ಮೇಷ - ಅದೃಷ್ಟದ ದಿನ, ಅಧಿಕಾರ ಸಿಗುವ ದಿನ, ಎಲ್ಲವೂ ಅನುಕೂಲವಾಗಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಸ್ವಯಾರ್ಜನೆಯಿಂದ ಸಮಾಧಾನ, ಸಣ್ಣ-ಪುಟ್ಟ ಕಿರಿಕಿರಿ, ಉಳಿದಂತೆ ಅನುಕೂಲವಾಗಿದೆ, ದುರ್ಗಾ ಪ್ರಾರ್ಥನೆ ಮಾಡಿ

ಮಿಥುನ - ಸಹೋದರರಿಂದ ಸಹಕಾರ, ಶತ್ರುಗಳ ಕಾಟ, ಸಾಲ ಬಾಧೆ, ಕೃಷ್ಣ ಪ್ರಾರ್ಥನೆ ಮಾಡಿ

ಕಟಕ - ಕೆಲಸದಲ್ಲಿ ವ್ಯತ್ಯಾಸ, ವೃತ್ತಿಪರರಿಗೆ ಅನುಕೂಲದ ದಿನ, ಹಣಕಾಸಿನ ಸಮೃದ್ಧಿ ಇರಲಿದೆ, ಚಂದ್ರ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

 

ಸಿಂಹ - ಸಹೋದರರೊಂದಿಗೆ ಎಚ್ಚರಿಕೆ ಇರಲಿ, ಹುಂಬತನ ಬೇಡ, ಸ್ತ್ರೀಯರಿಂದ ದೂರವಿರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಕನ್ಯಾ - ಸ್ತ್ರೀಯರು ಹಣಕಾಸು, ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಬೇಕು, ಸ್ನೇಹಿತರಲ್ಲಿ ವಿರೋಧ ಬರುವ ಸಾಧ್ಯತೆ ಇರಲಿದೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಧೈರ್ಯವಿರಲಿದೆ, ದೇಹದ ಕಡೆ ಗಮನವಹಿಸಿ, ದುರ್ಗಾ ಕವಚ ಪಠಿಸಿ

ವೃಶ್ಚಿಕ - ಧನ ಸಮೃದ್ಧಿ, ಅದೃಷ್ಟ ಕೊಂಚ ಕ್ಷೀಣವಾಗಲಿದೆ, ಹೆಚ್ಚು ಶ್ರಮನ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

 

ಸೆಲೆಬ್ರಿಟಿಗಳೇಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಮಾಡಿಸ್ತಾರೆ?

ಧನುಸ್ಸು - ಮಾನಸಿಕವಾಗಿ ಕುಗ್ಗುವಿಕೆ, ಹೃದಯ ಸಂಬಂಧಿ ಕಾಯಿಲೆಗಳು ಬಾಧಿಸಲಿವೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು, ಎಚ್ಚರವಿರಲಿ, ನವಗ್ರಹ ಸ್ತೋತ್ರ ಮಾಡಿ

ಮಕರ - ಅಧೈರ್ಯ, ಅಂಜಿಕೆ ಉಂಟಾಗಲಿದೆ, ಸುಖಕ್ಕೆ ಕತ್ತರಿ ಬೀಳಲಿದೆ, ಸಮಾಧಾನ ಸಿದ್ಧಿಗೆ ದುರ್ಗಾ ಪ್ರಾರ್ಥನೆ ಮಾಡಿ

ಕುಂಭ - ಆಹಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ, ನೀರಿನಿಂದ ಆರೋಗ್ಯ ಹಾಳಾಗಲಿದೆ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಸಂಜೀವಿನಿ ಯಂತ್ರ ಧಾರಣೆ ಮಾಡಿ

ಮೀನ - ತುಂಬ ಎಚ್ಚರಿಕೆಯಿಂದ ಇರಬೇಕಾದ ದಿನ, ತಂದೆ-ಮಕ್ಕಳಲ್ಲಿ ವೈಮನಸ್ಸು ಮೂಡಲಿದೆ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ