ಪುದುಚೇರಿ( ( ಫೆ.  21) ತನ್ನ ಜತೆಗಿನ ಹಳೆ ಸಂಬಂಧ ಮುಂದುವರಿಸದೇ ಇದ್ದರೆ ನಿನ್ನ ಖಾಸಗಿ ಪೋಟೋಗಳನ್ನು ಹರಿಯಬಿಡುತ್ತೇನೆ ಎಂದು 24  ವರ್ಷದ ಯುವಕನೊಬ್ಬ ಬೆದರಿಕೆ ಹಾಕಿದ್ದಾನೆ. ಜತೆಗೆ ಹಣ ನೀಡಬೇಕು ಎಂದು ತಾಕೀತು ಮಾಡಿದ್ದಾನೆ.

ತಮಿಳುನಾಡು ನಿವಾಸಿ ಯುವಕ  ಬೆದರಿಕೆ ಹಾಕಿದ್ದದಾನೆ.  ಕರೆದಾಗ ಸೆಕ್ಸ್ ಗೆ ಸಹಕರಿಸಬೇಕು ಜತೆಗೆ 50,000 ರೂ. ನೀಡಬೇಕು ಎಂದು ಕಾರ್ತಿ ಎಂಬ ಯುವಕ ಬ್ಲಾಕ್ ಮೇಲ್ ಶುರುಮಾಡಿದ್ದಾನೆ.

ಕಾರ್ತಿ ನಿರುದ್ಯೋಗಿದ್ದ.  ಈತನ ಗೆಳೆಯರು ರಚಿಸಿದ ವಾಟ್ಸಾಪ್ ಗ್ರೂಪ್ ಗೆ  ಆರೋಪಿ ಮತ್ತು 20 ವರ್ಷದ ಯುವತಿಯನ್ನು ಸೇರಿಸಲಾಯಿತು. ಆಖರೆ ತಿರುಭುವನೈನ ಖಾಸಗಿ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದಳು.

ಆನ್ ಲೈನ್ ನಲ್ಲೇ ಆಟದ ಹೆಸರಿನಲ್ಲಿ ಸಹಪಾಠಿ ಬಟ್ಟೆ ಬಿಚ್ಚಿಸಿದ ಕಿರಾತಕ

ಗುಂಪಿನಲ್ಲಿ ಪರಿಚಯವಾದ ಮೇಲೆ ಪರಸ್ಪರ ಇಬ್ಬರ ನಡುವೆ ಮಾತುಕತೆ ನಡೆದು ಮತ್ತಷ್ಟು ಹತ್ತಿರವಾದರು. ಇಬ್ಬರು ತಮಿಳುನಾಡು ಮತ್ತು ಪಾಂಡಿಚೇರಿಯನ್ನು ಸಾಕಷ್ಟು  ತಿರುಗಾಡಿದರು. ಪೋಟೋಗಳನ್ನು ತೆಗೆದುಕೊಂಡರು.

ಕೆಲ ದಿನಗಳ ನಂತರ ಯುವತಿ ಕಾರ್ತಿಯಿಂದ ದೂರ ಸರಿಯಲು ತೀರ್ಮಾನ ಮಾಡಿದ್ದಾಳೆ. ಮಾತುಕತೆ ಬಂದ್ ಮಾಡಿದ್ದಾಳೆ. ಇದೇ ಕಾರಣಕ್ಕೆ ಸಿಟ್ಟಿಗೆದ್ದ ಯುವಕ  ನಿನ್ನ ಮತ್ತು ನನ್ನ ಪೋಟೋವನ್ನು ಸೋಶಿಯಲ್ ಮೀಡಿಯಾಕ್ಕೆ  ಹಾಕುತ್ತೇನೆ. ಹಾಗೆ ಆಗಬಾರದು ಎಂದರೆ ಹಣ ಕೊಡಿ ಎಂದು ಗಂಟು ಬಿದ್ದಿದ್ದಾನೆ.   ಈಗಾಗಲೇ ಹದಿನೈದು ಸಾವಿರ ಕೊಟ್ಟಿದ್ದ ಯುವತಿ ಅಂತಿಮವಾಗಿ ಪೊಲೀಸರ ಮೊರತೆ ಹೋಗಿದ್ದಾರೆ.