Daily Horoscope: ಮಿಥುನ ರಾಶಿಗಿಂದು ಧನವ್ಯಯ, ನಿಮ್ಮ ರಾಶಿಫಲ ಏನಿದೆ ನೋಡಿ..

26 ಡಿಸೆಂಬರ್ 2021, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಸಮಸ್ಯೆ ಬಗೆಹರಿಯಲು ವೃಷಭ ರಾಶಿಯವರೇ ಮುಂದಡಿ ಇಡಬೇಕು..

Daily horoscope of December 26th 2021 in Kannada SKR

ಮೇಷ(Aries): ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಎಚ್ಚರಿಕೆ ಅಗತ್ಯ. ಏನೇ ಗೊಂದಲಗಳಿದ್ದರೆ ಕೇಳಿ ಪರಿಹರಿಸಿಕೊಳ್ಳಿ. ವಾಗ್ವಾದಕ್ಕಿಳಿಯಬೇಡಿ. ಮನೆ ಹಿರಿಯರ ಸಹಕಾರ ಸಿಗಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಆದಿತ್ಯ ಹೃದಯ ಪಠಿಸಿ.

ವೃಷಭ(Taurus): ಕೌಟುಂಬಿಕ ಜೀವನದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿಯಲಿದೆ. ಸಂಗಾತಿಯ ಜೊತೆ ರಾಜಿಯಾಗಲು ನೀವೇ ಮುಂದೆ ಹೆಜ್ಜೆ ಇಡಬೇಕು. ಅವರ ಸಮಸ್ಯೆಗಳನ್ನು ಆಲಿಸಿ, ಮಧ್ಯೆ ವಾದಿಸುವುದು ಬಿಟ್ಟು ಪರಿಹಾರದತ್ತ ದೃಷ್ಟಿ ಹಾಯಿಸಿ. ಉದ್ಯೋಗದಲ್ಲಿ ಏರುಪೇರಿಲ್ಲ. ಗಣಪತಿಯ ಸ್ಮರಣೆ ಮಾಡಿ. 

ಮಿಥುನ(Gemini): ವ್ಯಾಪಾರ, ವ್ಯವಹಾರ, ಉದ್ಯೋಗಗಳಲ್ಲಿ ಮಿಶ್ರ ಫಲ. ಹೊರಗಿನ ಸುತ್ತಾಟ ತ್ರಾಸದಾಯಕ ಎನಿಸುವುದು. ವಿಪರೀತ ಧನ ವ್ಯಯದಿಂದ ಕಂಗಾಲಾಗುವಿರಿ. ಹಿಂದಿನ ಹರಕೆಗಳು ಬಾಕಿಯಿದ್ದರೆ ತೀರಿಸುವತ್ತ ಗಮನ ಹರಿಸಿ. ಆರೋಗ್ಯದ ಕಿರಿಕಿರಿ ತಪ್ಪದು. ಸೂರ್ಯನಿಗೆ ಅರ್ಘ್ಯ ನೀಡಿ. 

ಕಟಕ(Cancer): ಬಹಳ ದಿನಗಳಿಂದ ಮುಂದೂಡಿಕೊಂಡ ಗೃಹಕೃತ್ಯಗಳೆಲ್ಲ ಮುಗಿಸಿ ನಿರಾಳವಾಗುವಿರಿ. ವಿವಾಹಿತರಿಗೆ ದಿನ ಸಂತಸ ತರುವುದು. ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ. ಸ್ನೇಹಿತರ ಕಡೆಯಿಂದ ಸಂತಸದ ಸುದ್ದಿ ಕೇಳಿಬರುವುದು. ವಿಷ್ಣು ಸಹಸ್ರನಾಮ ಶ್ರವಣ ಮಾಡಿ. 

ಈ ರಾಶಿಯ ಹುಡುಗರು good husband ಎನಿಸಿಕೊಳ್ಳಲಿದ್ದಾರೆ, ನಿಮ್ಮ ಪಾರ್ಟ್ನರ್‌ ಈ ರಾಶಿಯವರಾ ನೋಡಿ..

ಸಿಂಹ(Leo): ಆಸ್ತಿ ಖರೀದಿ ಮಾತುಕತೆಗೆ ಶುಭ ದಿನ. ಈ ಸಂಬಂಧ ಕೆಲಸಗಳನ್ನು ಮಾಡಲಿರುವಿರಿ. ಮನೆ ಸದಸ್ಯರ ಸಮಸ್ಯೆಗಳನ್ನೆಲ್ಲ ನಿಮ್ಮ ಮೈ ಮೇಲೆ ಅತಿಯಾಗಿ ಎಳೆದುಕೊಳ್ಳಬೇಡಿ. ಅದೇನೆಂದು ಆಲಿಸಿ ಪರಿಹಾರ ಯೋಚಿಸಿ. ಸಂಗಾತಿಗೆ ಹೆಚ್ಚಿನ ಸಮಯ ನೀಡಿ. ಹಸುವಿಗೆ ಹುಲ್ಲು ತಿನ್ನಿಸಿ. 

ಕನ್ಯಾ(Virgo): ತಂದೆಯ ಬೆಂಬಲದಿಂದ ಆಸ್ತಿವ್ಯಾಜ್ಯಗಳು ಮಾತುಕತೆಯಲ್ಲೇ ಇತ್ಯರ್ಥ. ಆಹಾರದಲ್ಲಿ ವ್ಯತ್ಯಯ. ಶುಭ ಕಾರ್ಯವೊಂದರ ಸಲುವಾಗ ಹೆಚ್ಚಿನ ತಿರುಗಾಟ ಮಾಡಬೇಕಾಗಿ ಬರಲಿದೆ. ಹೊಸ ಹಣದ ಮೂಲವನ್ನು ಕಂಡುಕೊಳ್ಳುವಿರಿ. ತಂದೆತಾಯಿಯ ಆಶೀರ್ವಾದ ಬಲ ಪಡೆಯಿರಿ. 

ತುಲಾ(Libra): ವಸ್ತ್ರ, ಒಡವೆ, ಶೃಂಗಾರ ಸಾಮಗ್ರಿ ವ್ಯಾಪಾರಸ್ಥರು, ಹೋಟೆಲ್, ಬೇಕರಿ ಮಾಲೀಕರಿಗೆ ಧನ ಲಾಭ. ಕ್ರೀಡಾಪಟುಗಳಿಗೆ ಶುಭ ದಿನ. ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ಸಂತೋಷ. ನಿರುದ್ಯೋಗಿಗಳು ಸ್ವಂತ ವ್ಯಾಪಾರ ಆರಂಭಿಸಲು ಶುಭ ದಿನ. ಅಗತ್ಯ ಇರುವವರಿಗೆ ಹಣ, ವಸ್ತ್ರ ದಾನ ಮಾಡಿ. 

Purpose of life: ಪುರುಷಾರ್ಥ- ಹಾಗೆಂದರೇನು ಗೊತ್ತಾ?

ವೃಶ್ಚಿಕ(Scorpio): ಚರ್ಮ ಸಂಬಂಧಿ ಸಮಸ್ಯೆಗಳು ಕಂಗಾಲಾಗಿಸುವುವು. ವ್ಯವಹಾರಗಳಲ್ಲಿ ಲಾಭ. ವಸ್ತ್ರ, ಒಡವೆಗಾಗಿ ಧನವ್ಯಯ. ಮಾನಸಿಕ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಉನ್ನತ ಪರೀಕ್ಷೆಗಳನ್ನು ಬರೆದವರಿಗೆ ಉತ್ತಮ ಫಲಿತಾಂಶ. ಆದಿತ್ಯ ಹೃದಯ ಪಠಿಸಿ. 

ಧನುಸ್ಸು(Sagittarius): ಕಚೇರಿಯ ಕೆಲಸಗಳನ್ನು ಮನೆಗೆ ತಂದು ರಂಪ ಮಾಡಿಕೊಳ್ಳಬೇಡಿ. ಮನೆಯಲ್ಲಿ ಮಾನಸಿಕವಾಗಿಯೂ ಮನೆಯವರ ಜೊತೆಯೇ ಇರಲು ಪ್ರಯತ್ನಿಸಿ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಒಳ್ಳೆ ನಿರ್ಧಾರ ತೆಗೆದುಕೊಳ್ಳುವರು. ಶಿವ ಶಕ್ತಿಯರ ಸ್ಮರಣೆ ಮಾಡಿ. 

ಮಕರ(Capricorn): ಮಕ್ಕಳ ಪ್ರತಿಭೆಯನ್ನ ಪ್ರೋತ್ಸಾಹಿಸಿ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ. ಸಂಬಂಧಗಳ ಮಧ್ಯೆ ಏರ್ಪಟ್ಟಿರುವ ಅಂತರ ಕಡಿಮೆಯಾಗಿ ಸಮಾಧಾನವಾಗುವುದು. ನಿದ್ರೆಯ ಕೊರತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗದಂತೆ ಎಚ್ಚರ ವಹಿಸಿ. ಶಾರದಾಂಬೆಯ ಪ್ರಾರ್ಥನೆ ಮಾಡಿ. 

ಕುಂಭ(Aquarius): ಮನೆ ಸದಸ್ಯರ ಜೊತೆ ಸಣ್ಣಪುಟ್ಟ ಕಿರಿಕಿರಿಗಳು ಮುಂದುವರಿಯಲಿವೆ. ಆ ಕಡೆ ಗಮನ ಹರಿಸದೆ ನಿಮ್ಮ ಉದ್ಯೋಗ, ವ್ಯಕ್ತಿತ್ವ ವಿಕಸನದ ಕಡೆ ಹೆಚ್ಚಿನ ಯೋಚನೆ ಹರಿಸಿ. ಸಂಗಾತಿಯ ಸಹಕಾರ. ಆಸ್ತಿ ಖರೀದಿ ಯೋಗ, ಲಕ್ಷ್ಮೀ ವೆಂಕಟರಮಣ ಸ್ಮರಣೆ ಮಾಡಿ. 

ಮೀನ(Pisces): ಆರೋಗ್ಯ ಸಮಸ್ಯೆಯಿಂದ ಪಾರು, ಮನೆಯಲ್ಲಿ ಹರ್ಷ, ಮನರಂಜನೆಗಾಗಿ ಧನ ವ್ಯಯ, ಮಕ್ಕಳ ಕಡೆಯಿಂದ ಸಿಹಿ ಸುದ್ದಿ. ದೇವತಾರಾಧನೆಗಳಲ್ಲಿ ತೊಡಗಿಸಿಕೊಳ್ಳುವಿರಿ. ನೆಂಟರಿಷ್ಟರ ಜೊತೆ ಮಾತುಕತೆಯಿಂದ ಸಂತಸ. ಕೃಷ್ಣನಿಗೆ ತುಳಸಿ ಅರ್ಪಿಸಿ.
 

Latest Videos
Follow Us:
Download App:
  • android
  • ios