ಮೇಷ - ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಮಾತನಾಡುವಾಗ ಎಚ್ಚರಿಕೆ ಬೇಕು, ಉದ್ಯೋಗದಲ್ಲಿ ಭದ್ರತೆ ಇದೆ, ನೀಳಾ ಸರಸ್ವತಿ ಪ್ರಾರ್ಥನೆ ಮಾಡಿ

ವೃಷಭ - ಆರೋಗ್ಯದಲ್ಲಿ ವ್ಯತ್ಯಾಸ, ಹಣದ ವಿಚಾರದಲ್ಲಿ ಎಚ್ಚರಿಕೆ ಇರಲಿ, ಶಾಂತಿ ಮಂತ್ರ ಪಠಿಸಿ

ಮಿಥುನ - ಆರೋಗ್ಯ ಬಾಧಿಸಲಿದೆ, ದಾಂಪತ್ಯ-ಮಿತ್ರರಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಸಂಜೀವಿನಿ ಯಂತ್ರ ಧಾರಣೆ ಮಾಡಿ

ಕಟಕ - ಸ್ತ್ರೀಯರ ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಆಹಾರ ಕ್ರಮದಲ್ಲಿ ವ್ಯತ್ಯಾಸ, ಸ್ತ್ರೀ-ಪುರುಷರು ವ್ಯವಹರಿಸುವಾಗ ಎಚ್ಚರವಾಗಿರಬೇಕು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಸಿಂಹ - ಉದ್ಯೋಗಕ್ಕೆ ಹೋಗುವಾಗ ಎಚ್ಚರವಿರಲಿ, ವ್ಯಾಪಾರದಲ್ಲಿ ಜಾಗ್ರತೆ ಬೇಕು, ಹೊಟ್ಟೆ ಭಾಗದ ಕಿರಿಕಿರಿ ನಿವಾರಣೆಯಾಗುತ್ತದೆ, ವ್ಯಾಪಾರ ವೃದ್ಧಿಯಂತ್ರವನ್ನಿಟ್ಟು ಪೂಜಿಸಿ

ಕನ್ಯಾ - ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಲಿದೆ, ಹಿರಿಯರ ಮಾರ್ಗ ದರ್ಶನ ಪಡೆಯಿರಿ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಉದ್ಯೋಗಿಗಳು ಎಚ್ಚರವಾಗಿರಬೇಕು, ಸಮಾಧಾನದ ದಿನ, ಮಧ್ಯಾಹ್ನಾನಂತರ ಅನುಕೂಲವಾಗಲಿದೆ, ಕುಲದೇವತಾರಾಧನೆ ಮಾಡಿ

ವೃಶ್ಚಿಕ - ಆರೋಗ್ಯದ ಕಡೆ ಗಮನವಹಿಸಿ, ಮನೆ ಊಟ ಮಾಡುವುದು ಒಳಿತು, ಕಾರ್ಯ ಸಾಧನೆ, ವಾಗೀಶ್ವರಿ ಸ್ಮರಣೆ ಮಾಡಿ

ಧನುಸ್ಸು - ದಾಂಪತ್ಯದಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕುಂಟಾಗುವ ಸಾಧ್ಯತೆ ಇದೆ, ಹಿರಿಯರ ಸಹಕಾರ, ಮಾತಿನಲ್ಲಿ ಹಿಡಿತಬೇಕು, ಮನೆ ದೇವರ ಪ್ರಾರ್ಥನೆ ಮಾಡಿ

ಮಕರ ಮಾತಿನ ಸಮೃದ್ಧಿ, ಪ್ರಯಾಣ ಸುಖಕರವಾಗಿರಲಿ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಅನ್ನಪೂರ್ಣೇಶ್ವರಿ ಸ್ತೋತ್ರ ಪಠಿಸಿ

ಕುಂಭ - ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು, ಉದ್ಯೋಗಿಗಳಿಗೆ ಶುಭಫಲವಿದೆ, ಮೇಧಾ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ

ಮೀನ - ಪ್ರಯಾಣದಲ್ಲಿ ತೊಡಕು, ವಿಷ ಜಂತುಗಳಿಂದ ಎಚ್ಚರಿಕೆ ಇರಲಿ, ಕೃಷಿಕರು ಎಚ್ಚರವಾಗಿರಿ, ಗ್ರಾಮದೇವತಾ ಪೂಜೆ ಮಾಡಿ