Bengaluru Murder: ಪ್ರೀತಿ ನಿರಾಕರಿಸಿದಳೆಂದು ಯುವತಿಯ ಕತ್ತು ಕೊಯ್ದ ಪಾಗಲ್ ಪ್ರೇಮಿ!

ಪ್ರೀತಿ ನಿರಾಕರಿಸಿದಾಳೆಂಬ ಕ್ಷುಲ್ಲಕ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಕಾಲೇಜು ವಿದ್ಯಾರ್ಥಿನಿಯನ್ನು ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ರಾಜಾನುಕುಂಟೆಯ ಸಮೀಪದ ಶಾನುಭೋಗನಹಳ್ಳಿ ಬಳಿ ನಡೆದಿದೆ. 

Young woman killed for refusing love at rajanukunte bengaluru rav

ಬೆಂಗಳೂರು (ಜ.18) : ಪ್ರೀತಿ ನಿರಾಕರಿಸಿದಾಳೆಂಬ ಕ್ಷುಲ್ಲಕ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಕಾಲೇಜು ವಿದ್ಯಾರ್ಥಿನಿಯನ್ನು ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ರಾಜಾನುಕುಂಟೆಯ ಸಮೀಪದ ಶಾನುಭೋಗನಹಳ್ಳಿ ಬಳಿ ನಡೆದಿದೆ.

ನಿನ್ನೆ ರಾತ್ರಿ ನಡೆದಿರು ಈ ಕೊಲೆಯ ಭೀಕರತೆ ಬೆಂಗಳೂರು ಮತ್ತೊಮ್ಮೆ ಬೆಚ್ಚಿಬಿದ್ದಿದೆ. ರಾಶಿ(19) ಕೊಲೆಯಾದ ವಿದ್ಯಾರ್ಥಿನಿ. ಆಂಧ್ರ ಮೂಲದ ಮಧುಚಂದ್ರ ಎಂಬಾತನಿಂದ ಕೃತ್ಯ ನಡೆದಿದ್ದು, ಯುವತಿಯನ್ನು ಹತ್ಯೆ ಮಾಡಿದ ಬಳಿಕ ಪರಾರಿಯಾಗಿದ್ದಾನೆ.

ಮಂಗಳೂರು: ಮನೆಗೆ ನುಗ್ಗಿ ದಲಿತ ಯುವತಿ ಹತ್ಯೆ; ಪಾಗಲ್ ಪ್ರೇಮಿ ಅರೆಸ್ಟ್!

ಯಲಹಂಕ(Yalahanka)ದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ರಾಶಿ(Rashi). ನಿನ್ನೆ ಸಂಜೆ ತಮ್ಮ ತೋಟದಲ್ಲಿ ಕಟ್ಟಿ ಹಾಕಿದ್ದ ಹಸುಗಳನ್ನು ಮನೆಗೆ ಕರೆತರಲು ನಡೆದುಕೊಂಡು ಹೋಗಿದ್ದಳು. ರಾಶಿ ಬರುವುದನ್ನೇ ಹೊಂಚು ಹಾಕಿ ಕಾದಿದ್ದ ಪಾತಕಿ, ಯುವತಿ ಬಂದ ಬಳಿಕ ಪ್ರೀತಿ ಮಾಡುವಂತೆ ಒತ್ತಾಯಿಸಿದ್ದ. ಯುವತಿ ನಿರಾಕರಿಸಿದ್ದಳು. ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದೆ. ಮೊದಲೇ ಕೊಲೆ ಮಾಡುವ ಪ್ಲಾನ್ ಮಾಡಿಕೊಂಡಿದ್ದ ಕಿರಾತಕ ಏಕಾಏಕಿ ಯುವತಿಯ ಮೇಲೆ ದಾಳಿ ನಡೆಸಿದ್ದಾನೆ. 

ಇದೆಂಥ ಭೀಕರ ಹತ್ಯೆ ಎಂದರೆ, ಪ್ರೀತಿಸಿದ ಯುವತಿಯ ಮೇಲೆ ರಾಕ್ಷಸನಂತೆ ದಾಳಿ ನಡೆಸಿ ಕತ್ತು ಕೊಯ್ದಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಕೊಯ್ದ ಕತ್ತನ್ನು ಕೈಯಲ್ಲಿ ಹಿಡಿದು ಸುಮಾರು  200 ಮೀಟ‌ರ್ ನಡೆದುಕೊಂಡು ಬಂದಿದ್ದ ಯುವತಿ. ತೋಟದಲ್ಲಿ ಬಿದ್ದಿದ ರಾಶಿ. ರಾಶಿಯ ಮೃತದೇಹ ಕಂಡ ದಾರಿಹೋಕರು ಆಕೆಯನ್ನು ಗಮನಿಸಿ‌ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಮಧುಚಂದ್ರ(Madhuchandra)ನಿಗೆ ಈ ಹಿಂದೆಯೇ ವಿವಾಹವಾಗಿತ್ತು. ಈ ವಿಚಾರ ಯುವತಿಗೆ ತಿಳಿಸದೆ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ ಮದುವೆ ಆಗಿರುವ ವಿಚಾರ ಗೊತ್ತಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರವಾಗಿದ್ದರು. ಇದೇ ಕಾರಣಕ್ಕೆ ಯುವತಿಯೊಂದಿಗೆ ಹಲವು ಬಾರಿ ವಾಗ್ವಾದಕ್ಕಿಳಿದಿದ್ದ ಮಧುಚಂದ್ರ 

ಪ್ರತಿನಿತ್ಯ ಎಂದಿನಂತೆ ಕಾಲೇಜು ಮುಗಿದ ಬಳಿಕ ತೋಟದಲ್ಲಿನ ಹಸು, ಕುರಿ ಕರೆತರಲು ತೆರಳುತ್ತಿದ್ದ ರಾಶಿ. ಈ ವಿಚಾರ ತಿಳಿದಿದ್ದ ಆರೋಪಿ ಬೈಕ್‌ನಲ್ಲಿ ನಿನ್ನೆ ರಾತ್ರಿ ರಾಶಿಯನ್ನು ಹಿಂಬಾಲಿಸಿದ್ದಾನೆ. ನಿರ್ಜನ ಪ್ರದೇಶದಲ್ಲಿ ರಾಶಿಯೊಂದಿಗೆ ಮತ್ತೆ ಜಗಳ ತೆಗೆದಿದ್ದಾನೆ. ಈ ವೇಳೆ ಯುವತಿ ನಿರಾಕರಿಸಿದ್ದಾಳೆ. ಮೊದಲೇ ಕೊಲೆ ಮಾಡುವ ಉದ್ದೇಶದೊಂದಿಗೆ ಬಂದಿದ್ದ ಆರೋಪಿ ರಾಶಿಯ ಕತ್ತು ಕೊಯ್ದು ಪರಾರಿಯಾಗಿದ್ದಾನೆ. ಸದ್ಯ  ಭೀಕರ ಹತ್ಯೆ ಸಂಬಂಧ ರಾಜಾನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೆಂಗಳೂರು ಹೈ ಟೆನ್ಶನ್‌ಗೆ ಮತ್ತೊಂದು ಬಲಿ:

ಬೆಂಗಳೂರಿನಲ್ಲಿ ನಡೆಯುತ್ತಿರುವ ಅವಘಡಗಳಿಗೆ ಕೊನೆಯೇ ಇಲ್ಲದಂತಾಗಿದೆ. ರಸ್ತೆ ಅಪಘಾತ, ವಿದ್ಯುತ್ ಸ್ಪರ್ಶ ದಿನನಿತ್ಯ ಮಕ್ಕಳಿಂದ ಮುದುಕರವರೆಗೆ ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ. 

ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ವಸ್ತು ತೆಗೆಯಲು ಹೋಗಿ ಸಾವು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಸೋಮವಾರ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಗಾಳಿಪಾಟ ಬಿಡುತ್ತಿದ್ದ 11 ವರ್ಷದ ಮಗು ಹೈಟೆನ್ಶನ್ ವಿದ್ಯುತ್ ವೈಯರ್ ತಗುಲಿ ಮೃತಪಟ್ಟಿರುವ ಘಟನೆ ಆರ್‌ಟಿ ನಗರದ ಚಾಮುಂಡಿನಗರ ಚಿಂಗಮ್ ಫ್ಯಾಕ್ಟರಿ ಬಳಿ ನಡೆದಿದೆ. ಹಬ್ಬದ ಸಂಭ್ರಮಕ್ಕೆ ಗಾಳಿಪಾಟ ಹಾರಿಸಲು ತೆರಳಿದ್ದ ಮಗು, ಹಾರಿಸುವ ವೇಳೆ ಹೈಟೆನ್ಶನ್ ವಿದ್ಯುತ್ ತಗುಲಿ ತೀವ್ರ ಗಾಯಗೊಂಡಿದ್ದ ಮಗು. ಹೆಚ್ಚಿನ ಚಿಕಿತ್ಸೆಗೆ  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ ಸಾವು.

Latest Videos
Follow Us:
Download App:
  • android
  • ios