ಪ್ರೀತಿ ಮಾಡುವುದಕ್ಕೆ ಒಲ್ಲೆ ಎಂದು ನಿರಾಕರಣೆ ಮಾಡಿದ ಯುವತಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡಿರುವ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಗುಡೂರು ಗ್ರಾಮದಲ್ಲಿ ನಡೆದಿದೆ.

ಬಾಗಲಕೋಟೆ (ಮಾ.27): ವಿಕೃತ ಪ್ರೇಮಿಯೊಬ್ಬ ಪ್ರೀತಿ ಮಾಡುವುದಕ್ಕೆ ಒಲ್ಲೆ ಎಂದು ನಿರಾಕರಣೆ ಮಾಡಿದ ಯುವತಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡಿರುವ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಗುಡೂರು ಗ್ರಾಮದಲ್ಲಿ ನಡೆದಿದೆ.

ಇನ್ನು ಬೆಂಕಿ ಹಚ್ಚಿಕೊಂಡು ಸುಟ್ಟು ಹೋಗುತ್ತಿದ್ದ ಇಬ್ಬರನ್ನೂ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ನಂತರ, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ತಂದೆ, ತಾಯಿ ಇಲ್ಲದೇ ಅಕ್ಕ- ಭಾವನ ಮನೆಯಲ್ಲಿ ವಾಸವಾಗಿದ್ದ ನೇತ್ರಾವತಿಗೆ ಅದೇ ಗ್ರಾಮದ ಗರಡಿಮನೆ ಏರಿಯಾದ ಅಫ್ಜಲ್ ಎನ್ನುವ ಯುವಕ ತನ್ನನ್ನು ಪ್ರೀತಿ ಮಾಡುವಂತೆ ಹಲವು ದಿನಗಳಿಂದ ಹಿಂದೆ ಬಿದ್ದಿದ್ದಾನೆ. ಆದರೆ, ಮೊದಲೇ ಕಷ್ಟದಲ್ಲಿ ಬೆಳೆಯುತ್ತಿದ್ದ ನೇತ್ರಾವತಿಗೆ ಅನ್ಯ ಕೋಮಿನವರನ್ನು ಪ್ರೀತಿ ಮಾಡುವ ಬಗ್ಗೆ ಮನಸ್ಸಿರಲಿಲ್ಲ. ಆದ್ದರಿಂದ ಪ್ರೀತಿ ಮಾಡುವುದಕ್ಕೆ ಒಪ್ಪಿಕೊಂಡಿಲ್ಲ. ಆದರೂ, ಪದೇ ಪದೆ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಮನೆಯಲ್ಲಿನ ಹಿರಿಯರಿಗೆ ಹೇಳುವುದಾಗಿ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಮೂಲಕ ವಿಕೃತಿ ಮೆರೆದಿದ್ದಾನೆ.

Breaking: ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಬಂಧನ: ಲೋಕಾಯುಕ್ತ ಪೊಲೀಸರಿಂದ ವಶ

ಬೆಂಕಿ ಹಚ್ಚಿದ ಘಟನೆಯ ವಿವರ: ಯುವಕ ಆಫ್ಜಲ್‌ನ ಪ್ರೀತಿಯ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದೇ ಪ್ರತಿನಿತ್ಯದಂತೆ ತಾನಾಯ್ತು ತನ್ನ ಪಾಡಾಯ್ತು ಎಂದು ಇದ್ದ ನೇತ್ರಾವತಿ, ಇಂದು ಬೆಳಗ್ಗೆ ಕೂಡ ಕೋಳಿಫಾರಂನಲ್ಲಿ ಕೆಲಸ ಮಾಡುವುದಕ್ಕೆ ಹೋಗುತ್ತಿದ್ದಳು. ಆದರೆ, ಕೆಲಸಕ್ಕೆ ಹೋಗುವ ವೇಳೆ ದಾರಿಯಲ್ಲಿ ಪೆಟ್ರೋ ಹಿಡಿದುಕೊಂಡು ಬಮದ ಯುವಕ ಮತ್ತೊಮ್ಮೆ ಕೊನೆಯದಾಗಿ ತನ್ನನ್ನು ಪ್ರೀತಿ ಮಾಡುವಂತೆ ಬೆದರಿಕೆ ಹಾಕಿದ್ದಾನೆ. ಆಗಲೂ ಒಪ್ಪದೇ ಇದ್ದಾಗ, ಆಕೆಯ ಮೇಲೆ ಪೆಟ್ರೋಲ್‌ ಸುರಿದುಕೊಂಡು ತಾನೂ ಪೆಟ್ರೋಲ್‌ ಸುರಿದುಕೊಂಡಿದ್ದಾನೆ. ನಂತರ, ಯುವತಿಗೆ ಬೆಂಕಿ ಹಚ್ಚಿಮ ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ.

ಯುವಕನ ಸ್ಥಿತಿ ಗಂಭೀರ: ಇನ್ನು ಯುವಕ- ಯುವತಿಯ ನಡುವೆ ನಡೆಯುತ್ತಿದ್ದ ವಾಗ್ವಾದವನ್ನು ದೂರದಿಂದಲೇ ನೋಡುತ್ತಿದ್ದ ಸ್ಥಳೀಯರು, ಬೆಂಕಿ ಹಚ್ಚಿದ ಘಟನೆ ನಡೆಯುತ್ತಿದ್ದಂತೆ ಹತ್ತಿರದಲ್ಲಿದ್ದ ನೀರನ್ನು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ, ಹುಡುಗಿ ಪೆಟ್ರೋಲ್‌ ಸುರಿಯುವಾಗ ಆಚೆ- ಈಚೆ ತಪ್ಪಿಸಿಕೊಂಡಿದ್ದರಿಂದ ಪೆಟ್ರೋಲ್‌ ಕಡಿಮೆ ಬಿದ್ದಿತ್ತು. ಹೀಗಾಗಿ, ಯುವತಿಗೆ ಶೇ.30-40 ಸುಟ್ಟ ಗಾಯಗಳಾಗುವೆ. ಆದರೆ, ಯುವಕ ಆಫ್ಜಲ್‌ ಮಾತ್ರ ತಾನೇ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡಿದ್ದರಿಂದ ಹೆಚ್ಚಿನ ಪೆಟ್ರೋಲ್‌ ಆವರಿಸಿತ್ತು. ಇನ್ನು ಬೆಂಕಿ ಹಚ್ಚಿದ ನಂತರ ಯುವಕನ ದೇಹ ಹೆಚ್ಚುಭಾಗ ಸುಟ್ಟಿದೆ. ಯುವತಿಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮುಳುಗಡೆ ನಗರ ಬಾಗಲಕೋಟೆಗೆ ಶಾಪ ವಿಮೋಚನೆ: ಚಂಡಿಗಡ ಮಾದರಿ ಅಭಿವೃದ್ಧಿಗೆ ಪಣ- ಗೋವಿಂದ ಕಾರಜೋಳ

ಬಡವರ ಮಕ್ಕಳು ದುಡಿದು ತಿನ್ನೋದೇ ತಪ್ಪಾ?: ಇನ್ನು ಬಾಗಲಕೋಟೆ ಜಿಲ್ಲೆಯ ಅಮೀನಗಡ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಗುಡೂರು ಗ್ರಾಮಕ್ಕೆ ತೆರಳಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ನೇತ್ರಾವತಿ ಅವರ ಮಾವ ತಿಮ್ಮಣ್ಣ ಅವರು, ಬಡವರ ಮಕ್ಕಳು ದುಡಿದು ತಿನ್ನುವುದೇ ತಪ್ಪಾ? ಕೆಲಸಕ್ಕೆಂದು ಹೋಗುವಾಗ ರಸ್ತೆಯಲ್ಲಿ ಅಡ್ಡಗಟ್ಟಿ ಹೀಗೆ ಮಾಡಿದರೆ ಜೀವನ ನಡೆಸುವುದಾದರೂ ಹೇಗೆ.? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ನೇತ್ರಾವತಿ ಮತ್ತು ಆಫ್ಜಲ್‌ ಇಬ್ಬರಿಗೂ ಮೊದಲಿನಿಂದ ಯಾವುದೇ ಪರಿಚಯ ಇರಲಿಲ್ಲ. ಆದರೆ, ಕಳೆದ 15 ದಿನಗಳಿಂದ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ ಆಫ್ಜಲ್‌, ಜಾತಿನಿಂದನೆಯನ್ನೂ ಮಾಡಿದ್ದಾನೆ ಎಂದು ನೇತ್ರಾವತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.