Crime News Today: ವೈಫೈ ಪಾಸ್‌ವರ್ಡ್‌ ನೀಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಇಬ್ಬರು ಆರೋಪಿಗಳು ಹದಿನೇಳು ವರ್ಷದ ಯುವಕನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.

ಮುಂಬೈ: ಹದಿನೇಳು ವರ್ಷದ ಹುಡುಗನನ್ನು ವೈಫೈ ಹಾಟ್‌ಸ್ಪಾರ್ಡ್‌ ಪಾಸ್‌ವರ್ಡ್‌ ನೀಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಕಳೆದ ವಾರ ಮುಂಬೈನ ಕಮೊತೆ ಎಂಬ ಪ್ರದೇಶದ ಒಂದು ಪಾನ್‌ ಅಂಗಡಿ ಮುಂದೆ ವಿಶಾಲ್‌ ರಾಜ್‌ಕುಮಾರ್‌ ಮೌರ್ಯ ಎಂಬ ಹುಡುಗನ ಬಳಿ ವೈಫೈ ಪಾಸ್‌ವರ್ಡ್‌ ಕೊಡುವಂತೆ ಇಬ್ಬರು ಕೇಳಿದ್ದಾರೆ. ಆದರೆ ಹುಡುಗ ಕೊಡಲು ಕೊಪ್ಪಲಿಲ್ಲ. ಅದಕ್ಕೆ ಇಬ್ಬರೂ ಬಾಯಿಗೆ ಬಂದಂತೆ ಬಯ್ಯಲು ಆರಂಭಿಸಿದ್ಧಾರೆ. ವಿಶಾಲ್‌ ಕೂಡ ಸಿಟ್ಟಿಗೆದ್ದು ವಾಪಸ್‌ ಬೈದಿದ್ದಾನೆ. ಮೂವರ ನಡುವಿನ ಜಟಾಪಟಿ ತಾರಕಕ್ಕೇರಿ ಇಬ್ಬರೂ ಚಾಕುವಿನಿಂದ ವಿಶಾಲ್‌ಗೆ ಚುಚ್ಚಿ ಸಾಯಿಸಿದ್ದಾರೆ. 

ಆರೋಪಿಗಳಿಬ್ಬರೂ ತಕ್ಷಣ ಘಟನಾ ಸ್ಥಳದಿಂದ ಓಡಿ ಹೋಗಿದ್ದಾರೆ. ಆದರೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ವಿಶಾಲ್‌ನನ್ನು ಚುಚ್ಚಿದ ನಂತರ ಕೆಲ ಹೆಜ್ಜೆ ನಡೆದಿದ್ದಾನೆ. ನಂತರ ಅಲ್ಲೇ ಕುಸಿದು ಬಿದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುತ್ತ ಇದ್ದ ಜನ ತಕ್ಷಣ ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಆತ ಮೃತ ಪಟ್ಟಿದ್ದ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ಧಾರೆ. 

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಭೀಕರ ಘಟನೆ, ಸಮಾಜವಾದಿ ಪಕ್ಷದ ನಾಯಕ, ಪತ್ನಿ, ತಾಯಿಗೆ ಗುಂಡಿಕ್ಕಿ ಹತ್ಯೆ!

"ಹದಿನೇಳು ವರ್ಷದ ಯುವಕನನ್ನು ವೈಫೈ ಪಾಸ್‌ವರ್ಡ್‌ ಕೊಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಮುಂಬೈನ ಕಮೊತೆ ಪ್ರದೇಶದಲ್ಲಿ ನಡೆದಿದೆ. ಮೂವರ ನಡುವೆ ಜಗಳವಾದ ನಂತರ ಆತನ ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಬಂದಿಸಲಾಗಿದೆ," ಎಂದು ಡಿಸಿಪಿ ವಿವೇಕ್‌ ಪನ್ಸಾರೆ ಎಎನ್‌ಐಗೆ ತಿಳಿಸಿದ್ದಾರೆ. 

ಇದನ್ನೂ ಓದಿ: 'ನಿನ್‌ ಹೆಂಡ್ತಿಗೆ ಪ್ರೆಗ್ನೆಂಟ್‌ ಮಾಡಿದ್ದು ನಾನು..': ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ ಈ ಕ್ರೈಮ್‌ ಸ್ಟೋರಿ

ಆರೋಪಿಗಳನ್ನು ರವೀಂದ್ರ ಅಟ್ವಾಲ್‌ ಅಲಿಯಾಸ್‌ ಹರಿಯಾಣ್ವಿ ಮತ್ತು ಸಂತೋಶ್‌ ವಾಲ್ಮೀಕಿ ಎಂದು ಗುರುತಿಸಲಾಗಿದೆ. ಆದರೆ ಕೇವಲ ವೈಫೈ ವಿಚಾರಕ್ಕೆ ಕೊಲೆ ಮಾಡಿರುವುದು ವಿಪರ್ಯಾಸ.