ಮೇಷ: ಮನೆಯಲ್ಲಿ ನಿಮ್ಮ ಇಷ್ಟಕ್ಕೆ ತಕ್ಕಂತಹ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಮಕ್ಕಳೊಂದಿಗೆ ಇಡೀ ದಿನ ಕಾಲ ಕಳೆಯಲಿದ್ದೀರಿ. ಸಂತೋಷದ ದಿನ.

ವೃಷಭ: ಹಿಂದೆ ಮಾಡಿದ್ದ ತಪ್ಪಿಗೆ ಇಂದು ಸರಿಯಾದ ಶಿಕ್ಷೆ ಅನುಭವಿಸಲಿದ್ದೀರಿ. ನಿಮ್ಮ ವಿರುದ್ಧ ಇರುವ ವ್ಯಕ್ತಿಯ ಶಕ್ತಿ ತಿಳಿದು ಹೋರಾಡಿ.

ಮಿಥುನ: ಸುಲಭಕ್ಕೆ ಸಿಕ್ಕುವ ಜಯ ಹೆಚ್ಚು ಕಾಲ ನಿಮ್ಮೊಂದಿಗೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ದಿನ. ಸಂತೋಷ ಹೆಚ್ಚಾಗಲಿದೆ.

ಕಟಕ: ಖರ್ಚು ಮತ್ತು ಆದಾಯದಲ್ಲಿ ಸಮ ಪ್ರಮಾಣದ ಏರಿಕೆ ಉಂಟಾಗಲಿದೆ. ಹಾಗಾಗಿ ಆರ್ಥಿಕ ಹೊರೆ ನಿಮ್ಮ ಮೇಲೆ ಬೀಳದು.

ಈ ಸ್ಮಾರ್ಟ್ ಐಡಿಯಾ ಪಾಲಿಸಿ ಮನೆ ಚಿಕ್ಕದೆಂಬ ಚಿಂತೆ ಬಿಡಿ

ಸಿಂಹ: ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಮುಂದೆ ಸಾಗಿ. ದೊಡ್ಡ ಕಾರ್ಯಗಳು ಶುರುವಾಗುವುದು ಸಣ್ಣ ಪ್ರಯತ್ನದಿಂದಲೇ

ಕನ್ಯಾ: ಅವಸರದಲ್ಲಿ ಮಾಡಿದ ಕೆಲಸಗಳು ಪೂರ್ಣ ಫಲವನ್ನು ನೀಡುವುದಿಲ್ಲ. ಕಾಲವೇ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ನೀಡಲಿದೆ.

ತುಲಾ: ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಕಾರ್ಯರಂಗಕ್ಕೆ ಇಳಿಯಿರಿ. ಅನಿವಾರ್ಯತೆಗೆ ಸಿಲುಕಿ ಇಷ್ಟವಿಲ್ಲದ ಕೆಲಸ ಮಾಡಬೇಕಾದೀತು.

ವೃಶ್ಚಿಕ: ಆರೋಗ್ಯದ ವಿಚಾರದಲ್ಲಿ ಹೆಚ್ಚು ನಿಗಾ ವಹಿಸಿ. ತಪ್ಪನ್ನು ಖಂಡಿಸಿ, ತಪ್ಪು ಮಾಡಿದ ವ್ಯಕ್ತಿಯನ್ನಲ್ಲ. ಇಂದು ಸಿಹಿ ಸುದ್ದಿ ಕೇಳಲಿದ್ದೀರಿ.

ಗೋಡೆ ಅಂದ ಹೆಚ್ಚಿಸುವ ಗಡಿಯಾರಕ್ಕೂ ಇದೆ ವಾಸ್ತು ನಂಟು!

ಧನುಸ್ಸು: ಪರರ ಸೇವೆಯಲ್ಲಿ ತೊಡಗಿಕೊಳ್ಳಲಿದ್ದೀರಿ. ಶುಭ ಸಮಾರಂಭಗಳ ಭಾಗವಾಗಿ ನೀವು ಕಾರ್ಯ ನಿರ್ವಹಿಸಲಿದ್ದೀರಿ. ಶುಭ ಫಲ

ಮಕರ - ಆಹಾರ ವ್ಯತ್ಯಾಸ, ಹೊರಗಡೆ ಊಟ ಮಾಡುವುದರಿಂದ ತೊಂದರೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸ್ತ್ರೀಯರಿಂದ ಸಮಾಧಾನ, ಆದಿತ್ಯ ಹೃದಯ ಪಠಿಸಿ

ಕುಂಭ - ಆರೋಗ್ಯದಲ್ಲಿ ಗಂಭೀರ ವ್ಯತ್ಯಾಸ, ಆಹಾರದಲ್ಲಿ ಎಚ್ಚರಿಕೆ ಇರಲಿ, ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಚಂದ್ರ ಪ್ರಾರ್ಥನೆ ಮಾಡಿ

ಮೀನ - ಸಮೃದ್ಧಿಯ ದಿನ, ಮನಸ್ಸಿಗೆ ಅಸಮಧಾನ, ಉತ್ತಮ ಫಲಗಳೂ ಇದ್ದಾವೆ, ಕಾರ್ಯ ಸಿದ್ಧಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ