Asianet Suvarna News Asianet Suvarna News

Daily Horoscope: ಹಿರಿಯರ ಹಾದಿಯೇ ಕನ್ಯಾ ರಾಶಿಗಿಂದು ದಾರಿದೀಪ

13 ಡಿಸೆಂಬರ್ 2021, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಆಸ್ತಿ ವಿಚಾರಗಳಿಂದ ತುಲಾ ದೂರ ಉಳಿಯುವುದೇ ಕ್ಷೇಮ, ಮಕರಕ್ಕಿಂದು ಒಳ್ಳೆಯ ಯೋಗಕ್ಷೇಮ

Daily horoscope of December 13th 2021 in Kannada SKR
Author
Bangalore, First Published Dec 13, 2021, 5:05 AM IST
  • Facebook
  • Twitter
  • Whatsapp

ಮೇಷ(Aries): ದೇಹಬಲ ಕುಗ್ಗುತ್ತದೆ, ಬುದ್ಧಿ ಮಂದವಾಗುತ್ತದೆ. ಉದಾಸೀನವಾಗಿ ದಿನ ಕಳೆಯುವಿರಿ. ಶ್ರಮಿಕರಿಗೆ ಲಾಭ. ಕುಟುಂಬ ಜೀವನದಲ್ಲಿ ಸಾಮರಸ್ಯ ಕೊರತೆಗಳು ಕಾಣಿಸಿಕೊಳ್ಳಬಹುದು. ಸಂಗಾತಿಯ ಮನೋಭಿಲಾಶೆ ಏನೆಂದು ಆಲಿಸಿ. ನಿಮ್ಮ ಬದುಕಿನ ಗುರುಗಳನ್ನು ನೆನೆಸಿಕೊಳ್ಳಿ. 

ವೃಷಭ(Taurus): ಸ್ತ್ರೀಯರಿಗೆ ಹೆಚ್ಚಲಿರುವ ಬಲ, ಯುವಕರಿಗೆ ವಿದೇಶದಿಂದ ಸುವಾರ್ತೆ ಕೇಳಿ ಬರಲಿದೆ. ವಿವಾಹ ಕೆಲಸಗಳು ಸರಾಗಿವಾಗಿ ಸಾಗಲಿವೆ. ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗಲಿದೆ. ದೈವಾನುಕೂಲ ಇರಲಿದೆ. ಹಿರಿಯರ ಅನುಗ್ರಹವಾಗಲಿದೆ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.

ಮಿಥುನ(Gemini): ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಬೆಂಬಲ, ಹಿರಿಯರಿಂದ ಪ್ರಶಂಸೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭದ ದಿನ. ಶತ್ರುಗಳು ನಿಮ್ಮಿಂದ ದೂರಾಗಿ ಮನಸ್ಸಿಗೆ ಸಮಾಧಾನ. ಆರೋಗ್ಯ ಕಿರಿಕಿರಿ ಕಾಣಿಸಿಕೊಳ್ಳಬಹುದು. ಧನ್ವಂತರಿ ಸ್ಮರಣೆ ಮಾಡಿ. 

Weekly Horoscope: ಸಿಂಹ ರಾಶಿಗೆ ಪ್ರೇಮ ಸಾಫಲ್ಯ, ಉಳಿದ ರಾಶಿಗಳ ಭವಿಷ್ಯವೇನು?

ಕಟಕ(Cancer): ಆಧ್ಯಾತ್ಮ ಹಾದಿಯಲ್ಲಿರುವವರಿಗೆ ಮನಸ್ಸಿನ ಕಸಿವಿಸಿಗಳೆಲ್ಲ ಕಳೆವುವು. ದೇವತಾ ಕಾರ್ಯಗಳಿಗೆ ದೈವಾನುಕೂಲ ಒದಗಿ ಬಂದು ಎಲ್ಲ ಸುಸೂತ್ರದಲ್ಲಿ ಸಾಗುವುದು. ಏಕಾಗ್ರತೆ ಇರಲಿದ್ದು, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಅನುಕೂಲ ಕಾಣಿಸುವುದು. ಸಂಗಾತಿಯಿಂದ ಸಮಾಧಾನ, ಮನೆ ದೇವರ ಪ್ರಾರ್ಥನೆ ಮಾಡಿ.

ಸಿಂಹ(Leo): ಶುಭ ಕಾರ್ಯಗಳ ಸಂಬಂಧ ಅಧಿಕ ಖರ್ಚು ಮಾಡುವಿರಿ. ವಾಹನಗಳಲ್ಲಿ ಹೋಗುವಾಗ ಹೆಚ್ಚಿನ ಜಾಗ್ರತೆ ವಹಿಸಿ. ಕುಟುಂಬಸ್ಥರು ಹಾಗೂ ಸ್ನೇಹಿತರ ಸಹಕಾರದಿಂದ ಕಾರ್ಯಗಳು ಸುಗಮ. ಉದ್ಯೋಗಿಗಳಿಗೆ ಏಕಾಗ್ರತೆ ಭಂಗವಾಗುತ್ತದೆ. ಈಶ್ವರ ಪ್ರಾರ್ಥನೆ ಮಾಡಿ.

ಕನ್ಯಾ(Virgo): ಯಾವುದೇ ಕಷ್ಟ ಎದುರಿಸುತ್ತಿದ್ದರೆ ಅದನ್ನು ನಿಮ್ಮ ಹಿರಿಯರು ಹೇಗೆ ಎದುರಿಸಿದ್ದರು ಎಂದು ಯೋಚಿಸಿ ಪಾಠವಾಗಿ ಪರಿಗಣಿಸಿ ಮುಂದುವರಿಯಿರಿ. ಸಂಗಾತಿಯ ಸಹಕಾರದಿಂದ ಸಾಲ ಮರುಪಾವತಿ. ವೃತ್ತಿಯಲ್ಲಿ ಬಲ, ವ್ಯಾಪಾರಿಗಳಿಗೆ ಲಾಭ. ಸುಬ್ರಹ್ಮಣ್ಯನ ಸ್ಮರಣೆಯಿಂದ ನೆಮ್ಮದಿ.

Lord Kubera: ದುಷ್ಟ ರಾಕ್ಷಸ ಕುಬೇರ ದೇವರಾದದ್ದು ಹೇಗೆ?

ತುಲಾ(Libra): ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರಿಗಳಿಗೆ ಅತಂತ್ರ ಸ್ಥಿತಿ, ಕೋರ್ಟ್ ವ್ಯಾಜ್ಯಗಳಲ್ಲಿ ಹಿನ್ನಡೆಯಾಗಿ ಅಸಮಾಧಾನ. ವಿದೇಶ ಪ್ರಯಾಣದಲ್ಲಿ ವಿಳಂಬ ಸಾಧ್ಯತೆ. ಆಸ್ತಿ ವಿಚಾರಗಳನ್ನು ಇಂದು ಕೈಗೆತ್ತಿಕೊಳ್ಳಬೇಡಿ. ಶಿವ ಸಹಸ್ರನಾಮ ಪಠಿಸಿ. 

ವೃಶ್ಚಿಕ(Scorpio): ಈ ಅವಧಿಯಲ್ಲಿ, ನೀವು ಕೌಟುಂಬಿಕ ಸೌಕರ್ಯಗಳ ವಿಷಯಗಳಿಗೆ ಸ್ವಲ್ಪ ಹಣವನ್ನು ಖರ್ಚು ಮಾಡಬಹುದು. ದೈವಾನುಕೂಲ ಇರಲಿದೆ, ವಾಗ್ಬಲ ಇರಲಿದ್ದು ಮಾತನ್ನೇ ಅಸ್ತ್ರವಾಗಿ ಬಳಸುವ ವಕೀಲರು, ವ್ಯಾಪಾರಿಗಳು, ಮನರಂಜನೆ ರಂಗದಲ್ಲಿರುವವರಿಗೆ ಶುಭ ದಿನ. ವಿಷ್ಣು ಸಹಸ್ರನಾಮ ಹೇಳಿ. 

ಧನುಸ್ಸು(Sagittarius): ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಅವಿವಾಹಿತರಿಗೆ ಅಚ್ಚರಿಯ ವಾರ್ತೆ. ನಿರುದ್ಯೋಗಿಗಳಿಗೆ ಅವಕಾಶದ ಮೇಲೆ ಅವಕಾಶಗಳು ಬಂದು ಆಯ್ಕೆಯಲ್ಲಿ ಗೊಂದಲ ಮೂಡಿಸುತ್ತವೆ. ಆದಷ್ಟು ಎಚ್ಚರದಿಂದ ಲಾಭನಷ್ಟ ಅಳೆದು ತೂಗಿ ಸರಿಯಾದುದನ್ನು ಆಯ್ದುಕೊಳ್ಳಿ. ಲಲಿತಾ ಸಹಸ್ರನಾಮ ಹೇಳಿಕೊಳ್ಳಿ.

ಮಕರ(Capricorn): ಸಹೋದರರ ಸಹಕಾರ, ಸ್ನೇಹಿತರ ಸಹಾಯದಿಂದ ಕೆಲಸಗಳು ಸುಗಮ. ಪ್ರಯಾಣದಿಂದ ಲಾಭ. ಅಗ್ನಿ ಸಂಬಂಧಿ ವಿಷಯಗಳಲ್ಲಿ ಜಾಗೃತರಾಗಿರಿ. ಬಹುಕಾಲದ ಆರೋಗ್ಯ ಸಮಸ್ಯೆ ಇದ್ದರೆ ಸ್ವಲ್ಪ ಸುಧಾರಣೆ ಕಂಡು ಬರುವುದು. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಕುಂಭ(Aquarius): ಈ ದಿನ ಮಕ್ಕಳ ಅನಾರೋಗ್ಯದಿಂದಾಗಿ ಮನಸ್ಸಿಗೆ ಕಸಿವಿಸಿಯಾಗಬಹುದು. ಮನೆ ಕೆಲಸದವರ ಧೋರಣೆಯಿಂದ ಬೇಸರ, ಸಹೋದರರಲ್ಲಿ ಅಸಮಾಧಾನ. ಹೂಡಿಕೆಯಲ್ಲಿ ನಷ್ಟಫಲ. ಉದ್ಯೋಗದಲ್ಲಿ ಸಾಮಾನ್ಯ ದಿನ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಬಡಮಕ್ಕಳಿಗೆ ಆಹಾರ ವಸ್ತ್ರ ದಾನ ಮಾಡಿ. 

ಮೀನ(Pisces): ನಿಮ್ಮ ಬಜೆಟ್‌ನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಆರೋಗ್ಯದಲ್ಲಿ ಚೇತರಿಕೆ. ಬುದ್ಧಿಯಿಂದ ಕಾರ್ಯ ಸಾಧನೆ. ಮಕ್ಕಳ ಸಹಕಾರ, ಆಹಾರದಲ್ಲಿ ವ್ಯತ್ಯಾಸ, ವೃತ್ತಿಯಲ್ಲಿ ಅನುಕೂಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ. 
 

Follow Us:
Download App:
  • android
  • ios