KGF: ಯುಟ್ಯೂಬ್‌ ಚಾನೆಲ್‌ ವರದಿಗಾರ ಆತ್ಮಹತ್ಯೆ

* ಗೃಹಿಣಿಯೊಬ್ಬಳ ಸಾವಿಗೆ ಸಂಬಂಧಿಸಿದಂತೆ ತನಿಖೆಗೆ ಒಳಗಾಗಿದ್ದ ವರದಿಗಾರ
* ಶ್ರೀಧರ್‌ ರಾಂಗೆ ನೋಟಿಸ್‌ ಜಾರಿ ಮಾಡಿದ್ದ ಪೊಲೀಸರು
* ಆತ್ಮಹತ್ಯೆಗೆ ಕಾರಣವೇನು? 

Youtube Channel Reporter Committed Suicide at KGF in Kolar grg

ಕೆಜಿಎಫ್‌(ಜೂ.21): ರಾಬರ್ಟ್‌ಸನ್‌ ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಯುಟ್ಯೂಬ್‌ ವರದಿಗಾರರೊಬ್ಬರು ತಮ್ಮ ಕಚೇರಿಯಲ್ಲಿ ಭಾನುವಾರ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ವರ್ಣಕುಪ್ಪಂ ನಿವಾಸಿಯಾದ ಶ್ರೀಧರ್‌ರಾಂ(35) ಆತ್ಮಹತ್ಯೆ ಮಾಡಿಕೊಂಡ ವರದಿಗಾರ. ಇವರು ನಗರಸಭೆ ಬಸ್‌ ನಿಲ್ದಾಣದ ಅಂಗಡಿಯಲ್ಲಿ ಕಚೇರಿಯನ್ನೂ ಮಾಡಿಕೊಂಡಿದ್ದು ಅಲ್ಲಿಯೇ ಬೆಳಗ್ಗೆ 10 ಗಂಟೆ ಸಮಯದಲ್ಲಿ ಅತ್ಮಹತ್ಯೆಗೆ ಶರಣಾಗಿದ್ದಾರೆ.

ಹಳೆ ಮನೆಯ ಕಟ್ಟಿಗೆಯ ಚಿತೆ ಮಾಡಿ ಸುಸೈಡ್‌ಗೆ ಶರಣಾದ ಹಿರಿಯ ಜೀವ

ಆತ್ಮಹತ್ಯೆಗೆ ಕಾರಣವೇನು?

ಮೇ 23 ರ ರಾತ್ರಿ ಬೆಮೆಲ್‌ ನಗರದ ಪೊಲೀಸ್‌ ಠಾಣೆ ವ್ಯಾಪ್ತಿಯ ಭಾರತ್‌ ನಗರದ ಮನೆಯೊಂದರಲ್ಲಿ ಕೋಟಿಲಿಂಗೇಶ್ವರದ ಕೆನರಾ ಬ್ಯಾಂಕ್‌ ಉದ್ಯೋಗಿ ಮೀನಾದೇವಿ ಎಂಬುವರು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಮೀನಾದೇವಿಯ ಪತಿ ಮುತ್ತು ರಾಮನ್‌ ಬೆಮೆಲ್‌ ಪೊಲೀಸರಿಗೆ ದೂರು ನೀಡಿ ತನ್ನ ಪತ್ನಿ ಮೀನಾದೇವಿಯ ಮೂಗಿನ ಬಳಿ ತರಚಿದ ಗಾಯಗಳಾಗಿದ್ದು, ಅನುಮಾಸ್ಪದವಾಗಿ ಸಾವನ್ನಪ್ಪಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.

ತನಿಖೆ ಆರಂಭಿಸಿದ ಬೆಮಲ್‌ ನಗರದ ವೃತ್ತನೀರಿಕ್ಷಕ ವೆಂಕಟರಮಣಪ್ಪ ಅವರು ಮೀನಾದೇವಿಯ ಮೊಬೈಲ್‌ ವಶಕ್ಕೆ ಪಡೆದುಕೊಂಡು ಕಾಲ್‌ ರೆಕಾರ್ಡ್‌ ಚೆಕ್‌ ಮಾಡಿದಾಗ ಶ್ರೀಧರ್‌ ರಾಂ ಮೊಬೈಲ್‌ ಸಂಖ್ಯೆಯಿಂದ ಮೀನಾದೇವಿಗೆ ಚಾಟ್‌ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಬೆಮೆಲ್‌ ಪೊಲೀಸ್‌ರು ಶ್ರೀಧರ್‌ ರಾಂಗೆ ನೋಟಿಸ್‌ ಜಾರಿ ಮಾಡಿ ತನಿಖೆಗೆ ಬರುವಂತೆ ಬೆಮೆಲ್‌ ಪೊಲೀಸ್‌ರು ಸೂಚಿಸಿದ್ದರು. ಶನಿವಾರ ಶ್ರೀಧರ್‌ರಾಂ ಪೊಲೀಸ್‌ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ತನಿಖೆಯ ವೇಳೆ ಅವರ ಎರಡು ಮೊಬೈಲ್‌ ಫೋನ್‌ಗಳನ್ನು ಪೊಲೀಸ್‌ರು ವಶಕ್ಕೆ ಪಡೆದುಕೊಂಡಿದ್ದು, ಧ್ವನಿ ಪರಿಕ್ಷೆಗಾಗಿ ಅವುಗಳನ್ನು ಎಸ್‌ಎಫ್‌ಐಎಲ್‌ಗೆ ಕಳುಹಿಸುವುದಾಗಿ ತಿಳಿಸಿ ಶ್ರೀಧರ್‌ ರಾಂ ಅವರನ್ನು ಮನೆಗೆ ಕಳುಹಿಸಿದ್ದಾರೆ. ಭಾನುವಾರ ರಾಂ ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.
 

Latest Videos
Follow Us:
Download App:
  • android
  • ios