ಝೋಮ್ಯಾಟೋ ಪ್ರಕರಣ/ ಇದೀಗ  ಮಹಿಳೆ ಹೀತೇಶಾ ಚಂದ್ರಾಣಿ ಮೇಲೆ ಎಫ್‌ ಆರ್/ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಕರಣ

ಬೆಂಗಳೂರು(ಮಾ.15): ಪುಡ್ ಡಿಲೆವರಿ ಮಾಡಲು ಬಂದಿದ್ದವ ನನ್ನ ಮೇಲೆ ಹಲ್ಲೆ ಮಾಡಿದ್ದ ಎಂದು ಮಹಿಳೆ ಆರೋಪಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ವೈರಲ್ ಆಗಿತ್ತು. ಫುಡ್ ಡಿಲೆವರಿ ಮಾಡುತ್ತಿದ್ದ ಕಾಮರಾಜ್ ಮಹಿಳೆಯೇ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿದ್ದ. ಈಗ ಅಂತಿಮವಾಗಿ ಮಹಿಳೆ ಮೇಲೆ ಎಫ್‌ಐಆರ್ ದಾಖಲಾಗಿದೆ.

ಆರೋಪ ಮಾಡಿದ್ದ ಮಹಿಳೆ ಹೀತೇಶಾ ಚಂದ್ರಾಣಿ ಮೇಲೆ ಎಫ್‌ಐಆರ್ ದಾಖಲಾಗಿದೆ. ಸೆಕ್ಷನ್ 355 (ದಾಳಿ), 504 (ನಿಂದನೆ) ಮತ್ತು& 506 ( ಅಪರಾಧ ಮಾಡಲು ಹೊಂಚು) ಆಧಾರದಲ್ಲಿ ದೂರು ದಾಖಲಾಗಿದೆ.

ಏನಿದು ಜೋಮ್ಯಾಟೋ ಪ್ರಕರಣ

ಊಟ ಪಾರ್ಸೆಲ್‌ ತಲುಪಿಸಲು ಹದಿನೈದು ನಿಮಿಷ ತಡವಾಗಿದ್ದಕ್ಕೆ ಮಹಿಳೆ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದರು. ನಾನು ಮಹಿಳೆ ಮೇಲೆ ಹಲ್ಲೆ ನಡೆಸಿಲ್ಲ ಎಂದು ಬಂಧನಕ್ಕೆ ಒಳಗಾಗಿ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಕಾಮರಾಜ್ ಹೇಳಿದ್ದರು.

ಇದಾದ ಮೇಲೆ ಮಹಿಳೆ ಮತ್ತೆ ಲೈವ್ ಬಂದು ಹಲ್ಲೆ ಮಾಡಿದ್ದು ಕಾಮರಾಜ್ ಅವರೇ ಎಂದು ಹೇಳಿದ್ದರು. ಒಟ್ಟಿನಲ್ಲಿ ಪ್ರಕರಣ ತಿರುವು ಪಡೆದುಕೊಳ್ಳುತ್ತಲೇ ಇದೆ.