸಬೇಕಾಗಿ ಬರಬಹುದು. ನ್ಯಾಯ ಇದ್ದಾಗ ಮುಚ್ಚಿಡುವ ಅಗತ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಮನೆಯನ್ನು ಹಾಗೂ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಿ. ವಿಷ್ಣು ಸಹಸ್ರನಾಮ ಪಠಣ ಮಾಡಿ.
ಮೀನ(Pisces): ಮನೆಯಿಂದ ಬೇಡದ ವಸ್ತುಗಳನ್ನು ಹೊರಗೆ ದಾಟಿಸಿ. ಕೌಟುಂಬಿಕವಾಗಿ ಉತ್ತಮ ಸಹಕಾರ ಸಿಕ್ಕಿ ಕೆಲಸಗಳು ಮುಂದುವರಿಯಲು ಸಾಧ್ಯವಾಗುತ್ತದೆ. ವಾಹನ ವಿಚಾರದಲ್ಲಿ ಎಚ್ಚರ ಅಗತ್ಯ. ಆಸ್ತಿ ಖರೀದಿಗೆ ಕೈ ಹಾಕಬಹುದು. ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ.