ಮೇಷ: ನಿಮ್ಮ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬೇಕು. ಹಿರಿಯರ ಮಾತಿಗೆ ವಿರುದ್ಧವಾಗಿ ಹೋದರೆ ಕಷ್ಟವಾಗಬಹುದು.

ವೃಷಭ: ಇಂದು ನಿಮಗೆ ಗುರು ಬಲ ಚೆನ್ನಾಗಿದೆ. ಗಣೇಶನ ಆರಾಧನೆ ಮಾಡಿ. ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡರೆ ಯಶಸ್ಸು ಸಾಧ್ಯ.

ಮಿಥುನ: ನಾಳೆಯನ್ನು ನೆನೆಯುತ್ತಾ ಈ ದಿನವನ್ನು ಹಾಳು ಮಾಡಿಕೊಳ್ಳಬೇಡಿ. ಬಹುದಿನಗಳ ಗೊಂದಲಕ್ಕೆ ಇಂದು ತೆರೆ ಬೀಳಲಿದೆ.

ಕಟಕ: ನಿಮ್ಮ ಪಾಲಿನ ಜವಾಬ್ಧಾರಿಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ. ಮತ್ತೊಬ್ಬರ  ನಂಬಿಕೆಗೆ ನಿಮ್ಮಿಂದ ಧಕ್ಕೆಯಾಗದಿರಲಿ.

ಚಿಕ್ಕ ವಯಸ್ಸಿನಲ್ಲಿಯೇ ಧನವಂತರಾಗುವ ಅದೃಷ್ಟ ಈ ರಾಶಿಯವರಿಗಿದೆ!

ಸಿಂಹ: ಶ್ರಮಪಟ್ಟು ಕೆಲಸ ಮಾಡುವುದಕ್ಕೆ ಬದಲಾಗಿ ತಾಳ್ಮೆಯಿಂದ, ಬುದ್ಧಿವಂತಿಕೆಯಿಂದ ಕೆಲಸ ಮಾಡಿ. ಅಂದುಕೊಂಡದ್ದು ನೆರವೇರಲಿದೆ.

ಕನ್ಯಾ: ಗೆಲುವು ಬೇಕು ಎಂದು ಕನಸು ಕಂಡರೆ ಅದು ಸಿಕ್ಕುವುದಿಲ್ಲ. ಅದಕ್ಕೆ ತಕ್ಕುದಾದ ಶ್ರಮವನ್ನು ಹಾಕಿದರೆ ಮಾತ್ರ ಜಯಶಾಲಿಯಾಗುವಿರಿ

ತುಲಾ: ನಿಮ್ಮ ಕೈಲಿ ಆಗದ ಕೆಲಸಗಳನ್ನು ಒಪ್ಪಿಕೊಂಡು ನರಳುವುದು ಬೇಡ. ಅತಿಯಾದ ಉತ್ಸಾಹವೂ ಒಮ್ಮೊಮ್ಮೆ ಕೈ ಕೊಡುವ ಸಾಧ್ಯತೆ ಇರುತ್ತದೆ.

ವೃಶ್ಚಿಕ: ಕಾರಣವಿಲ್ಲದೇ ಕೋಪ ಮಾಡಿಕೊಳ್ಳುವುದು, ಸಣ್ಣ ವಿಚಾರಗಳಿಗೂ ತಲೆ ಕೆಡಿಸಿಕೊಳ್ಳುವುದು ಬೇಡ. ನೆಮ್ಮದಿಯಿಂದ ಮುಂದೆ ಸಾಗಿ.

ಪತಿಯ ಶ್ರೇಯೋಭಿವೃದ್ಧಿಗೆ ಮಾಡುವ ಭೀಮನ ಅಮವಾಸ್ಯೆ ಪೂಜೆ!

ಧನಸ್ಸು: ಸಿಗದ ವಸ್ತುಗಳ ಬಗ್ಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ನಿಮ್ಮ ಪಾಲಿನ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಿ ಮುಗಿಸಿ.

ಮಕರ: ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹರಸಿ ಬರಲಿವೆ. ಆರ್ಥಿಕವಾಗಿ ಒಳ್ಳೆಯ ದಿನವಿದು.

ಕುಂಭ:  ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ. ಆರೋಗ್ಯದಲ್ಲಿ ಸ್ಥಿರತೆ. ಸಣ್ಣ ಸಣ್ಣ ವಿಚಾರಗಳನ್ನು ಕಡೆಗಣನೆ ಮಾಡಬೇಡಿ.

ಮೀನ: ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವುದು ಬೇಡ. ಹೊಸ ವಸ್ತುಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಶುಭ ಫಲ.