ಮೇಷ - ಗಂಟಲು ನೋವು, ಕೆಮ್ಮು ಇತ್ಯಾದಿ ಸಣ್ಣಪುಟ್ಟ  ಬಾಧೆ, ಉದ್ಯೋಗದಲ್ಲಿ ಯಶಸ್ಸು, ಸೂರ್ಯನ ಆರಾಧನೆ ಮಾಡಿ

ವೃಷಭ - ಮಾತಿನಲ್ಲಿ ಒರಟುತನ ಬರಲಿದೆ, ಹಣಕಾಸಿನ ವಿಚಾರವಾಗಿ ಕಲಹ, ಪತ್ರಿಕಾ ರಂಗದಲ್ಲಿರುವವರಿಗೆ, ಉಪನ್ಯಾಸಕರಿಗೆ ಕೊಂಚ ತೊಡಕಿನ ದಿನ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

ಮಿಥುನ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಹಣಕಾಸಿನ ವಿಚಾರವಾಗಿ ವೈಮನಸ್ಸು, ಚಂದ್ರ ಪ್ರಾರ್ಥನೆ ಮಾಡಿ

ಕಟಕ - ವ್ಯಾಪಾರಿಗಳು ಎಚ್ಚರದಿಂದ ಇರಬೇಕು, ಎಚ್ಚರದಿಂದ ಇರಬೇಕು, ಮಿಶ್ರಫಲವಿದೆ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಸಿಂಹ - ಮಕ್ಕಳಿಂದ ಉತ್ತಮಫಲ, ವಿದ್ಯಾರ್ಥಿಗಳಿಗೆ ಶುಭಫಲವಿದೆ, ಸೂರ್ಯನ ಆರಾಧನೆ ಮಾಡಿ

ನೀವು ಹುಟ್ಟಿದ ವಾರಕ್ಕೂ ನಿಮ್ಮ ಬದುಕಿಗೂ ಸಂಬಂಧ ಇದ್ಯಾ?

ಕನ್ಯಾ - ತಾಯಿಯ ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಂದ ಮನೆಯಲ್ಲಿ ಘರ್ಷಣೆ, ವಿಷ್ಣು ಸ್ಮರಣೆ ಮಾಡಿ

ತುಲಾ - ಸಹೋದರರಿಂದ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಇದೆ, ಕಣ್ಣು-ಕಿವಿಗಳಿಗೆ ಕೊಂಚ ತೊಂದರೆ, ಗುರುಗಳಿಂದ ಉತ್ತಮ ಮಾರ್ಗದರ್ಶನ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ವೃಶ್ಚಿಕ - ಮಾತು ಒರಟಾಗುತ್ತದೆ, ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕು, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಪ್ರಯಾಣದಲ್ಲಿ ಅನುಕೂಲ, ಸೂರ್ಯ ಪ್ರಾರ್ಥನೆ ಮಾಡಿ

ಬಾಲ್ಕನಿ ಚೆಂದವಿದ್ದರೆ ಮನೆಗೆ ವಿಶೇಷ ಲುಕ್, ಸ್ಪೆಷಲ್ ಚಟ್ ಕೊಡೋದು ಹೇಗೆ?

ಧನುಸ್ಸು - ಹಣಕಾಸಿನ ಸಮಸ್ಯೆ ನಿವಾರಣೆ, ಹಿರಿಯರಿಂದ ರಕ್ಷಣೆ ಹಾಗೂ ಸಹಕಾರ, ಉದ್ಯೋಗದಲ್ಲಿ ಅನುಕೂಲ, ಸ್ತ್ರೀಯರಿಂದ ಸಹಕಾರ, ಗುರು ಸ್ಮರಣೆ ಮಾಡಿ

ಮಕರ - ದಾಂಪತ್ಯದಲ್ಲಿ ಹೊಂದಾಣಿಕೆ ಕಡಿಮೆಯಾಗಲಿದೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕುಂಭ - ಶುಭಫಲವಿದೆ, ಮಕ್ಕಳ ಸಲುವಾಗಿ ಆತಂಕ, ಎಚ್ಚರಿಕೆ ಬೇಕು, ಮಕ್ಕಳಿಂದ ದೂರು ಬರಲಿದೆ, ವಿದ್ಯಾ ಸರಸ್ವತಿ ಪ್ರಾರ್ಥನೆ ಮಾಡಿ

ಮೀನ  - ಶುಭಫಲವಿದೆ, ಪ್ರಯಾಣದಲ್ಲಿ ಕೊಂಚ ಸಮಸ್ಯೆ, ನೀರಿಗೆ ಪರದಾಟ, ಕೃಷಿಕರು ಎಚ್ಚರವಾಗಿರಬೇಕು, ವರುಣ ಪ್ರಾರ್ಥನೆ ಮಾಡಿ