Asianet Suvarna News Asianet Suvarna News

Daily Horoscope: ದಿನಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ಖರ್ಚು ಹೆಚ್ಚು, ಎಚ್ಚರ!

* 25 ನವೆಂಬರ್ 2021, ಗುರುವಾರದ ಭವಿಷ್ಯ ಹೇಗಿದೆ?
* ಯಾವ ರಾಶಿಗೆ ಯಾವ ಫಲವಿದೆ?
* ಮೀನ ರಾಶಿಯವರಿಗೆ ಹಣಕಾಸಿನ ಖರ್ಚು ಹೆಚ್ಚು

Daily Horoscope 25 November 2021 astrological Predictions for Pisces and other in Kannada
Author
Bangalore, First Published Nov 25, 2021, 6:30 AM IST
  • Facebook
  • Twitter
  • Whatsapp

ಮೇಷ(Aries): ವಿವಾಹಾಕಾಂಕ್ಷಿಗಳಿಗೆ ಬಹಳ ಹಿಂದೆ ತಪ್ಪಿ ಹೋದ ಸಂಬಂಧ ಮತ್ತೆ ಬರುವ ಸಾಧ್ಯತೆ, ಕೃಷಿಕರಿಗೆ ಕಾರ್ಯಾನುಕೂಲ, ತಂದೆ-ಮಕ್ಕಳಲ್ಲಿ ವೃತ್ತಿ ಸಂಬಂಧಿ ತೊಡಕು. ಆದಷ್ಟು ಸಮಾಧಾನವಾಗಿ ಪ್ರತಿಕ್ರಿಯಿಸಿ. ಹಣಕಾಸಿನ ವಿಷಯದಲ್ಲಿ ಹೆಚ್ಚು ಜಾಗರೂಕತೆ ವಹಿಸಿ. ನೆಮ್ಮದಿಗಾಗಿ ಈಶ್ವರನಿಗೆ ಭಸ್ಮಾರ್ಚನೆ ಮಾಡಿಸಿ. 

ವೃಷಭ(Taurus): ದಂಪತಿಗಳ ಮಧ್ಯೆ ಮೌನ ಕಲಹದ ವಾತಾವರಣ, ಸಹೋದರರ ಸಹಕಾರ, ಸೇವಕರ ಸಹಾಯದಿಂದ ಮನಸ್ಸಿಗೆ ಕೊಂಚ ಸಂತೋಷ. ವಿದ್ಯೆ, ಉದ್ಯೋಗದಲ್ಲಿ ಏಕಾಗ್ರತೆ, ರಾಯರ ಸ್ಮರಣೆ ಮಾಡಿ ಕಾರ್ಯಾರಂಭಿಸಿ. ವ್ಯಾಪಾರ ವಹಿವಾಟಿನಲ್ಲಿ ಅಷ್ಟಕ್ಕಷ್ಟೇ ಫಲ. 

ಮಿಥುನ(Gemini): ಕುಟುಂಬದಲ್ಲಿ ಸೌಖ್ಯ, ಪತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡುವ ಮೂಲಕ ಗೃಹಿಣಿಯರಿಗೆ ಸಮಾಧಾನ, ಉದ್ಯೋಗದಲ್ಲಿ ಅನುಕೂಲ, ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಒದಗಿ ಬರುವುದು. ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳಲು ಪೂರ್ಣ ಶ್ರಮ ಹಾಕಿ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ. 

Vaastu Tips for Health: ತಪ್ಪದ ಅನಾರೋಗ್ಯ, ಉದ್ಗೇಗಕ್ಕೆ ಇಲ್ಲಿವೆ ಪರಿಹಾರ

ಕಟಕ(Cancer): ಉತ್ತಮ ಆರೋಗ್ಯ, ಬಹುಕಾಲದ ಆರೋಗ್ಯ ಸಮಸ್ಯೆಗಳಿಗೆ ವೈದ್ಯರ ಸಹಕಾರದಿಂದ ಮುಕ್ತಿ. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಯಶಸ್ಸು, ದಾಂಪತ್ಯದಲ್ಲಿ ಸ್ವಲ್ಪ ಅಸಮಾಧಾನ, ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ. 

ಸಿಂಹ(Leo): ಅಧಿಕ ಖರ್ಚು, ಶತ್ರುಗಳ ಬಾಧೆಯಿಂದ ಮನಸ್ಸಿನ ನೆಮ್ಮದಿ ಹಾಳು. ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಧ್ಯಾನ, ಪ್ರಾಣಾಯಾಮದ ಮೊರೆ ಹೋಗುವುದು ಉತ್ತಮ. ವಾದಗಳಿಂದ ದೂರ ಉಳಿಯಿರಿ. ಪ್ರಯಾಣವನ್ನು ಮುಂದೂಡುವುದು ಉತ್ತಮ. ಸ್ತ್ರೀಯರಿಗೆ ಬಲ, ನೆಮ್ಮದಿಗಾಗಿ ರಾಯರ ದೇವಾಲಯಕ್ಕೆ ಭೇಟಿ ನೀಡಿ. 

ಕನ್ಯಾ(Virgo): ಈ ದಿನ ಲಾಭ ಸಮೃದ್ಧಿಯ ಫಲ ಇರುವುದರಿಂದ ವ್ಯಾಪಾರಿಗಳಿಗೆ ಸಂತಸ. ಶೇರು ವ್ಯವಹಾರಗಳಲ್ಲಿ ಅದೃಷ್ಟ ಪರಿಶೀಲಿಸಬಹುದು. ಆಸ್ತಿ ಸಂಬಂಧಿ ವಿಚಾರಗಳ ಬಗ್ಗೆ ಮಾತನಾಡಬಹುದು. ಮಕ್ಕಳಿಂದ ಮನಸ್ಸಿಗೆ ನೋವಾಗಬಹುದು. ಸಾವಧಾನದಿಂದ ಮಕ್ಕಳನ್ನು ನಿಭಾಯಿಸಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಕೂಡಲೇ ಚಿಕಿತ್ಸೆ ಮಾಡಿಕೊಳ್ಳಿ. ಕೃಷ್ಣ ಪ್ರಾರ್ಥನೆ ಮಾಡಿ.

ತುಲಾ(Libra): ಪ್ರಯಾಣದಲ್ಲಿ ತೊಡಕು, ಪ್ರಯಾಣವನ್ನು ಮುಂದೂಡುವುದು ಉತ್ತಮ. ಕಟ್ಟಡ ನಿರ್ಮಾಣ ವಿಷಯದಲ್ಲಿ ಹೆಚ್ಚಿನ ಎಚ್ಚರ ಅಗತ್ಯ. ವಿಷ ಜಂತುಗಳ ಭಯ, ಮನೆಹಿರಿಯರ ಜೊತೆ ಸಮಯ ಕಳೆಯಿರಿ. ಗ್ರಾಮ ದೇವತೆಯ ಆರಾಧನೆ ಮಾಡಿ. 

Jaggery & Life: ಜೀವನದ ಎಲ್ಲಾ ಕಷ್ಟ ದೂರ ಮಾಡುತ್ತದೆ ಬೆಲ್ಲ

ವೃಶ್ಚಿಕ(Scorpio): ವೃಷ್ಚಿಕ ರಾಶಿಯವರಿಗಿಂದು ಉದ್ಯೋಗದಲ್ಲಿ ಸಂತಸ. ಅಂದುಕೊಂಡ ಕಾರ್ಯ ಸಿದ್ಧಿ. ಹಿರಿಯರಿಂದ ಶ್ಲಾಘನೆ. ಹತ್ತಿರದವರ ಸಂಬಂಧ ಆಸ್ಪತ್ರೆಗೆ ಭೇಟಿ ನೀಡಬೇಕಾಗಬಹುದು. ಆರೋಗ್ಯದ ವಿಷಯದಲ್ಲಿ ಪ್ರೀತಿಪಾತ್ರರಿಗೆ ನೆರವು. ಧನ ವ್ಯತ್ಯಯ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡುವುದರಿಂದ ಮನಸ್ಸಿನ ಸಂಕಲ್ಪ ಫಲದತ್ತ ದಾಪುಗಾಲು. 

ಧನುಸ್ಸು(Sagittarius): ಆಹಾರದ ವಿಷಯದಲ್ಲಿ ಉದಾಸೀನ ಮಾಡದಿರಿ. ಇಲ್ಲದಿದ್ದರೆ, ಆರೋಗ್ಯದಲ್ಲಿ ಏರುಪೇರು ಅನುಭವಿಸಬೇಕಾದೀತು. ನೀರಿನ ವಿಷಯದಲ್ಲಿ ಎಚ್ಚರವಾಗಿರಿ. ಆಪ್ತರಿಂದ ಮನಸ್ಸಿಗೆ ನೋವು. ನವಧಾನ್ಯ ದಾನದಿಂದ ಉತ್ತಮ ಫಲ.

ಮಕರ(Capricorn): ಮಕರ ರಾಶಿಯವರಿಗಿಂದು ಶುಭ ದಿನ. ಉದ್ಯೋಗ ಲಾಭ, ಸ್ಥಾನ ಮಾನಗಳ ಫಲವಿದೆ, ಶತ್ರುಗಳಿಂದ ಜಯ, ಸುಖ ಸಮೃದ್ಧಿ ಇದೆ. ಉದಾಸೀನ ಬಿಟ್ಟು ಮುಂದೂಡಿಕೊಂಡು ಬಂದ ಕಾರ್ಯವನ್ನು ಕೂಡಲೇ ಕೈಗೊಳ್ಳಿ. ವಿವಾಹಾಕಾಂಕ್ಷಿಗಳಿಗೆ ಶುಭ ಸುದ್ದಿ. ಗಣೇಶ ದೇವಾಲಯಕ್ಕೆ ಭೇಟಿ ನೀಡಿ.

ಕುಂಭ(Aquarius): ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚು. ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ಪರಿಶ್ರಮ ಹಾಕುವುದರಿಂದ ಕಾರ್ಯಸಿದ್ಧಿ. ಆಪ್ತರಿಂದ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು. ಅದಕ್ಕಾಗಿ ಸಮಾಧಾನ ಕಳೆದುಕೊಳ್ಳದೆ ಪ್ರತ್ರಿಕ್ರಿಯಿಸಿ. ಮಕ್ಕಳಿಂದ ಮನಸ್ಸಿಗೆ ಮುದ. ಕೃಷ್ಣನಿಗೆ ತುಳಸಿ ಸಮರ್ಪಿಸಿ. 

ಮೀನ(Pisces): ಮನೆಯೊಳಗಿನ ಮೌನ ಯುದ್ಧಕ್ಕೆ ಅಂತ್ಯ ಹಾಡಲು ನೀವೇ ಮುಂದಾಗಬೇಕು. ಮಾತುಕತೆ ಮೂಲಕ ಮನೆಯೊಳಗಿನ ಸಮಸ್ಯೆಗಳಿಗೆ ಪರಿಹಾರ. ವಾಹನಯೋಗ. ಹಣಕಾಸಿನ ಖರ್ಚು ಹೆಚ್ಚು. ಗುರು ಚರಿತ್ರೆ ಪಾರಾಯಣ ಮಾಡಿ

Follow Us:
Download App:
  • android
  • ios