ಈ ರಾಶಿಗೆ ಇಂದು ಅತ್ಯಂತ ಅನುಕೂಲಕರ ದಿನ

ಮೇಷ
ಎಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಇದ್ದೇ
ಇರುತ್ತದೆ. ನಿಧಾನವಾಗಿ ಆಲೋಚನೆ
ಮಾಡಬೇಕು ಅಷ್ಟೆ. ಸಂಸಾರದಲ್ಲಿ ಗೊಂದಲ.

ವೃಷಭ
ನಿಮ್ಮ ಸುತ್ತಲೂ ಇರುವ ಸ್ವಾರ್ಥಿಗಳಿಂದ
ಅಂತರ ಕಾಯ್ದುಕೊಳ್ಳಿ. ನಿಮ್ಮ ಏಳಿಗೆಯ
ಕುರಿತು ಹೆಚ್ಚು ಗಮನ ನೀಡುವ ಅಗತ್ಯವಿದೆ.

ಮಿಥುನ
ಕಲೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ದೊಡ್ಡ ದೊಡ್ಡ
ವ್ಯಕ್ತಿಗಳ ಸಂಪರ್ಕ ಇಂದು ಸಿಗಲಿದೆ. ಹೊಸ
ಉತ್ಸಾಹದೊಂದಿಗೆ ಕೆಲಸ ಮಾಡುವಿರಿ.

ಕಟಕ
ಬಂಧುಗಳೊಂದಿಗೆ ಆರ್ಥಿಕ ವ್ಯವಹಾರ
ಬೇಡ. ಮತ್ತೊಬ್ಬರನ್ನು ಹೀಯಾಳಿಸಿ ಏನೂ
ಫಲವಿಲ್ಲ. ದೊಡ್ಡ ಕೆಲಸಕ್ಕೆ ಕೈ ಹಾಕಲಿದ್ದೀರಿ.

ಸಿಂಹ
ತಾಳ್ಮೆ ಮತ್ತು ಸೂಕ್ತ ಪರಿಶ್ರಮದೊಂದಿಗೆ
ಮಾಡಿದ ಕೆಲಸ ಎಂದಿಗಾದರೂ ಫಲ
ನೀಡಿಯೇ ನೀಡುತ್ತದೆ. ಮೌನದಿಂದಿರಿ

ಕನ್ಯಾ
ನೆಮ್ಮದಿ ಎನ್ನುವುದು ನಿಮ್ಮ ಅಂತರಂಗ
ದಲ್ಲಿಯೇ ಇದೆ. ಅದನ್ನು ಬೇರೆ ಕಡೆಗಳಲ್ಲಿ
ಹುಡುಕಲು ಹೋಗದಿರಿ. ಸಂತೋಷ ಹೆಚ್ಚಲಿದೆ.

ತುಲಾ
ಕಳೆದುಹೋದುದರ ಬಗ್ಗೆ ಯೋಚಿಸುವುದು
ಬೇಡ. ಅತಿಯಾದ ಆಸೆಯ ಹಿಂದೆಯೇ
ನಿರಾಶೆ ಬರುತ್ತದೆ. ನೆಮ್ಮದಿ ಹೆಚ್ಚಾಗಲಿದೆ.

ವೃಶ್ಚಿಕ
ಮತ್ತೊಬ್ಬರ ಅವಗುಣಗಳನ್ನೇ ಎತ್ತಿ
ತೋರಿಸುವ ಪ್ರಯತ್ನ ಮಾಡಿದಿರಿ. ಜವಾ
ಬ್ದಾರಿಗಳು ಹೆಚ್ಚಾಗಲಿವೆ. ಪ್ರತಿಫಲ ಕಡಿಮೆ.

ಧನಸ್ಸು
ನಡೆಯುವ ಕಾಲು ಎಡುವುದು ಸಹಜ.
ಅದರಂತೆಯೇ ಇಂದು ಸಣ್ಣ ಪುಟ್ಟ ತಪ್ಪುಗಳು
ಆಗಲಿವೆ. ಅವುಗಳ ಬಗ್ಗೆ ಜಾಗೃತವಾಗಿರಿ.

ಮಕರ
ಹಿಂದೆ ಮಾಡಿದ ತಪ್ಪಿಗೆ ಇಂದು ಪಶ್ಚಾತ್ತಾಪ
ಅನುಭವಿಸಲಿದ್ದೀರಿ. ಸಂಜೆಯ ವೇಳೆಗೆ ಮನದ
ದುಃಖ ತಿಳಿಯಾಗಲಿದೆ. ಧೈರ್ಯವಿರಲಿ.

ಕುಂಭ
ಹೊಗಳಿಕೆಯ ಮಾತುಗಳಿಗೆ ಹೆಚ್ಚು ಗಮನ
ನೀಡಬೇಡಿ. ನಿಮ್ಮ ಸಾಮರ್ಥ್ಯದ ಮೇಲೆ
ನಿಮಗೆ ನಂಬಿಕೆ ಇರಲಿ. ಪ್ರಯಾಣ ಸಾಧ್ಯತೆ.

ಮೀನ 
ಸ್ನೇಹಿತರ ಕಷ್ಟಕ್ಕೆ ನೆರವು ನೀಡಲಿದ್ದೀರಿ. ಹೆಚ್ಚು
ಆಸೆ ಮತ್ತು ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ.
ನಿಮ್ಮ ಪಾಲಿಗೆ ಬಂದುದ್ದರಲ್ಲಿ ಖುಷಿಪಡಿ.