ಮುಂಬೈ (ಫೆ. 06) ಇಂಥ ಪ್ರಕರಗಳು ಒಮ್ಮೊಮ್ಮೆ ಬೆಚ್ಚಿ ಬೀಳಿಸಿ ಬಿಡುತ್ತವೆ.  13 ವರ್ಷದ ಬಾಲಕನೊಬ್ಬ ತನ್ನ ಶಾಲೆಯ ಬಾಲಕಿಯ ಅಶ್ಲೀಲ ವಿಡಿಯೋ ಮಾಡಿದ್ದಾನೆ. 

ಟ್ರುತ್ ಅಂಡ್ ಡೇರ್ ಎಂಬ ಗೇಮ್ ಆಡುವಾಗ ಈ ಕೆಲಸ ಮಾಡಿದ್ದು ನಂತರ ಆಕೆಯನ್ನು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ.  ಪೊಲೀಸರು ಬಾಲಕನ ಕರೆದು ಎಚ್ಚರಿಕೆ ಕೊಟ್ಟು ನೋಟಿಸ್ದ ಒಂದನ್ನು ನೀಡಿದ್ದಾರೆ. 

ಲಾಕ್ ಡೌನ್ ಸಂದರ್ಭ ಹುಡುಗಿಗೆ ಇಸ್ಟಾದಲ್ಲಿ ರಿಕ್ವೆಸ್ಟ್ ಒಂದು ಬಂದಿದೆ. ಬಾಲಕಿ ಅದನ್ನು ಸ್ವೀಕಾರ ಮಾಡಿದ್ದು ಚಾಟಿಂಗ್ ಆರಂಭಿಸಿದ್ದಾಳೆ. ಆಕೆಗೆ ಇದು ತನ್ನ ಕ್ಲಾಸ್ ಮೇಟ್ ಎಂಬುದು  ಗೊತ್ತಿರಲಿಲ್ಲ.

ಪ್ರತಿ ಬಂಗಲೆಯಲ್ಲೂ ಲೈವ್ ಪೋರ್ನ್ ಶೂಟಿಂಗ್, ಮಹಿಳೆಯರೇ ಕಿಂಗ್ ಪಿನ್!

ಇದಾದ ಮೇಲೆ ಆನ್ ಲೈನ್ ಗೇಮ್ ಶುರುವಾಗಿದೆ. ಲೈವ್ ವಿಡಿಯೋದಲ್ಲಿ ಬಟ್ಟೆ ಬಿಚ್ಚಲು ಹೇಳಿದ್ದು ಚಾಲೆಂಜ್ ಸ್ವೀಕಾರ ಮಾಡಿದ ಹುಡುಗಿ ಹಾಗೇ  ಮಾಡಿದ್ದಾಳೆ. ಇದರ ಸ್ಕ್ರೀನ್ ಶಾಟ್ ಇಟ್ಟುಕೊಂಡು ಬ್ಲಾಕ್ ಮೇಲ್ ಆರಂಭ ಮಾಡಿದ್ದಾನೆ.

ಬ್ಲಾಕ್ ಮೇಲ್ ಶುರು ಹಚ್ಚಿಕೊಂಡು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತೇನೆ ಎಂದು ಬೆದರಿಸಿದ್ದಾನೆ. ಹುಡುಗಿ ಈತನ ಖಾತೆಯನ್ನು ಬ್ಲಾಕ್ ಮಾಡಿದ್ದಾಳೆ. ಆದರೆ ಬೇರೆ ತೆರನಾಗಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ಕೊನೆಗೆ ಪಾಲಕರೊಂದಿಗೆ ತೆರಳಿ ದೂರು ನೀಡಿದ್ದು ತನಿಖೆ ಮಾಡಿದಾಗ  ಹುಡುಗನ ಕಾರ್ಯ ಬಯಲಾಗಿದೆ.