Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಕುಟುಂಬ ಸೌಖ್ಯ, ಧನ ಸಮೃದ್ಧಿ!

11 ಜೂನ್ 2020, ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 11 June 2020 in kannada
Author
Bangalore, First Published Jun 11, 2020, 7:02 AM IST

ಮೇಷ: ನೆಮ್ಮದಿಯ ನಾಳೆಗಳಿಗಾಗಿ ಇಂದಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಿ. ಆರೋಗ್ಯದಲ್ಲಿ ಚೇತರಿಕೆ. ಹೊಸ ವಸ್ತು ಕೊಳ್ಳಲಿದ್ದೀರಿ

ವೃಷಭ: ಜೀವನ ಶೈಲಿಯಲ್ಲಿ ಬದಲಾವಣೆ ಏರ್ಪಡಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಆತ್ಮವಿಶ್ವಾಸ ಅಧಿಕವಾಗಲಿದೆ.

ಮಿಥುನ: ನಿಮ್ಮ ಬಗ್ಗೆ ಬರುವ ಟೀಕೆಗಳಿಗೆ ಉತ್ತರ ನೀಡುತ್ತಾ ಕೂರುವುದು ಬೇಡ. ನಿಮ್ಮ ದಾರಿಯಲ್ಲಿ ನೀವು ಮುಂದೆ ಸಾಗುತ್ತಿರಿ.

ಕಟಕ: ಸೂಕ್ತವಾದ ರೀತಿಯಲ್ಲಿ ಹಾಕಿದ ಶ್ರಮ ಖಂಡಿತ ಫಲ ನೀಡಿಯೇ ನೀಡುತ್ತದೆ. ಸಹೋದರನ ಗೆಲುವಿಗೆ ಸಹಾಯ ಮಾಡುವಿರಿ.

ವಾರ ಭವಿಷ್ಯ: ಈ ರಾಶಿಯವರು ಅಹಂ ಸ್ವಭಾವ ತೊರೆದು ತಲೆಬಾಗುವುದನ್ನು ಕಲಿತರೆ ಒಳಿತು!

ಸಿಂಹ: ಬಾಲ್ಯದ ಗೆಳೆಯನ ಅನಿರೀಕ್ಷಿತ ಭೇಟಿಯಾಗಲಿದೆ. ನಿಮ್ಮ ಆಪ್ತರಿಂದಲೇ ನಿಮಗೆ ಮೋಸವಾಗಲಿದೆ. ನಿರಂತರ ಪರಿಶ್ರಮ ಇರಲಿ.

ಕನ್ಯಾ: ಮಾಡುವ ಕೆಲಸವನ್ನೇ ಮನಸಾರೆ ಮಾಡಿ. ಮತ್ತೊಬ್ಬರ ಮೇಲೆ ಅವಲಂಬಿತವಾಗುವುದು ಬೇಡ. ಇಡೀ ದಿನ ಹೆಚ್ಚು ಒತ್ತಡ ಇರಲಿದೆ.

ತುಲಾ: ಸಂಬಂಧಗಳಲ್ಲಿ ಮನಸ್ತಾಪ ಉಂಟಾಗಲಿದೆ. ದೇವಸ್ಥಾನಕ್ಕೆ ಭೇಟಿ ನೀಡುವವರಿದ್ದೀರಿ. ಸಮಯಕ್ಕೆ ಹೆಚ್ಚಿನ ಮಾನ್ಯತೆ ನೀಡಿ.

ವೃಶ್ಚಿಕ: ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಕಾರಾತ್ಮಕ ಆಲೋಚನೆಗಳನ್ನು ಇಟ್ಟುಕೊಂಡು ಮುಂದೆ ಸಾಗುತ್ತಿರಿ. ಧೈರ್ಯವೇ ನಿಮ್ಮ ಶಕ್ತಿಯಾಗಲಿದೆ.

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

ಧನುಸ್ಸು: ಮನೆಯಲ್ಲಿ ಸಮಾಧಾನ, ಸಮಸ್ಯೆಗಳೂ ಇದ್ದಾವೆ, ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ

ಮಕರ - ದಾಂಪತ್ಯದಲ್ಲಿ ಒಡಕು, ವ್ಯಾಪಾರದಲ್ಲಿ, ಮಿತ್ರರಲ್ಲಿ ಅಸಮಧಾನ, ಕೃಷ್ಣ ಪ್ರಾರ್ಥನೆ ಮಾಡಿ

ಕುಂಭ: ಕುಟುಂಬ ಸೌಖ್ಯ, ಧನ ಸಮೃದ್ಧಿ, ಕುಲದೇವತೆಗೆ ತುಪ್ಪದ ದೀಪ ಹಚ್ಚಿ

ಸಿಂಹ: ಸಂಗೀತಗಾರರಿಗೆ ಶುಭ, ಆತ್ಮಶಕ್ತಿ ವೃದ್ಧಿ, ನವಗ್ರಹಗಳ ಉಪಾಸನೆ ಮಾಡಿ, ನವಧಾನ್ಯ ದಾನ ಮಾಡಿ

Follow Us:
Download App:
  • android
  • ios