ಮೇಷ - ಸ್ತ್ರೀಯರಿಗಾಗಿ ಹಣವ್ಯಯ, ಸ್ತ್ರೀಯರೊಂದಿಗೆ ಮಾತನಾಡುವಾಗ ಎಚ್ಚರಿಕೆ ಬೇಕು, ಮೌನವಾಗಿರುವುದು ಉತ್ತಮ, ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ - ದೇಹಸ್ಥಿತಿ ಅಸ್ತವ್ಯಸ್ತ, ಆಯಾಸವಾಗಲಿದೆ, ಗೊಂದಲದ ವಾತಾವರಣ, ಮಾನಸಿಕ ವೇದನೆ, ದುರ್ಗಾ ಪ್ರಾರ್ಥನೆ, ಕೃಷ್ಣ ಪ್ರಾರ್ಥನೆ ಮಾಡಿ

ಮಿಥುನ - ಹಣ ಕಳೆದುಕೊಳ್ಳುವ ಸಾಧ್ಯತೆ, ಕುಟುಂಬದವರಿಂದ ದೂರವಿರುವ ಸಾಧ್ಯತೆ ಇದೆ, ಪಿತೃದೇವತೆಗಳ ಸ್ಮರಣೆ ಮಾಡಿ

ಕಟಕ - ಶುಭಫಲ, ಸ್ವಲ್ಪ ಮಟ್ಟಿಗೆ ತೊಡಕುಗಳೂ ಇದ್ದಾವೆ, ಘರ್ಷಣೆ, ವ್ಯಾಪಾರಿಗಳಿಗೆ ನಷ್ಟ ಸಂಭವ, ರವಿ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಜಾತಕದ ಯಾವ ಮನೆಯಲ್ಲಿ ಯಾವ ಗ್ರಹವಿದ್ದರೆ ರಾಜಯೋಗ ಒಲಿಯುತ್ತೆ?

ಸಿಂಹ - ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆ ಇರಲಿ, ಭಯದ ವಾತಾವರಣ, ಸ್ತ್ರೀಯರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ, ಚಂದ್ರ ಪ್ರಾರ್ಥನೆ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕನ್ಯಾ - ಧರ್ಮಕಾರ್ಯಗಳಲ್ಲಿ ಭಾಗಿ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಅದೃಷ್ಟ ಹೀನತೆ, ದುರ್ಗಾ ಪ್ರಾರ್ಥನೆ ಹಾಗೂ ನಾರಾಯಣ ಸ್ಮರಣೆ ಮಾಡಿ

ತುಲಾ - ಆರೋಗ್ಯದಲ್ಲಿ ವ್ಯತ್ಯಾಸ, ವಸ್ತು ನಷ್ಟ, ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಆಪ್ತ ಮಿತ್ರರು ದೂರಾಗುವ ಸಾಧ್ಯತೆ, ಬಾಂದವ್ಯದಲ್ಲಿ ಒಡಕು, ಸಂಗಾತಿಯಿಂದ ದೂರಾಗುವ ಸಾಧ್ಯತೆ, ದುರ್ಗಾ ದೇವಸ್ಥಾನಕ್ಕೆ ತುಪ್ಪದ ದೀಪ ಹಚ್ಚಿ

ಧನುಸ್ಸು - ಶತ್ರುಗಳ ಭಯ, ರೋಗ ಭಯ, ಸಾಲ ಬಾಧೆ ಕಾಡಲಿದೆ, ಆತಂಕದ ದಿನವಾಗಿರಲಿದೆ, ದುರ್ಗಾ ದೇವಿಗೆ ಕ್ಷೀರಾಭಿಷೇಕ ಮಾಡಿಸಿ

ಬಯಸೋ ಫಲ ಸಿಗೋಕೆ ನೀವು ಯಾವ ದೇವರನ್ನು ಪೂಜಿಸಬೇಕು?

ಮಕರ - ಸಂಗಾತಿಯಿಂದ ಧನಲಾಭ, ಹಣದಿಂದಾಗಿ ಸಂಗಾತಿಯರಲ್ಲಿ ಭಿನ್ನಾಭಿಪ್ರಾಯ, ಅತ್ತೆ - ಸೆಸೆ ನಡುವೆ ಭಿನ್ನಾಭಿಪ್ರಾಯ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ - ಪ್ರಯಾಣದಲ್ಲಿ ಎಚ್ಚರಿಕೆ, ದೂರ ಪ್ರಯಾಣ ಬೇಡ, ವಿಷ ಜಂತುಗಳ ದರ್ಶನ, ಭಯ, ದೃಷ್ಟಿ ದೋಷ ನಿವಾರಣೆ ಮಾಡಿಸಿ

ಮೀನ - ಶುಭಾಶುಭ ಮಿಶ್ರಫಲ, ಮಕ್ಕಳಿಂದ ದೋಷಾರೋಪಣೆ, ಧನ ಸಮೃದ್ಧಿ, ಕಾರ್ಯ ಸಿದ್ಧಿ, ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ