ದಾವಣೆಗೆರೆ ಕ್ಯಾಬ್‌ ಚಾಲಕ ಸ್ವಯಂಪ್ರೇರಿತನಾಗಿ ಮಂಗಳವಾರ ಠಾಣೆಗೆ ಬಂದು ಪೊಲೀಸರಿಗೆ ತನಗೆ ಬಾಬು ಮನೆ ಬೆಂಕಿ ಹಚ್ಚಿದ ಸಂಚಿನ ಬಗ್ಗೆ ಮಾಹಿತಿ ಇದೆ ಎಂದಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಫೆಬ್ರವರಿ 9, 2023) : ಇತ್ತೀಚೆನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಮಾನತುಗೊಂಡಿರುವ ಕಾಂಗ್ರೆಸ್‌ ಮುಖಂಡ ಯೂಸುಫ್‌ ಷರೀಫ್‌ ಬಾಬು (ಕೆಜಿಎಫ್‌ ಬಾಬು) ಸೋದರಿ ಮನೆಗೆ ಬೆಂಕಿ ಹಾಕಲು ಚಿಕ್ಕಪೇಟೆ ಮಾಜಿ ಶಾಸಕರ ಪುತ್ರ ಸಂಚು ರೂಪಿಸಿದ್ದರು ಎಂದು ಸಂಪಂಗಿರಾಮ ನಗರ (ಎಸ್‌ಆರ್‌) ಠಾಣೆ ಪೊಲೀಸರಿಗೆ ಕ್ಯಾಬ್‌ ಚಾಲಕನೊಬ್ಬ ಹೇಳಿಕೆ ನೀಡಿದ್ದಾನೆ.

ಕೆಲ ದಿನಗಳ ಹಿಂದೆ ನಾನು ರಾಮನಗರಕ್ಕೆ ಹೋಗಿದ್ದಾಗ ಕೆಜಿಎಫ್‌ ಬಾಬು ಮನೆಗೆ ಬೆಂಕಿ ಹಾಕಲು ಚಿಕ್ಕಪೇಟೆ ಮಾಜಿ ಶಾಸಕ ಆರ್‌.ವಿ.ದೇವರಾಜ್‌ರವರ ಪುತ್ರ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಯುವರಾಜ್‌ನ ಸಹಚರರ ಮಾತನಾಡಿಕೊಳ್ಳುತ್ತಿದ್ದನ್ನು ತಾನು ಕೇಳಿಸಿಕೊಂಡಿದ್ದಾಗಿ ಪೊಲೀಸರಿಗೆ ದಾವಣಗೆರೆ ಜಿಲ್ಲೆಯ ಕ್ಯಾಬ್‌ ಚಾಲಕ ಕಿರಣ್‌ ಹೇಳಿದ್ದಾನೆ. ಈ ಹೇಳಿಕೆ ಆಧರಿಸಿ ರಾಮನಗರಕ್ಕೆ ತೆರಳಿ ಎಸ್‌.ಆರ್‌.ನಗರ ಪೊಲೀಸರು ಪರಿಶೀಲಿಸಿದ್ದು, ಈ ಆರೋಪಕ್ಕೆ ಸೂಕ್ತ ಪುರಾವೆ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: Bengaluru: ಅಮಾನತುಗೊಂಡ ಕಾಂಗ್ರೆಸ್‌ ಮುಖಂಡ ಕೆಜಿಎಫ್‌ ಬಾಬು ಸೋದರಿ ಮನೆಗೆ ಬೆಂಕಿ

ದಾವಣೆಗೆರೆ ಕ್ಯಾಬ್‌ ಚಾಲಕ ಸ್ವಯಂಪ್ರೇರಿತನಾಗಿ ಮಂಗಳವಾರ ಠಾಣೆಗೆ ಬಂದು ಪೊಲೀಸರಿಗೆ ತನಗೆ ಬಾಬು ಮನೆ ಬೆಂಕಿ ಹಚ್ಚಿದ ಸಂಚಿನ ಬಗ್ಗೆ ಮಾಹಿತಿ ಇದೆ ಎಂದಿದ್ದಾನೆ. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ರಾಮನಗರದಲ್ಲಿ ಯುವರಾಜನ ಸಹಚರರು ಮಾತನಾಡುತ್ತಿದ್ದರು ಎಂದು ಹೇಳಿದ್ದಾನೆ. ದಾವಣಗೆರೆಯ ನಿನಗೂ ಬೆಂಕಿ ದುರಂತ ಘಟನೆಗೆ ಏನೂ ಸಂಬಂಧ ಎಂದು ಪ್ರಶ್ನಿಸಲಾಯಿತು. ಆಗ ತಾನು ಆಗಾಗ್ಗೆ ಬಾಡಿಗೆ ಸಲುವಾಗಿ ಬೆಂಗಳೂರಿಗೆ ಬರುತ್ತಿರುತ್ತೇನೆ. ಅಂತೆಯೇ ಕೆಲಸದ ನಿಮಿತ್ತ ರಾಮನಗರಕ್ಕೆ ಹೋದಾಗ ಕೆಜಿಎಫ್‌ ಬಾಬು ಮನೆಯ ಬೆಂಕಿ ಹಾಕುವ ಸಂಚಿನ ಮಾತುಕತೆ ಗೊತ್ತಾಯಿತು ಎಂದು ವಿಚಾರಣೆ ಕಿರಣ್‌ ಹೇಳಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ ಕಿರಣ್‌ ಹೇಳಿಕೆಗೆ ಸೂಕ್ತ ಸಾಕ್ಷ್ಯ ಸಿಕ್ಕಿಲ್ಲ. ಆತನ ಹೇಳಿಕೆಯಲ್ಲಿ ಗೊಂದಲಗಳಿವೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೆಜಿಎಫ್ ಬಾಬು ಮನೆಗೆ ಬೆಂಕಿ, ರಾಜಕೀಯ ದ್ವೇಷದಿಂದ ಕೃತ್ಯದ ಆರೋಪ

ಲಾಲ್‌ ಬಾಗ್‌ 4ನೇ ಮುಖ್ಯರಸ್ತೆಯ ಕೆ.ಎಸ್‌.ಗಾರ್ಡನ್‌ನಲ್ಲಿರುವ ಕೆಜಿಎಫ್‌ ಬಾಬು ಅವರ ಸೋದರಿ ಶಾಹೀನ ತಾಜ್‌ ಮನೆಗೆ ಶುಕ್ರವಾರ ರಾತ್ರಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದರು.