Asianet Suvarna News Asianet Suvarna News

Daily Horoscope| ದಿನಭವಿಷ್ಯ: ಟೀಕೆ ಮಾಡುವುದು ನಿಲ್ಲಿಸಿ. ಗೆಲುವು ನಿಮ್ಮದಾಗಲಿದೆ!

* 15 ನವೆಂಬರ್ 2021 ಸೋಮವಾರದ ಭವಿಷ್ಯ

* ಮೀನ ರಾಶಿಯವರೇ ಟೀಕೆ ಮಾಡುದು ನಿಲ್ಲಿಸಿ. ಗೆಲುವು ನಿಮ್ಮದಾಗಲಿದೆ!

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 15 November 2021 astrological Predictions for Pisces and other in Kannada pod
Author
Bangalore, First Published Nov 15, 2021, 6:27 AM IST
  • Facebook
  • Twitter
  • Whatsapp

ಮೇಷ: ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರ ಇರಲಿ. ಸೂಕ್ತವಾದ ನಿರ್ಧಾರದಿಂದ ಉದ್ಯಮದಲ್ಲಿ ಯಶಸ್ಸು ಕಾಣಲಿದ್ದೀರಿ. ಧೈರ್ಯ ಇರಲಿ.

ವೃಷಭ: ಸ್ನೇಹಿತರ ಜೊತೆಗೂಡಿ ಹೊಸ ಪ್ರಯತ್ನಕ್ಕೆ ಕೈ ಹಾಕಲಿದ್ದಿರಿ. ಮಾಡುವ ಕೆಲಸವನ್ನು ಮನಸಾರೆ ಮಾಡಿ ಮುಗಿಸಿದರೆ ಒಳ್ಳೆಯ ಫಲ

ಮಿಥುನ: ತಂದೆಯ ಮಾತಿನಿಂದ ಪ್ರೇರಣೆ ದೊರೆಯಲಿದೆ. ಆಪ್ತರು ಮಾಡಿದ ಕೆಲಸದಲ್ಲಿ ಹುಳುಕನ್ನೇ ಹುಡುಕುತ್ತಾ ಕೂರುವುದು ಬೇಡ.

ಕಟಕ: ಒಳ್ಳೆಯದ್ದು, ಕೆಟ್ಟದ್ದು ಎಲ್ಲಾ ಕಡೆಯಲ್ಲಿಯೂ ಇರುತ್ತದೆ. ನೀವು ಒಳ್ಳೆಯ ಅಂಶಗಳತ್ತಲೇ ಗಮನ ನೀಡಲಿದ್ದೀರಿ. ಲಾಭ ಹೆಚ್ಚಾಗಲಿದೆ.

ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!

ಸಿಂಹ: ದಾಂಪತ್ಯದಲ್ಲಿ ವ್ಯತ್ಯಾಸಮಾತಿನಿಂದ ತೊಡಕು, ಬುದ್ಧಿಶಕ್ತಿಯಿಂದ ಲಾಭ, ಭಗವದ್ಗೀತಾ ಪಾರಾಯಣ ಮಾಡಿ

ಕನ್ಯಾ: ಕಾರ್ಯ ಸಾಧನೆಯಲ್ಲಿ ಯಶಸ್ಸು, ಶತ್ರುಗಳೂ ಕೂಡ ಸಹಕಾರ ನೀಡುತ್ತಾರೆ, ಋಣ ಹರ ಗಣಪತಿ ಸ್ತೋತ್ರ ಪಠಿಸಿ

ತುಲಾ: ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದವರೊಂದಿಗೆ ಎಚ್ಚರದಿಂದ ಮಾತನಾಡಿ, ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಆಹಾರದಲ್ಲಿ ಜಾಗ್ರತೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು: ನಂಬಿಕೆ ಇಟ್ಟು ಮಾಡಿದ ಕೆಲಸ ಇಂದು ಕೈಗೂಡಲಿದೆ. ನಿಮ್ಮ ಪಾಡಿಗೆ ನೀವು ಇದ್ದು ಬಿಡುವುದು ಒಳಿತು. ಆರೋಗ್ಯದಲ್ಲಿ ವ್ಯತ್ಯಯ.

ಮಕರ: ಆತುರಕ್ಕೆ ಬಿದ್ದು ಅನಾಹುತ ಮಾಡಿಕೊಳ್ಳದಿರಿ. ಹೊಸ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಲಿವೆ. ದಿನವಿಡೀ ಸಂತೋಷ ಇರಲಿದೆ

ಕುಂಭ: ಹೆಚ್ಚು ಮಾತು ಏನೂ ಪ್ರಯೋಜನಕ್ಕೆ ಬರುವುದಿಲ್ಲ. ಅದಕ್ಕೆ ಬದಲಾಗಿ ಕಾಯಕದಿಂದಲೇ ಲಾಭ ಎನ್ನುವುದು ತಿಳಿಯಲಿದೆ.

ಮೀನ : ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಮತ್ತೊಬ್ಬರ ಬಗ್ಗೆ ಟೀಕೆ ಮಾಡುದು ನಿಲ್ಲಿಸಿ. ಗೆಲುವು ನಿಮ್ಮದಾಗಲಿದೆ

 

Follow Us:
Download App:
  • android
  • ios