ಪುತ್ತೂರು: ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು
ಪುತ್ತೂರು ತಾಲೂಕಿನ ಕಟ್ಟತ್ತಾರು ಕಡ್ಯಾಣ ನಿವಾಸಿ ಅಬ್ದುಲ್ ನಾಸಿರ್ ಮೃತ ಯುವಕ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಲೈವ್ ವಿಡಿಯೋ ಮಾಡಿ ನಾನು ಬೆಳ್ಳಾರೆ ಸಮೀಪದ ವ್ಯಕ್ತಿಯೊಬ್ಬರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು ಅವರು, ಅವರ ಅಣ್ಣ ಹಾಗೂ ಅಣ್ಣನ ಮಕ್ಕಳು ಮತ್ತು ಇನ್ನೊಬ್ಬರು ಸೇರಿಕೊಂಡು ನನಗೆ ಹೊಡೆದಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದ.

ಪುತ್ತೂರು(ಆ.28): ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಆ.22ರಂದು ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡುತ್ತಿರುವುದಾಗಿ ಹೇಳಿಕೊಂಡು ವಿಷ ಸೇವಿಸಿ ಅಸ್ವಸ್ಥನಾಗಿದ್ದ ಯುವಕನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾನೆ.
ಪುತ್ತೂರು ತಾಲೂಕಿನ ಕಟ್ಟತ್ತಾರು ಕಡ್ಯಾಣ ನಿವಾಸಿ ಅಬ್ದುಲ್ ನಾಸಿರ್(27) ಮೃತ ಯುವಕ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಲೈವ್ ವಿಡಿಯೋ ಮಾಡಿ ನಾನು ಬೆಳ್ಳಾರೆ ಸಮೀಪದ ವ್ಯಕ್ತಿಯೊಬ್ಬರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು ಅವರು, ಅವರ ಅಣ್ಣ ಹಾಗೂ ಅಣ್ಣನ ಮಕ್ಕಳು ಮತ್ತು ಇನ್ನೊಬ್ಬರು ಸೇರಿಕೊಂಡು ನನಗೆ ಹೊಡೆದಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದ. ವಿಷ ಕುಡಿದಿದ್ದ ಈತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಂಗಳೂರು: ಮುಸ್ಲಿಂ ವಿದ್ಯಾರ್ಥಿ ಮೇಲೆ ನೈತಿಕ ಪೊಲೀಸ್ ಗಿರಿ: ಎಸ್ಡಿಪಿಐ ಮುಖಂಡನ ಪುತ್ರ ಭಾಗಿ?
ಹಲ್ಲೆ ನಡೆಸಿದವರು ಎಂದು ಹೆಸರಿಸಲಾಗಿದ್ದ ವ್ಯಕ್ತಿ ಜೊತೆ ಕಾರಿನಲ್ಲಿ ಸಾಗುತ್ತಿರುವಾಗಲೇ ಈ ವಿಡಿಯೋ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಬಳಿಕದ ಬೆಳವಣಿಗೆಯಲ್ಲಿ ಅಬ್ದುಲ್ ನಾಸಿರ್ ಪುತ್ತೂರಿನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ತೀವ್ರ ಅಸ್ವಸ್ಥರಾಗಿದ್ದ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.