Asianet Suvarna News Asianet Suvarna News

ಉತ್ತರ ಪ್ರದೇಶದಲ್ಲಿ ಭೀಕರ ಘಟನೆ, ಸಮಾಜವಾದಿ ಪಕ್ಷದ ನಾಯಕ, ಪತ್ನಿ, ತಾಯಿಗೆ ಗುಂಡಿಕ್ಕಿ ಹತ್ಯೆ!

ಉತ್ತರ ಪ್ರದೇಶದಲ್ಲಿ ಭೀಕರ ಹತ್ಯೆ ನಡೆದಿದೆ. ಸಮಾಜವಾದಿ ಪಾರ್ಟಿ ನಾಯಕ, ಆತನ ಪತ್ನಿ ಹಾಗೂ ತಾಯಿಯನ್ನು ಗುಂಡಿಕ್ಕಿ ಹತ್ಯೆ  ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಇಡೀ ಪ್ರದೇಶ ಸುತ್ತುವರೆದಿದ್ದಾರೆ.
 

Samajwadi Party leader his wife and mother shot dead by unknown assailants in Uttar Pradesh ckm
Author
First Published Nov 1, 2022, 8:58 PM IST

ಲಖನೌ(ನ.01): ಉತ್ತರ ಪ್ರದೇಶದಲ್ಲಿ ರಾಜಕೀಯ ನಾಯಕರನ್ನು ಟಾರ್ಗೆಟ್ ಮಾಡುವ ಪರಿಪಾಠ ಮುಂದುವರಿದಿದೆ. ಇದೀಗ ಸಮಾಜವಾದಿ ಪಾರ್ಟಿ ನಾಯಕ, ಆತನ ಪತ್ನಿ ಹಾಗೂ ತಾಯಿ ಮೇಲೆ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬದೌನ್ ಜಿಲ್ಲೆಯ ಉಶೈತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಮಾಜವಾದಿ ಪಾರ್ಟಿ ಬ್ಲಾಕ್ ಅಧ್ಯಕ್ಷ ರಾಕೇಶ್ ಗುಪ್ತಾ ಮನೆಯಲ್ಲೇ ಈ ಘಟನೆ ನಡೆದಿದೆ. ಸಂಜೆ 6 ಗಂಟೆಗೆ ಅಪರಿಚಿತರು ರಾಕೇಶ್ ಗುಪ್ತಾ ಮನೆ ಮೇಲೆ ಗುಂಡು ಹಾರಿಸುತ್ತಾ ನುಗ್ಗಿದ್ದಾರೆ. ಬಳಿಕ ರಾಕೇಶ್ ಗುಪ್ತಾ, ಗುಪ್ತಾ ಅವರ ತಾಯಿ ಶಾರಾದ ಹಾಗೂ ಪತ್ನಿ ಶಾಂತಿ ದೇವಿ ಮೇಲೂ ಗುಂಡು ಹಾರಿಸಿದ್ದಾರೆ. ಮೂವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. 

ಸೋಮವಾರ ಸಂಜೆ ಈ ಘಟನೆ ನಡೆದಿದೆ. ರಾಕೇಶ್ ಗುಪ್ತಾ ಸಮಾಜವಾದಿ ಪಾರ್ಟಿಯ ಜನಪ್ರಿಯ ನಾಯಕನಾಗಿ ಬೆಳೆದಿದ್ದಾರೆ. ಬದೌನ್ ಜಿಲ್ಲೆಯಲ್ಲಿ ರಾಕೇಶ್ ಗುಪ್ತಾ ಅತ್ಯಂತ ಜನಪ್ರಿಯರಾಗಿದ್ದರು. ಎಲ್ಲರೊಂದಿಗ ಆತ್ಮೀಯರಾಗಿದ್ದ ರಾಕೇಶ್ ಗುಪ್ತಾರನ್ನು ದ್ವೇಷಿಸುವ ಮಂದಿ ಕಡಿಮೆ. ಯಾರೊಂದಿಗೆ ವಿರೋಧ ಕಟ್ಟಿಕೊಂಡಿಲ್ಲ. ಹೀಗಾಗಿ ಇದೀಗ ಕುಟುಂಬವನ್ನು ಹತ್ಯೆ ಮಾಡಲು ಕಾರಣವೇನು? ಇದರ ಹಿಂದೆ ಯಾರಿದ್ದಾರೆ ಅನ್ನೋದು ಪತ್ತೆ ಹಚ್ಚಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.

'ನಿನ್‌ ಹೆಂಡ್ತಿಗೆ ಪ್ರೆಗ್ನೆಂಟ್‌ ಮಾಡಿದ್ದು ನಾನು..': ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ ಈ ಕ್ರೈಮ್‌ ಸ್ಟೋರಿ

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹತ್ಯೆ, ಅಮಾನವೀಯ ಘಟನೆಗಳು ಮರುಕಳಿಸುತ್ತಲೇ ಇದೆ. ಪೊಲೀಸ್ ಹಾಗೂ ಸರ್ಕಾರ ಕಾನೂನು ಸುವ್ಯವಸ್ಥೆ ಪಾಲನೆಗೆ ಕಠಿಣ ಕ್ರಮ ಕೈಗೊಂಡಿದೆ. ಆದರೆ ಘಟನೆ ನಡೆಯುತ್ತಲೇ ಇದೆ. 

ರೇಪ್‌ ಸಂತ್ರಸ್ತೆಗೆ ನೆರವಾಗುವ ಬದಲು ವಿಡಿಯೋ ಶೂಟ್‌!
 ಅತ್ಯಾಚಾರಕ್ಕೆ ಒಳಗಾಗಿ ರಕ್ತಸ್ರಾವದಿಂದ ನರಳುತ್ತಿದ್ದ ಬಾಲಕಿಯೊಬ್ಬಳು ನೆರವಿಗಾಗಿ ಅಂಗಲಾಚುತ್ತಿದ್ದರೆ, ಆಕೆಯ ಅಕ್ಕಪಕ್ಕ ನೆರೆದ ಹಲವಾರು ಜನರು ನೆರವು ನೀಡುವ ಬದಲು ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿಯುತ್ತಾ ನಿಂತ ಅಮಾನನೀಯ ಘಟನೆಯೊಂದು ಉತ್ತರಪ್ರದೇಶ ಕನೌಜ್‌ನಲ್ಲಿ ನಡೆದಿದೆ.

ಅಂಗಡಿಗೆ ತೆರಳಿದ್ದ 12 ವರ್ಷದ ಬಾಲಕಿಯನ್ನು ಸಮೀಪದ ಅತಿಥಿಗೃಹವೊಂದರಲ್ಲಿ ಅತ್ಯಾಚಾರ ಮಾಡಿ ಬಳಿಕ, ಕಟ್ಟಡದ ಹಿಂದೆ ಎಸೆಯಲಾಗಿತ್ತು. ಈ ವೇಳೆ ಹಲ್ಲೆಗೊಳಗಾಗಿದ್ದ ಬಾಲಕಿ ರಕ್ತಸ್ರಾವದಿಂದ ನರಳುತ್ತಾ ನೆರವಿಗೆ ಯಾಚಿಸುತ್ತಿದ್ದರೆ, ಆಕೆಯ ಸುತ್ತಮುತ್ತ ನೆರೆದ ಯುವಕರು ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿಯುತ್ತಾ ನಿಂತಿದ್ದರು.

ಉತ್ತರ ಪ್ರದೇಶದಲ್ಲಿ ಮದರಸಾಗಳ ಸಮೀಕ್ಷೆ ಮುಕ್ತಾಯ, 8 ಸಾವಿರ ಅಕ್ರಮ ಮದರಸಾ ಪತ್ತೆ

ಬಳಿಕ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರೇ ಆಕೆಯನ್ನು ಎತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಬಾಲಕಿ ಚೇತರಿಸಿಕೊಂಡ ಬಳಿಕ ಆಕೆಯ ಹೇಳಿಕೆ ಪಡೆಯಲು ಕಾಯುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಮಕ್ಕಳ ಕಳ್ಳರೆಂದು 4 ಸಾಧುಗಳ ಮೇಲೆ ಹಲ್ಲೆ
ಪಾಲ್ಘಾರ್‌ ಮಾದರಿಯಲ್ಲೇ ಮಕ್ಕಳ ಕಳ್ಳರೆಂದು 4 ಸಾಧುಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸುಮಾರು 18-20 ಜನರ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಅವರಲ್ಲಿ 6 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Follow Us:
Download App:
  • android
  • ios